ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರ್ಣಮಂದಿರದಲ್ಲಿ ಸ್ಮಾರಕ ನಿರ್ಮಾಣ ಸರ್ಕಾರದ ಹಸ್ತಕ್ಷೇಪವಿಲ್ಲ: ಸ್ಪಷ್ಟನೆ

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಮಡಿದ ಸಿಖ್ಖರ ಸ್ಮಾರಕಗಳನ್ನು ಸ್ವರ್ಣ ಮಂದಿರದಲ್ಲಿ ನಿರ್ಮಿಸುವ ಎಸ್‌ಜಿಪಿಸಿ ನಿರ್ಧಾರದಲ್ಲಿ ಕೇಂದ್ರ ಸರ್ಕಾರ ಮಧ್ಯ  ಪ್ರವೇಶಿಸುವುದಿಲ್ಲ ಎಂದು ಗೃಹ ಸಚಿವ ಸುಶಿಲ್ ಕುಮಾರ್ ಶಿಂಧೆ ಅವರು ಸ್ಪಷ್ಟಪಡಿಸಿದ್ದಾರೆ.

ಸಂಘಟನೆಗಳಿಗೆ ಸಂವಿಧಾನಬದ್ಧವಾಗಿ ನೀಡಲಾಗಿರುವ ಹಕ್ಕುಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದಿರುವ ಅವರು, ಸ್ವರ್ಣ ಮಂದಿರದಲ್ಲಿ ಸ್ಮಾರಕಗಳನ್ನು ನಿರ್ಮಿಸುವ ವಿಚಾರ ಸರ್ಕಾರಕ್ಕೆ ಗೊತ್ತಿದೆ ಎಂದಿದ್ದಾರೆ.

ಭಯೋತ್ಪಾದನೆಯಿಂದಾಗಿ ಭಾರತ ಜನರನ್ನು ಮತ್ತು ಹಣವನ್ನು ಕಳೆದುಕೊಂಡಿರುವುದರಿಂದ ಪ್ರತಿಯೊಬ್ಬರು ಈ ವಿಚಾರದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎಸ್‌ಜಿಪಿಸಿ ಸ್ಮಾರಕ ನಿರ್ಮಿಸಿಕೊಳ್ಳುವುದಾದರೆ ನಿರ್ಮಿಸಿಕೊಳ್ಳಲಿ. ಆದರೆ ದೇಶ ಬಹಳ ವರ್ಷಗಳ ಕಾಲ ಭಯೋತ್ಪಾದನೆಯಿಂದ ಸಾಕಷ್ಟು ನಷ್ಟ ಅನುಭವಿಸಿರುವುದರಿಂದ ಅವರು (ಸಿಖ್ಖರು) ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ.

ಸ್ಮಾರಕ ನಿರ್ಮಿಸುವ ಬಗ್ಗೆ ಕೇಂದ್ರ ಸರ್ಕಾರ ಆಕ್ಷೇಪ ಮಾಡುವುದಿಲ್ಲವೆ ಎಂದು ಕೇಳಿದಾಗ, `ಸಂವಿಧಾನವು ಸಂಘಟನೆಗಳಿಗೆ ಕೆಲವು ಹಕ್ಕುಗಳನ್ನು ನೀಡಿದೆ, ಈ ಸಂಘಟನೆಗಳು ಮಾಡಿದ್ದು ತಪ್ಪು ಎಂದಾದರೆ ಯಾರಾದರೂ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ~ ಎಂದರು.

 ಪಂಜಾಬ್‌ದಲ್ಲಿ ಮತ್ತೆ ಉಗ್ರಗಾಮಿ ಚಟುವಟಿಕೆ ಆರಂಭಿಸುವ ವರದಿಗಳ ಬಗ್ಗೆ ಕೇಳಿದಾಗ, `ಪಂಜಾಬ್ ಮತ್ತು ವಿದೇಶಗಳಲ್ಲಿ ಕೆಲವು ಸಿಖ್ಖರು ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆ~ ಎಂದು ಹೇಳಿದ್ದಾರೆ.

ನಿವೃತ್ತ ಲೆ.ಜ. ಬ್ರಾರ್ ಮೇಲಿನ ಹಲ್ಲೆಯ ಬಗ್ಗೆ ಮಾಹಿತಿ ನೀಡಿದ ಸಚಿವರು, ಬ್ರಾರ್ ಅವರು ಲಂಡನ್‌ಗೆ ಖಾಸಗಿ ಭೇಟಿ ನೀಡಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲ ಎಂದು ತಿಳಿಸಿದ್ದಾರೆ. ಬ್ರಾರ್ ಅವರಿಗೆ ನೀಡಲಾಗಿರುವ ಭದ್ರತೆಯನ್ನು ಪುನರ್ ಪರಿಶೀಲಿಸಲಾಗುತ್ತದೆಯೇ ಎಂದು ಕೇಳಿದಾಗ, `ಕಾಲಕಾಲಕ್ಕೆ ಪೊಲೀಸರು ಭದ್ರತೆಯನ್ನು ಪರಾಮರ್ಶಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಉಗ್ರರ ಮಕ್ಕಳಿಗೆ ಎಸ್‌ಜಿಪಿಸಿ ಗೌರವ!
ಅಮೃತಸರ (ಐಎಎನ್‌ಎಸ್):
ಸ್ವರ್ಣ ಮಂದಿರದಲ್ಲಿ ಬ್ಲೂಸ್ಟಾರ್ ಕಾರ್ಯಾಚರಣೆ ನಡೆಸಿದ ಎರಡು ವರ್ಷಗಳ ನಂತರ ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಎ. ಎಸ್. ವೈದ್ಯ ಅವರನ್ನು ಹತ್ಯೆ ಮಾಡಿದ್ದ ಇಬ್ಬರು ಸಿಖ್ ಭಯೋತ್ಪಾದಕರ ಮಕ್ಕಳನ್ನು ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್‌ಪಿಸಿ) ಗೌರವಿಸುವ ಮೂಲಕ ವಿವಾದಕ್ಕೆ ಒಳಗಾಗಿದೆ.

ಸ್ವರ್ಣ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯ ಅವರನ್ನು ಹತ್ಯೆ ಮಾಡಿದ್ದ ಭಯೋತ್ಪಾದಕರನ್ನು ಶ್ಲಾಘಿಸಲಾಗಿದೆ. ಇದಲ್ಲದೆ ಈ ಭಯೋತ್ಪಾದಕರ ಹೆಸರಿನಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ಖಾಲಿಸ್ತಾನ ಕಮಾಂಡೋಗಳಾಗಿದ್ದ ಹರೀಂದರ್ ಸಿಂಗ್ ಜಿಂದಾ ಮತ್ತು ಸುಖದೇವ್ ಸಿಂಗ್ ಸುಖಾ ಜನರಲ್ ವೈದ್ಯ ಅವರನ್ನು 1986ರರಲ್ಲಿ  ಹತ್ಯೆ ಮಾಡಿದ್ದರು.

ಈ ಭಯೋತ್ಪಾದಕರ ವಾರ್ಷಿಕ ತಿಥಿ ಸಂದರ್ಭದಲ್ಲಿ ಅವರ ಮಕ್ಕಳನ್ನು ಎಸ್‌ಜಿಪಿಸಿ ಗೌರವಿಸಿದೆ. ಈ ಇಬ್ಬರು ಭಯೋತ್ಪಾದಕರಿಗೆ ನಂತರ ಮರಣದಂಡನೆ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT