ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿಗಳ ನಿಯಂತ್ರಣಕ್ಕೆ ಗಡುವು

Last Updated 16 ಸೆಪ್ಟೆಂಬರ್ 2011, 5:00 IST
ಅಕ್ಷರ ಗಾತ್ರ

ಹಾವೇರಿ: `ನಗರದಲ್ಲಿ ಹೆಚ್ಚಾಗಿರುವ ಹಂದಿಗಳ ಹಾವಳಿ ನಿಯಂತ್ರಣಕ್ಕೆ ಬರುವ ಸೋಮವಾರದೊಳಗೆ ಹಂದಿಗಳ ಹಿಡಿಯುವ ಕಾರ್ಯಾಚರಣೆ ಆರಂಭಿಸಬೇಕು. ಇಲ್ಲವಾದರೆ, ನಗರ ಸಭೆ ಎದುರು ಪ್ರತಿಭಟನೆ ನಡೆಸ ಲಾಗುವುದು~ ಎಂದು ನಗರಸಭೆ ವಿರೋಧ ಮತ್ತು ಆಡಳಿತ ಪಕ್ಷದ ಕೆಲ ಸದಸ್ಯರು ನಗರಸಭೆ ಆಯುಕ್ತರಿಗೆ ಎಚ್ಚರಿಕೆ ನೀಡಿದರು.

ನಗರದಲ್ಲಿ ತಾಂಡವವಾಡುತ್ತಿರುವ ಸಮಸ್ಯೆಗಳು ಕುರಿತು ನಗರಸಭೆ ಆಯುಕ್ತರೊಂದಿಗೆ ಬುಧವಾರ ಸಭೆ ನಡೆಸಿದ ನಗರಸಭೆ ಸದಸ್ಯರು, ನಗರ ದಲ್ಲಿ ನಗರಸಭೆ ಇದೆಯೋ ಇಲ್ಲವೋ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುವಂತಾಗಿದೆ. ನಗರದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.

ಎಲ್ಲಿ ನೋಡಿದರಲ್ಲಿ ಹಂದಿಗಳು ಹಾಗೂ ಕಸದ ಗುಡ್ಡೆಗಳೇ ಕಾಣಿಸುತ್ತಿದ್ದು, ನಗರದ ಸೌಂದರ್ಯವನ್ನು ಹದಗೆಡಿ ಸಿವೆ. ಆದರೂ ನಗರಸಭೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿಗಳು ನಗರದಲ್ಲಿನ ಹಂದಿಗಳನ್ನು ಬೇರೆಡೆಗೆ ಸಾಗಿಸುವಂತೆ ಆದೇಶ ನಿಡಿ ಮೂರು ವರ್ಷ ಕಳೆ ದರೂ, ಈವರೆಗೆ ಆ ಕಾರ್ಯವಾಗಿಲ್ಲ. ಹಂದಿಗಳ ಮಾಲೀಕರಿಗೆ ನೋಟಿಸ್ ನೀಡಿ ಹಂದಿಗಳನ್ನು ಬೇರೆಡೆ ಸಾಗಿಸಲು ಸೂಚನೆ ನೀಡಬೇಕು. ಹಂದಿಗಳ ಮಾಲೀಕರು ಅದಕ್ಕೆ ಸ್ಪಂದಿಸದಿದ್ದರೆ, ಸೋಮವಾರದಿಂದ ಹಂದಿಗಳನ್ನು ಊರಿನಿಂದ ಹೊರಗೆ ಹಾಕುವ ಕೆಲಸ ವನ್ನು ಆರಂಭಿಸಬೇಕು ಒತ್ತಾಯಿ ಸಿದರು.

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ನದಿಗಳಲ್ಲಿ ಸಾಕಷ್ಟು ನೀರಿದ್ದರೂ, ಸಮರ್ಪಕ ಕುಡಿಯುವ ನೀರು ಏಕೆ ಪೂರೈಸುತ್ತಿಲ್ಲ. ಮಳೆಗಾಲದಲ್ಲಿಯೇ ಈ ಸಮಸ್ಯೆ ಯಾದರೆ, ಇನ್ನೂ ಬೇಸಿಗೆಯಲ್ಲಿ ಹೇಗೆ ಎಂದು ಪ್ರಶ್ನಿಸಿದ ಸದಸ್ಯರು, ಈ ತಿಂಗಳೊಳಗೆ ನಗರದ ನೀರಿನ ಸಮಸ್ಯೆಯನ್ನು ಬಗೆ ಹರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರಸ್ತೆ ದುರಸ್ತಿ ಮಾಡಿ: ಒಳಚರಂಡಿ ಕಾಮಗಾರಿಯಿಂದ ನಗರದ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿವೆ. ಇಲ್ಲಿವರೆಗೆ ಮಳೆಗಾಲದ ನೆಪವೊಡ್ಡಿ ರಸ್ತೆ ದುರಸ್ತಿ ಮಾಡದೇ ಹಾಗೆ ಬಿಡ ಲಾಗಿದೆ. ಈಗ ಮಳೆ ನಿಂತಿದೆ. ಈಗಲಾ ದರೂ ರಸ್ತೆಗಳ ದುರಸ್ತಿ ಮಾಡುವಂತೆ ಆಯುಕ್ತರಿಗೆ ತಾಕೀತು ಮಾಡಿದರು.

ನಗರದ ಜೆಪಿ ರಸ್ತೆಯಿಂದ     ಜೆ.ಎಚ್.ಪಟೇಲ್ ರಸ್ತೆವರೆಗೆ, ಜೆ.ಎಚ್.ಪಟೇಲ್ ರಸ್ತೆಯಿಂದ ಸುಭಾಷ ವೃತ್ತದವರೆಗೆ ಹಾಗೂ ವೀರಭದ್ರೇಶ್ವರ ದೇವಸ್ಥಾನದಿಂದ ಬಸ್ ನಿಲ್ದಾಣದವರೆಗಿನ ರಸ್ತೆಗಳ ಮೆಟಲಿಂಗ್ ಹಾಗೂ ಡಾಂಬರೀಕರಣಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಸದಸ್ಯರು ವಿನಂತಿಸಿದರು.

ಇದೇ ಸಂದರ್ಭದಲ್ಲಿ ನಗರದ ಗಟಾರುಗಳ ಸ್ವಚ್ಛತೆ, ಒಳಚರಂಡಿ ಕಾಮಗಾರಿ, ವಿದ್ಯುತ್ ದೀಪ ಅಳವಡಿಕೆ, ಬೋರವೆಲ್ ದುರಸ್ತೆ, ಆಶ್ರಯ ಮನೆ ವಿತರಣೆ, ನಗರದಲ್ಲಲಿ ನಡೆದಿರುವ ಸಿವಿಲ್ ಕೆಲಸಗಳ ಸಮೀಕ್ಷೆ ನಡೆಸುವಖ ಕುರಿತು ಚರ್ಚಿಸಿದರಲ್ಲದೇ, ಈ ಎಲ್ಲ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ನೀಡಬೇಕು. ಇಲ್ಲವಾದರೆ, ನಗರಸಭೆ ವಿರುದ್ಧ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಸೋಮವಾರದಿಂದ ಕಾರ್ಯಾ ಚರಣೆ: ನಗರದಲ್ಲಿನ ಹಂದಿಗಳನ್ನು ಹಿಡಿದು ಬೇರೆಡೆ ಸಾಗಿಸುವ ಕಾರ್ಯ ವನ್ನು ಸೋಮವಾರದಿಂದಲೇ ಆರಂಭಿ ಸಲಾಗುವುದು ಎಂದು ಹೇಳಿದ ಆಯುಕ್ತ ಎಚ್.ಕೆ.ರುದ್ರಪ್ಪ, ಈ ಬಾರಿ ಯಾವುದೇ ಕಾರಣಕ್ಕೂ ಹಂದಿಗಳನ್ನು ಊರಿಂದಾಚೆ ಸಾಗಿಸುವ ಕಾರ್ಯ ವನ್ನು ಅರ್ಧಕ್ಕೆ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.

ಅದೇ ರೀತಿ ಬೀದಿ ದೀಪ ಅಳವಡಿಸಲು ನಗರಸಭೆಯಲ್ಲಿ 10 ಲಕ್ಷ ರೂ. ಗಳನ್ನು ತೆಗೆದಿರಿಸಲಾಗಿದೆ. ನಗರದಲ್ಲಿ ದುರಸ್ತಿಗೆ ಬಂದ ಎಲ್ಲ ಬೋರವೆಲ್‌ಗಳನ್ನು ಒಂದೆರಡು ವಾರದಲ್ಲಿ ದುರಸ್ತಿ ಮಾಡಲಾಗುತ್ತದೆ. ಒಳಚರಂಡಿ ಕಾಮ ಗಾರಿ ನಡೆಸಿರುವ ಗುತ್ತಿಗೆದಾರರ ಜತೆ ಸಭೆ ನಡೆಸಿ ಆದಷ್ಟು ಬೇಗ ಕಾಮಗಾರಿ ಮುಗಿದ ಪ್ರದೇಶದಲ್ಲಿ ರಸ್ತೆಗಳ ನಿರ್ಮಾಣ ಮಾಡಿಸಲಾಗುತ್ತದೆ ಯಲ್ಲದೇ. ನಗರದ ಪ್ರಮುಖ ರಸ್ತೆಗಳ ಡಾಂಬರೀಕರಣ ಕೆಲಸ ಕೈಗೆತ್ತಿಕೊಳ್ಳ ಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷ ಜಗದೀಶ ಮಲಗೋಡ, ಉಪಾಧ್ಯಕ್ಷ ಲಲಿತಾ ಗುಂಡೇನಹಳ್ಳಿ, ನಗರಸಭೆ ವಿರೋಧ ಪಕ್ಷದ ನಾಯಕ ಬಾಬು ಸಾಬ ಮೋಮಿನಗಾರ, ಗಣೇಶ ಬಿಷ್ಟನ್ನ ವರ, ಅಜ್ಜಯ್ಯ ಹಿರೇಮಠ, ಚೋಪ ದಾರ್, ಹನುಮಂತ ತಗಡಿನಮನಿ, ಆಡಳಿತ ಪಕ್ಷದ ಸದಸ್ಯರಾದ ನಾಗೇಂದ್ರ ಕಟಕೋಳ, ಮಂಜುಳಾ ಕರಬಸಮ್ಮನ ವರ, ವೆಂಕಟೇಶ ಇಟಗಿ, ವೇದವ್ಯಾಸ ಕಟ್ಟಿ ಅಲ್ಲದೇ ನಗರಸಭೆ ಅಧಿಕಾರಿಗಳು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT