ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರಶಕ್ತಿ ಚಾಲಿತ ಎಟಿಎಂಯಂತ್ರ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್):  ದೇಶದ ಗ್ರಾಮೀಣ ಭಾಗಗಳಲ್ಲಿ ಸೌರ ಶಕ್ತಿ ಚಾಲಿತ `ಎಟಿಎಂ~ ಯಂತ್ರಗಳನ್ನು ಸ್ಥಾಪಿಸುವ ಕುರಿತು ಕಂಪೆನಿಯೊಂದು ಸಮಗ್ರ ಯೋಜನೆ ರೂಪಿಸಿದೆ.

ಈ ಎಟಿಎಂ ಯಂತ್ರಗಳಿಗೆ `ಗ್ರಾಮ್ ಟೆಲ್ಲರ್~ ಎಂದು ಹೆಸರಿಡಲಾಗಿದ್ದು, ಭಾರತೀಯ ಸ್ಟೇಟ್ ಬ್ಯಾಂಕ್‌ಗೆ (ಎಸ್‌ಬಿಐ) ಈಗಾಗಲೇ ಇಂತಹ 400 ಪ್ರಾಯೋಗಿಕ ಯಂತ್ರಗಳನ್ನು ಚೆನ್ನೈ ಮೂಲದ `ವೊರ್ಟೆಕ್ಸ್ ಎಂಜಿನಿಯರಿಂಗ್~ ಕಂಪೆನಿ ನಿರ್ಮಿಸಿಕೊಟ್ಟಿದೆ. `ಎಸ್‌ಬಿಐ~ ಇಂಧನ ಉಳಿತಾಯ ಯೋಜನೆಯಡಿ ಈ  ಸೌರಶಕ್ತಿ ಚಾಲಿತ `ಎಟಿಎಂ~ ಯಂತ್ರಗಳನ್ನು ದೇಶದಾದ್ಯಂತ ಜಿಲ್ಲಾ ಕೇಂದ್ರಗಳಿಂದ 50 ಕಿ. ಮೀ ದೂರದಲ್ಲಿರುವ ಗ್ರಾಮೀಣ ಭಾಗಗಳಲ್ಲಿ ಸ್ಥಾಪಿಸಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. 

ಚೆನ್ನೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ-ಎಂ) ಹಳೆಯ ವಿದ್ಯಾರ್ಥಿಗಳಾದ ವಿಜಯ್ ಬಾಬು ಮತ್ತು ಲಕ್ಷ್ಮಿನಾರಾಯಣ ಕಣ್ಣನ್ ಅವರು  `ಗ್ರಾಮ್ ಟೆಲ್ಲರ್~ ಯಂತ್ರದ ರೂವಾರಿಗಳು. ವಿದ್ಯುತ್ ವ್ಯತ್ಯಯ ಇರುವ ಗ್ರಾಮೀಣ ಪ್ರದೇಶಗಳಿಗೆ ಈ `ಎಟಿಎಂ~ ಯಂತ್ರಗಳು ಅತ್ಯುಪಯುಕ್ತ ಎನ್ನುವ ಅಭಿಪ್ರಾಯ ಇವರದು. `ಎಟಿಎಂ~ ಹವಾನಿಯಂತ್ರಿತ ವ್ಯವಸ್ಥೆಗೆ ತಗುಲುವ ಶೇ 90ರಷ್ಟು ವೆಚ್ಚವನ್ನು (ವಾರ್ಷಿಕ ಅಂದಾಜು ರೂ1.4 ಲಕ್ಷ) ಈ ಯಂತ್ರ ಉಳಿಸುತ್ತದೆ.       ಸಾಮಾನ್ಯ `ಎಟಿಎಂ~ ಯಂತ್ರದ ಬೆಲೆ ರೂ5ರಿಂದ ರೂ6 ಲಕ್ಷದಷ್ಟಿದ್ದರೆ, `ಗಾಮ್ ಟೆಲ್ಲರ್~ನ ಬೆಲೆ ರೂ 3.5 ಲಕ್ಷ. ನಿರ್ವಹಣಾ ವೆಚ್ಚವೂ ಅಗ್ಗ ಎನ್ನುತ್ತಾರೆ ಬಾಬು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT