ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಹೋರಾಟ­ಗಾರ ಗೋವಿಂದಸ್ವಾಮಿ ನಾಯ್ಡು ನಿಧನ

Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹಿರಿಯೂರು: ಸ್ವಾತಂತ್ರ್ಯ ಹೋರಾಟ­ಗಾರ, ಮಕ್ಕಳ ಪ್ರೀತಿಯ ಚಾಕೊಲೇಟ್ ಅಜ್ಜ, ಶತಾಯುಷಿ ಗೋವಿಂದಸ್ವಾಮಿ ನಾಯ್ಡು (103) ಶುಕ್ರವಾರ ಹಿರಿಯೂರಿನಲ್ಲಿ ನಿಧನರಾದರು.

ಅವರ ಪತ್ನಿ ಗಂಗಮ್ಮ, ಹಿರಿಯ ಪುತ್ರ ಈ ಹಿಂದೆಯೇ ಮೃತಪಟ್ಟಿದ್ದರು. ಕಿರಿಯ ಪುತ್ರ ಕಣ್ಮರೆಯಾಗಿದ್ದು, ಪತ್ತೆಯಾಗಿಲ್ಲ. 1909ರಲ್ಲಿ ಜನಿಸಿದ ನಾಯ್ಡು 19­38ರಲ್ಲಿ ಸ್ವಾತಂತ್ರ್ಯ ಚಳವಳಿಗೆ ಧುಮು­ಕಿದರು. 1939ರಲ್ಲಿ ಕಾಟನಾ­ಯಕ­ನಹಳ್ಳಿ ಅರಣ್ಯ ಸತ್ಯಾಗ್ರಹ­ದಲ್ಲಿ ನೂರಾರು ಈಚಲು ಮರ ಕತ್ತರಿಸಿ  ಗಾಂಧೀಜಿಗೆ ಜೈಕಾರ ಹಾಕಿದ್ದಕ್ಕೆ ಜೈಲಿಗೆ ಹಾಕಲಾಗಿತ್ತು. 1942 ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂ ಡಿದ್ದರು.

ಸಂಬಂಧಿಗಳು ಇಲ್ಲದ ಕಾರಣ ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ವಿ. ಮಾಧವ ಅವರ ಮನೆಯಲ್ಲಿ ನೆಲೆಸಿದ್ದ ನಾಯ್ಡು ಅವರು, ಮಕ್ಕಳಿಗೆ ಪ್ರೀತಿಯ ಚಾಕೊಲೇಟ್ ತಾತ ಆಗಿದ್ದರು.

ಖಾದಿ ಜುಬ್ಬದ ಜೇಬಿನ ತುಂಬಾ ಸಿಹಿ ಇಟ್ಟು­ಕೊಂಡು ರಸ್ತೆಯಲ್ಲಿ ಸಿಗುವ ಮಕ್ಕಳಿಗೆ ಹಂಚುತ್ತಿದ್ದರು. ನಂಜಯ್ಯನಕೊಟ್ಟಿಗೆ ಸಮೀಪದ ಜಮೀನಿನಲ್ಲಿ ಶುಕ್ರವಾರ ಸಂಜೆ ಅಂತ್ಯಕ್ರಿಯೆ ನಡೆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT