ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೊಡೆನ್‌ಗೆ ಒಂದು ವರ್ಷ ರಷ್ಯಾ ಆಶ್ರಯ

Last Updated 1 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಮಾಸ್ಕೊ (ಎಎಫ್‌ಪಿ): ಅಂತರ್ಜಾಲದಲ್ಲಿ  ಹಲವು ರಹಸ್ಯಗಳನ್ನು ಬಹಿರಂಗಪಡಿಸುವ ಮೂಲಕ ಅಮೆರಿಕ ಸರ್ಕಾರ ತಲ್ಲಣಗೊಳ್ಳುವಂತೆ ಮಾಡಿದ ಅಮೆರಿಕ ಪ್ರಜೆ ಎಡ್ವರ್ಡ್ ಸ್ನೊಡೆನ್‌ಗೆ ರಷ್ಯಾ ಸರ್ಕಾರ ಒಂದು ವರ್ಷ ಆಶ್ರಯ ನೀಡಲು ನಿರ್ಧರಿಸಿದೆ.

ಒಬಾಮ ಆಡಳಿತದ ಕೆಂಗಣ್ಣಿಗೆ ಗುರಿಯಾಗಿ ಸುಮಾರು ಒಂದು ತಿಂಗಳ ಕಾಲ ನಿಗೂಢವಾಗಿ ನಾಪತ್ತೆಯಾಗಿದ್ದ ಸ್ನೊಡೆನ್ ಇದ್ದುದು ಮಾಸ್ಕೊ ವಿಮಾನ ನಿಲ್ದಾಣದಲ್ಲಿ. ಅಶ್ರಯ ನೀಡಲು ರಷ್ಯಾ ಇದೀಗ ಹಸಿರುನಿಶಾನೆ ತೋರಿದ್ದರಿಂದ ಸ್ನೊಡೆನ್ ವಿಮಾನ ನಿಲ್ದಾಣದಿಂದ ತೆರಳಿದ್ದಾರೆ ಎಂದು ಅವರ ವಕೀಲರು ಗುರುವಾರ ತಿಳಿಸಿದರು.

`ರಷ್ಯಾದಲ್ಲಿ ನೆಲೆಸಲು ಸ್ನೊಡೆನ್‌ಗೆ ತಾತ್ಕಾಲಿಕ ಅನುಮತಿ ದೊರಕಿರುವುದರಿಂದ ಅವರೀಗ ಷೆರೆಮೆಟೆವಿಯೊ ವಿಮಾನ ನಿಲ್ದಾಣದಿಂದ ಸಾಮಾನ್ಯ ಟ್ಯಾಕ್ಸಿಯಲ್ಲಿ ನಿರ್ಗಮಿಸಿದ್ದಾರೆ' ಎಂದು ವಕೀಲ ಅನತೊಲಿ ಕುಚೆರೆನಾ ತಿಳಿಸಿದರು.

`ಭದ್ರತಾ ಕಾರಣಗಳಿಂದಾಗಿ ಸ್ನೊಡೆನ್ ನೆಲೆಸುವ ಹೊಸ ಜಾಗದ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ. ಎಲ್ಲಿಗೆ ಹೋಗಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ' ಎಂದು ಕುಚೆರೆನಾ ಹೇಳಿದರು.

ಈ ನಡುವೆ ಚಾನೆಲ್ ಒಂದರ ಜತೆ ಮಾತನಾಡಿದ ಕುಚೆರೆನಾ, `ಅವರೀಗ ಸುರಕ್ಷಿತ ಜಾಗಕ್ಕೆ ತೆರಳಿದ್ದು ನಿಮಗೆ ಈ ಮಾಹಿತಿ ಗೊತ್ತಿರಬಹುದು' ಎಂದರು.
`ಸ್ನೊಡೆನ್ ಇಲ್ಲಿಂದ ನಿರ್ಗಮಿಸಿ ಎರಡು ಗಂಟೆಗಳಷ್ಟೇ ಆಯಿತು' ಎಂದು ವಿಮಾನ ನಿಲ್ದಾಣದ ವಕ್ತಾರೆ ಖಚಿತಪಡಿಸಿದರು.

ಅಮೆರಿಕದ ರಹಸ್ಯಗಳನ್ನು ಹಲವು ವೆಬ್‌ಸೈಟ್‌ಗಳ ಮೂಲಕ ಬಹಿರಂಗಗೊಳಿಸಿದ ಆರೋಪದ ಮೇಲೆ ಅಮೆರಿಕದ ಸೈನಿಕ ಬ್ರಾಡ್ಲೆ ಮ್ಯಾನಿಂಗ್ ಅಪರಾಧಿ ಎಂದು ತೀರ್ಪು ಹೊರಬಿದ್ದ ಎರಡು ದಿನಗಳ ಅವಧಿಯಲ್ಲಿ ರಷ್ಯಾ ಸ್ನೊಡೆನ್‌ಗೆ ಆಶ್ರಯ ನಿಡುವ ನಿರ್ಧಾರ ಪ್ರಕಟಿಸಿದೆ.

ಸ್ನೊಡೆನ್ ಬೆಂಬಲಿಸಿದ ವಿಕಿಲೀಕ್ಸ್ `ನಿಶ್ಚಿತವಾಗಿಯೂ ಎಡ್ವರ್ಡ್ ಸ್ನೊಡೆನ್‌ಗೆ ರಷ್ಯಾದಲ್ಲಿ ನಿರಾಶ್ರಿತ ಸ್ಥಾನ ಸಿಗಲಿದ್ದು ಶೀಘ್ರದಲ್ಲೇ ಅವರು ವಿಮಾನ ನಿಲ್ದಾಣ ತೊರೆಯುವರು' ಎಂದು ಟ್ವೀಟ್ ಮಾಡಿತ್ತು.

ರಷ್ಯಾದ ಈ ಕ್ರಮದಿಂದ ಅಮೆರಿಕ-ರಷ್ಯಾ ಬಾಂಧವ್ಯಕ್ಕೆ ಧಕ್ಕೆ ಬರುವ ಸಾಧ್ಯತೆಗಳನ್ನು ವಿಶ್ಲೇಷಿಸಲಾಗುತ್ತಿದೆ. ಆದರೆ ಇದರಿಂದ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧಗಳಿಗೆ ತೊಂದರೆಯಾಗದು ಎಂದು ಅಧ್ಯಕ್ಷ ಪುಟಿನ್ ಅವರ ವಿದೇಶಾಂಗ ನೀತಿ ಸಲಹೆಗಾರ ಯೂರಿ ಉಷಕೊವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT