ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಮಿತ್ರಗೆ ಫಾಲ್ಕೆ ಗೌರವ

Last Updated 3 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಸಿನಿಮಾ ಕ್ಷೇತ್ರದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಬಂಗಾಳಿಯ ಖ್ಯಾತ ನಟ ಸೌಮಿತ್ರ ಚಟರ್ಜಿ ಅವರಿಗೆ ನೀಡಿ ಗೌರವಿಸಿದರು.
59ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಉಪರಾಷ್ಟ್ರಪತಿ ಅವರು ಇತರ ಪ್ರಶಸ್ತಿ ವಿಜೇತರಿಗೂ ಫಲಕಗಳನ್ನು ನೀಡಿ ಗೌರವಿಸಿದರು.

ಸೌಮಿತ್ರ ಅವರಿಗೆ ಫಾಲ್ಕೆ ಪ್ರಶಸ್ತಿಯ ಗೌರವ ಸಂದಾಗ ನೆರೆದಿದ್ದ ಜನರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸೌಮಿತ್ರ ಚಟರ್ಜಿ ಅವರು, ` ನನ್ನ ಕೆಲಸದ ಬಗ್ಗೆ ಯಾವಾಗಲೂ ನನಗೆ ಅನುಮಾನವಿರುತ್ತಿತ್ತು ಮತ್ತು ಮನೋರಂಜನೆ ವ್ಯವಹಾರ ಯೋಗ್ಯವಾದುದಲ್ಲ ಎಂಬ ಭಾವನೆಯೂ ಇತ್ತು~ ಎಂದರು.

ಅವರು ಖ್ಯಾತ ನಿರ್ದೇಶಕ ಸತ್ಯಜಿತ್ ರೇ  ಅವರ `ಚಾರುಲತಾ~, ಘರ್ ಬೈರೆ~, `ದೇವಿ~ ಮತ್ತು ಅರ್ನೆಯರ್ ದಿನ್ ರಾತ್~ ಚಿತ್ರಗಳಲ್ಲಿ ನಟಿಸಿದ್ದರು. ಈ ಚಿತ್ರಗಳ ಮೂಲಕ ರೇ ಮತ್ತು ಚಟರ್ಜಿ ಅವರು ಅಪೂರ್ವ ನಟ-ನಿರ್ದೇಶಕ ಜೋಡಿಯಾಗಿ ಖ್ಯಾತಿ ಗಳಿಸಿದ್ದರು.

`ಬ್ಯಾರಿ~ಗೆ ಪ್ರಶಸ್ತಿ : ಉಮೇಶ್ ಕುಲಕರ್ಣಿ ನಿರ್ದೇಶನದ ಮರಾಠಿ ಚಿತ್ರ `ದೇವಳ್ ಮತ್ತು ಬ್ಯಾರಿ~ ಚಿತ್ರವು ಸ್ವರ್ಣ  ಕಮಲ ಮತ್ತು 2.5 ಲಕ್ಷ ರೂಪಾಯಿಗಳ ನಗದು ಪುರಸ್ಕಾರ ಪಡೆದಿದೆ. ದೇವಳ್ ಚಿತ್ರದ ನಾಯಕ ನಟ ಗಿರೀಶ್ ಕುಲಕರ್ಣಿ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಸಂಭಾಷಣೆಕಾರ ಪ್ರಶಸ್ತಿ ಪಡೆದುಕೊಂಡರು.

`ಡಿ ಡರ್ಟಿ ಪಿಕ್ಚರ್~ನ ನಟನೆಗಾಗಿ ವಿದ್ಯಾ ಬಾಲನ್ ಅವರು ಅತ್ಯುತ್ತಮ ನಟಿ ಪ್ರಸಸ್ತಿ ಪಡೆದುಕೊಂಡರು. ಅತ್ಯುತ್ತಮ ನಟ ಮತ್ತು ನಟಿಗೆ ರಜತ ಕಮಲ ಮತ್ತು 50 ಸಾವಿರ ರೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಪಂಜಾಬ್‌ನ `ಅನ್ಹೆ ಘೌರೆ ದಾ ದನ್~ ಚಿತ್ರದ ನಿರ್ದೇಶಕ ಗುರುವಿಂದರ್ ಸಿಂಗ್ ಅವರಿಗೆ ಸ್ವರ್ಣ ಕಮಲ ಮತ್ತು 2.5 ಲಕ್ಷ ನಗದು ಪುರಸ್ಕಾರ ನೀಡಲಾಯಿತು. ಇದೇ ಚಿತ್ರಕ್ಕೆ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಮತ್ತು ಅತ್ಯುತ್ತಮ ಪಂಜಾಬಿ ಚಿತ್ರ ಪ್ರಸಸ್ತಿ ದೊರಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT