ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೂಕರ್: ಪಂಕಜ್‌ಗೆ ಜಯ

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಪುಣೆ: ಪಂಕಜ್ ಅಡ್ವಾಣಿ ಇಲ್ಲಿ ನಡೆಯುತ್ತಿರುವ 78ನೇ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಸತತ ಮೂರನೇ ಗೆಲುವು ಪಡೆದು ನಾಕೌಟ್ ಹಂತ ಪ್ರವೇಶಿಸುವುದನ್ನು ಖಚಿತಪಡಿಸಿಕೊಂಡಿದ್ದಾರೆ.

ಪಿವೈಸಿ ಹಿಂದು ಜಿಮ್ಖಾನಾ ಹಾಲ್‌ನಲ್ಲಿ ಬುಧವಾರ ನಡೆದ `ಎಫ್~ ಗುಂಪಿನ ಪಂದ್ಯದಲ್ಲಿ ಬೆಂಗಳೂರಿನ ಪಂಕಜ್ 71-15, 61-71, 15-68, 61-34, 92-5 ರಲ್ಲಿ ಮಹಾರಾಷ್ಟ್ರದ ನಿಖಿಲ್ ವಿರುದ್ಧ ಗೆಲುವು ಪಡೆದರು.

ಕರ್ನಾಟಕದ ಸಾಜನ್ ಬೋಪಣ್ಣ ದಿನದ ಮೊದಲ ಪಂದ್ಯದಲ್ಲಿ 2-3 ರಲ್ಲಿ ಅಮೀರ್ ಹುಸೇನ್ ಎದುರು ಸೋಲು ಅನುಭವಿಸಿದರೆ, ಆ ಬಳಿಕ 3-2 ರಲ್ಲಿ ಗುಜರಾತ್‌ನ ಭದ್ರೇಶ್ ಪಂಚಾಲ್ ಎದುರು ಗೆದ್ದರು. ಐ.ಎಚ್. ಮನುದೇವ್ ನಿರಾಸೆ ಅನುಭವಿಸಿದರು.

ಕಳೆದ ಬಾರಿಯ `ರನ್ನರ್ ಅಪ್~ ಅಲೋಕ್ ಕುಮಾರ್ 2-3 ರಲ್ಲಿ ದೆಹಲಿಯ ಪುಲಕಿತ್ ತುಕರಾಲ್ ಎದುರು ಪರಾಭವಗೊಂಡರು. ಕಮಲ್ ಚಾವ್ಲಾ, ಸೌರವ್ ಕೊಠಾರಿ ಮತ್ತು ಬ್ರಿಜೇಶ್ ದಮನಿ ಗೆಲುವಿನ ಮೂಲಕ ನಾಕೌಟ್ ಹಂತದಲ್ಲಿ ಸ್ಥಾನ ಖಚಿತಪಡಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT