ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರಶಕ್ತಿ ಚಾಲಿತ ಯುಪಿಎಸ್!

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರು: ನಗರದ ಶ್ರೀ ಇನ್ನೊವೇಶನ್ಸ್ ಸೌರಶಕ್ತಿ ಚಾಲಿತ ಯುಪಿಎಸ್‌ನ್ನು ಅಭಿವೃದ್ಧಿ ಪಡಿಸಿದ್ದು, ಇದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಈಗಾಗಲೇ ಈ ಉಪಕರಣವು ಮೈಸೂರು, ಮಂಡ್ಯ ಹಾಗೂ ಇತರೆ ನಗರಗಳ ಮನೆಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ದಿನದ 24 ಗಂಟೆ ವಿದ್ಯುತ್ ಕಡಿತವಿದ್ದರೂ ಮನೆಯ ಬಲ್ಬ್‌ಗಳು, ಫ್ಯಾನ್, ಟಿ.ವಿ, ಮಿಕ್ಸಿ ಮುಂತಾದ ವಿದ್ಯುತ್ ಅವಲಂಬಿತ ವಸ್ತುಗಳನ್ನು ಬಳಸಬಹುದಾಗಿದೆ. ವಿದ್ಯುತ್ ಪೂರೈಕೆಯ ಪ್ರಮಾಣಕ್ಕೆ ತಕ್ಕಂತೆ ಇವುಗಳ ಬೆಲೆ ಇದೆ. ವಿದ್ಯುತ್ ಕಡಿತ ಇಲ್ಲದಿರುವಾಗ ಸಹ ಇದನ್ನು ಬಳಸಿದರೆ ವಿದ್ಯುತ್ ಹಾಗೂ ಹಣದ ಉಳಿತಾಯ ಮಾಡಬಹುದಾಗಿದೆ.

ಕಳೆದ 15 ದಿನಗಳಿಂದ ರಾಜ್ಯದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ನಿರಂತರವಾಗಿದೆ. ಇಂತಹ ಸಂದರ್ಭದಲ್ಲಿ ಗೃಹಿಣಿಯರು, ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳು ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕಾಗಿ ಯುಪಿಎಸ್ ಇಲ್ಲವೇ ಇತರೆ ಶಕ್ತಿ ಮೂಲಗಳನ್ನು ಅನಿವಾರ್ಯವಾಗಿ ಆಶ್ರಯಿಸಬೇಕಾಗಿದೆ. ಜನರೇಟರ್ ಬಳಸಿದರೆ ಪೆಟ್ರೋಲ್, ಡೀಸೆಲ್ ಇಲ್ಲವೇ ಸೀಮೆಎಣ್ಣೆಗೆ ಹಣ ತೆರಬೇಕು. ಹೊಗೆ, ಶಬ್ದ ಹಾಗೂ ಶಾಖದಂತಹ ಸಮಸ್ಯೆಗಳ್ನು ಅನುಭವಿಸಬೇಕಾಗುತ್ತದೆ.

ಇಷ್ಟೇ ಅಲ್ಲದೆ ಯುಪಿಎಸ್ ಅಳವಡಿಸಿದರೆ ಬ್ಯಾಟರಿ ಚಾರ್ಜ್‌ಗೆ ವಿದ್ಯುತ್ ಅಗತ್ಯ. ಒಂದು ವೇಳೆ ವಿದ್ಯುತ್ ಇಲ್ಲದಿದ್ದರೆ ಬ್ಯಾಟರಿ ಚಾರ್ಜ್ ಆಗುವುದಿಲ್ಲ. ಇಂತಹ ಅಸಹಾಯಕ ಸ್ಥಿತಿಯನ್ನು ಅರಿತ ಶ್ರೀ ಇನ್ನೋವೇಶನ್ಸ್ ಸಂಸ್ಥೆಯ ಕೆ.ಎಸ್.ಆನಂದ್‌ಕುಮಾರ್ ಸೌರಶಕ್ತಿ ಚಾಲಿತ ಯುಪಿಎಸ್ ರೂಪಿಸಿದ್ದಾರೆ.

ಇವಿಷ್ಟು ಬೇಕು: 35 ವಾಟ್ ಸೌರಶಕ್ತಿಯನ್ನು ಪಡೆಯಲು 1 ಸೌರ ವಿದ್ಯುತ್ ಫಲಕ (ಪ್ಯಾನಲ್), ಚಾರ್ಜ್ ನಿಯಂತ್ರಣ ಉಪಕರಣ, ಯುಪಿಎಸ್, ಕೇಬಲ್ ಬೇಕು. ಇದರಿಂದ ಬರುವ ವಿದ್ಯುತ್‌ನಿಂದ 4 ಸಿಎಫ್‌ಎಲ್ ಬಲ್ಬ್, 1 ಫ್ಯಾನ್ ಬಳಸಬಹುದು. ಪ್ಯಾನಲ್ ಒಂದಕ್ಕೆ ಏಳರಿಂದ ಏಳೂವರೆ ಸಾವಿರ ಆಗುತ್ತದೆ. ಒಟ್ಟು 25 ಸಾವಿರ ರೂಪಾಯಿ ಖರ್ಚಾಗುತ್ತದೆ.

ಶ್ರೀ ಇನ್ನೋವೇಶನ್ಸ್‌ನ ಆನಂದ್‌ಕುಮಾರ್ ತಮ್ಮ ಮಳಿಗೆಗೂ ಸೌರಶಕ್ತಿ ಚಾಲಿತ 85 ವಿ.ಎ. ಯುಪಿಎಸ್ ಹಾಗೂ 5 ಪ್ಯಾನಲ್‌ಗಳನ್ನು ಅಳವಡಿಸಿದ್ದಾರೆ. ಇದರಿಂದ ಮಳಿಗೆಯಲ್ಲಿ ಮೂರು ಫ್ಯಾನ್‌ಗಳು, ಏಳು ಬಲ್ಬ್‌ಗಳು, ಟಿ.ವಿ, ಎರಡು ಮೆಟಲ್ ಕಟ್ಟರ್ ಮಿಷನ್, ಕಂಪ್ಯೂಟರ್, ಫ್ಯಾಕ್ಸ್ ಮಿಷನ್ ಬಳಸುತ್ತಿದ್ದಾರೆ. ಇಷ್ಟೇ ಸಾಮರ್ಥ್ಯದ ಯುಪಿಎಸ್‌ನಿಂದ ಮಿಕ್ಸಿ, 1 ಬಲ್ಬ  ಬಳಸಬಹುದು. ಇದಕ್ಕಾಗಿ 60 ಸಾವಿರ ರೂಪಾಯಿ ವೆಚ್ಚವಾಗುತ್ತದೆ.
~ಇದು ದುಬಾರಿ ಏನಲ್ಲ.

ಏಕೆಂದರೆ ನಗರದ ಬಹುತೇಕ ಮನೆಯಲ್ಲಿ ಯುಪಿಎಸ್ ಇದೆ. ಇದಕ್ಕೆ 16 ಸಾವಿರವಾಗುತ್ತದೆ. ಇದರ ಜೊತೆಗೆ ಇನ್ನೊಂದಿಷ್ಟು ಹಣ ಖರ್ಚು ಮಾಡಿದರೆ ಸೌರಶಕ್ತಿ ವಿದ್ಯುತ್ ಪಡೆಯಬಹುದು. ಒಮ್ಮೆಗೇ ಐದು ಪ್ಯಾನಲ್‌ಗಳನ್ನು ಅಳವಡಿಸಿಕೊಳ್ಳಬೇಕಾಗಿಲ್ಲ.  ತಮ್ಮ ಅನುಕೂಲಕ್ಕೆ ತಕ್ಕಂತೆ ಒಂದೊಂದೇ ಪ್ಯಾನಲ್ ಸೇರಿಸುತ್ತಾ ಹೋಗಬಹುದು~ ಎನ್ನುತ್ತಾರೆ ಅನಂದಕುಮಾರ್.

ತಾವೇ ಅಭಿವೃದ್ಧಿ ಪಡಿಸಿದರು:ಸೌರಶಕ್ತಿ ಉಪಕರಣಗಳ ಮಾರಾಟಗಾರರಾದ ಆನಂದಕುಮಾರ್ ಮೂರು ವರ್ಷಗಳ ಹಿಂದೆ ಸೌರಶಕ್ತಿ ಚಾಲಿತ ಯುಪಿಎಸ್‌ನ್ನು ಸ್ವತಃ  ಅಭಿವೃದ್ಧಿ ಪಡಿಸಿದರು. ಸೌರಶಕ್ತಿ ವಾಟರ್ ಹೀಟರ್ ಕೆಲಸ ಮಾಡುವ ಬಗೆಯನ್ನು ಅರಿತಿದ್ದ ಇವರು, ಹೊಸ ಯುಪಿಎಸ್ ಅಭಿವೃದ್ಧಿ ಪಡಿಸಲು ಸಾಧ್ಯವಾಯಿತು.

ಸೌರಶಕ್ತಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಬೆಂಗಳೂರಿನ ಸುರೇಶ್ ಇವರಿಗೆ ಮಾರ್ಗದರ್ಶನ ನೀಡಿದರು. ಮೊದಲಿಗೆ ತಮ್ಮ  ಅಂಗಡಿಯಲ್ಲಿಯೇ ಪ್ರಯೋಗ ಮಾಡಿ ಯಶಸ್ವಿಯಾದರು. ಬಳಿಕ ಇತರರು ಇದನ್ನು ಅನುಸರಿಸಿದರು.

~ಸೌರಶಕ್ತಿ ಚಾಲಿತ ಯುಪಿಎಸ್ ಬಳಸುವ ಮುನ್ನ ತಿಂಗಳಿಗೆ ರೂ.900 ವಿದ್ಯುತ್ ಬಿಲ್ ಬರುತ್ತಿತ್ತು. ಈಗ ರೂ.250 ಗೆ ಇಳಿದಿದೆ. ಇಷ್ಟೇ ಅಲ್ಲದೆ ನನಗೆ ಲೋಡ್ ಶೆಡ್ಡಿಂಗ್ ಆತಂಕವಿಲ್ಲ. ಮೈಸೂರಿನಲ್ಲಿ 300 ದಿನ ಉತ್ತಮವಾಗಿ ಬಿಸಿಲು ಇರುತ್ತದೆ. ಆದ್ದರಿಂದ ನಾನು ನೆಮ್ಮದಿಯಾಗಿ ವ್ಯಾಪಾರ ಮಾಡುತ್ತಿದ್ದೇನೆ~ ಎನ್ನುತ್ತಾರೆ ಆನಂದ್‌ಕುಮಾರ್. (ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2430480/6548902/4267468)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT