ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನಕ್ಕೆ ನಿವೇಶನ ನೀಡಲು ಒತ್ತಾಯ

Last Updated 22 ಜುಲೈ 2013, 6:25 IST
ಅಕ್ಷರ ಗಾತ್ರ

ಕುಶಾಲನಗರ: ಮಾದಪಟ್ಟಣದಲ್ಲಿ ಭಾನುವಾರ ಕುಂದು ಕೊರತೆ ಚರ್ಚೆಗೆ ದಲಿತ ಸಂಪರ್ಕ ಸಭೆ ನಡೆಯಿತು. ಸಭೆಯಲ್ಲಿ ಮಾದಪಟ್ಟಣದ ನಾಗರಿಕರು ಭಾಗವಹಿಸಿ ಸಮಸ್ಯೆಗಳನ್ನು ಕುಶಾಲನಗರ ಠಾಣಾಧಿಕಾರಿ ಚಿಕ್ಕಸ್ವಾಮಿ ಅವರ ಗಮನಕ್ಕೆ ತಂದರು. ಅಂಬೇಡ್ಕರ್ ದಲಿತ ಸೇವಾ ಸಮಿತಿ ಅಧ್ಯಕ್ಷ ಶಿವಪ್ಪ ಮಾತನಾಡಿ, ಮಾದಾಪಟ್ಟಣದ ಸ್ಮಶಾನಕ್ಕೆ ಜಾಗದ ಸಮಸ್ಯೆ ಇದೆ. ತಮ್ಮ ಜನಾಂಗದವರು ನಿಧನರಾದರೆ ಸಂಸ್ಕಾರ ಮಾಡಲು ಜಾಗವಿಲ್ಲದಂತ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಇದಕ್ಕೆ ದನಿಗೂಡಿಸಿದ ಗ್ರಾಮದ ಇತರೆ ಮುಖಂಡರು, ಈವರೆಗೆ ಹೊಳೆಪಕ್ಕದಲ್ಲಿ ಶವಸಂಸ್ಕಾರ ಮಾಡ ಲಾಗುತಿತ್ತು. ಆದರೆ, ಮಳೆಗಾಲದಲ್ಲಿ ಹೊಳೆತುಂಬಿ ಹರಿಯುವುದರಿಂದ ಶವಸಂಸ್ಕಾರ ಮಾಡಲು ಸ್ಥಳವಿ ಇಲ್ಲದಂತಾಗಿದೆ ಎಂದರು.

ಠಾಣಾಧಿಕಾರಿ ಚಿಕ್ಕಸ್ವಾಮಿ ಮಾತನಾಡಿ, ಪೈಸಾರಿ ಜಾಗವನ್ನು ಪತ್ತೆ ಮಾಡಿ, ಅವುಗಳಲ್ಲಿ ಒಂದು ಜಾಗವನ್ನು ಸರ್ಕಾರದಿಂದ ಮಂಜೂರು ಮಾಡಿಸ ಲಾಗುತ್ತದೆ ಎಂದು ಭರವಸೆ ನೀಡಿದರು. ಅಲ್ಲದೆ, ಅಕ್ರಮ ಮದ್ಯ ಮತ್ತು ಗಾಂಜಾ ಮಾರಾಟದ ವಿಷಯ ಗಮನಕ್ಕೆ ಬಂದಿವೆ. ಇವುಗಳ ನಿಯಂತ್ರಿಸಲು ಸ್ಥಳೀಯರು ಸಹಕರಿಸಬೇಕು ಎಂದರು.

ಪಟ್ಟಣದಲ್ಲಿ ಸರ್ವೆ ನಂ.57ರಲ್ಲಿ 6 ಎಕರೆ, ಸರ್ವೆ ನಂ.7ರಲ್ಲಿ 2.24 ಎಕರೆ ಮತ್ತು ಸರ್ವೆ ನಂ.6ರಲ್ಲಿ 2.64 ಎಕರೆ ಪೈಸಾರಿ ಜಾಗವಿದೆ. ಇದನ್ನು ಹಣಬಲ  ಮತ್ತು ತೋಳ್ಬಲ ಉಳ್ಳವರು ಅತಿಕ್ರಮಿಸಿಕೊಂಡಿದ್ದಾರೆ. ಇದನ್ನು ತೆರವುಗೊಳಿಸಿ ಬಡವರಿಗೆ ಹಂಚಬೇಕು. ಸ್ವಲ್ಪ ಜಾಗವನ್ನು ಸಶ್ಮಾನಕ್ಕೆ ನೀಡಲು ಕ್ರಮಕೈಗೊಳ್ಳಲು ಒತ್ತಾಯಿಸಲು ತೀರ್ಮಾನಿಸಲಾಯಿತು.

ಅಂಬೇಡ್ಕರ್ ದಲಿತ ಸೇವಾ ಸಮಿತಿ ತಾಲ್ಲೂಕು ಮುಖಂಡ ದಾಮೋದರ್ ಮಾತನಾಡಿ, ಸಶ್ಮಾನಕ್ಕೆ ಜಾಗ ನೀಡುವಂತೆ ಇದುವರೆಗೆ ತಹಶೀಲ್ದಾರ್ ಅವರಿಗೆ ಮನವಿ ಮಾಡಿದರೂ ಪ್ರಯೋಜವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಂಬೇಡ್ಕರ್ ದಲಿತ ಸೇವಾ ಸಮಿತಿ ಮುಖಂಡರಾದ ಮಂಜು, ವೆಂಕಟೇಶ್, ಜಗದೀಶ್, ಮಹದೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT