ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಪತ್ರಕ್ಕೆ ಆಗ್ರಹಿಸಿ ಧರಣಿ

Last Updated 24 ಫೆಬ್ರುವರಿ 2011, 9:50 IST
ಅಕ್ಷರ ಗಾತ್ರ

ಬೀದರ್:  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದನ್ವಯ ಜಿಲ್ಲೆಯಲ್ಲಿ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವವರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಕರ್ನಾಟಕ ಭೂಮಿ ಮತ್ತು ಜೀವನೋಪಾಯ ಹಕ್ಕುದಾರರ ಸಂಘಟನೆ ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ಬುಧವಾರ ಧರಣಿ ಸತ್ಯಾಗ್ರಹ ನಡೆಸಿತು.

27.4.1978 ಕ್ಕಿಂತ ಪೂರ್ವದಿಂದ ಅರಣ್ಯ ಭೂಮಿ ಮೇಲೆ ಸಾಗುವಳಿ ಮಾಡುತ್ತಿರುವವರ ಜಮೀನನ್ನು ಅರಣ್ಯ ಭೂಮಿ ಸಂರಕ್ಷಣೆ ಕಾಯ್ದೆ 1980ರ ಅಡಿಯಲ್ಲಿ ಸಕ್ರಮ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅದಲ್ಲದೇ ರಾಜ್ಯ ಸರ್ಕಾರ ಕೂಡ ಈ ಸಂಬಂಧ ಆದೇಶ ಹೊರಡಿಸಿ ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ತಾಲ್ಲೂಕಿಗೊಂದು ಜಂಟಿ ಸಮಿತಿ ರಚಿಸಿ ಭೂಮಿ ಸಕ್ರಮಗೊಳಿಸುವಂತೆ ಸೂಚಿಸಿದೆ. ಈ ಆದೇಶ ಬಂದ ಆರು ವರ್ಷಗಳ ನಂತರ ಅಂದರೆ 2003 ರಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದರೂ ಈವರೆಗೆ ಹಕ್ಕುಪತ್ರ ನೀಡಲಾಗಿಲ್ಲ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಆರೋಪಿಸಿದ್ದಾರೆ.

ಸಮೀಕ್ಷೆಯ ಪ್ರಕಾರ ಜಿಲ್ಲೆಯಲ್ಲಿ 221 ಜನ ಅರಣ್ಯ ಭೂಮಿ ಸಾಗುವಳಿದಾರರು 533 ಎಕರೆ ಭೂಮಿ ಪಡೆಯಲು ಅರ್ಹರಾಗಿದ್ದಾರೆ. ಆದಕಾರಣ ಕರ್ನಾಟಕ ಅರಣ್ಯ ಕಾಯ್ದೆ 1965ರ ಕಾಯ್ದೆ  28 ರ ಪ್ರಕಾರ ‘ಡಿನೋಟಿಫೈ’ ಮಾಡಿ ಫಲಾನುಭವಿಗಳಿಗೆ ಭೂಮಿ ಹಂಚುವಂತೆಯೂ ಸಮಿತಿ ತಿಳಿಸಿತ್ತು. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಪಾದಿಸಿದ್ದಾರೆ.

ಜಂಟಿ ಸಮಿತಿಯ ಸಮೀಕ್ಷೆ ನಡೆಯದಿರುವ ಜಿಲ್ಲೆಯ ತಾಲ್ಲೂಕುಗಳಲ್ಲಿ ಸಮೀಕ್ಷೆ ನಡೆಸಬೇಕು. ಈಗಾಗಲೇ ಸಮಿತಿ ಆಯ್ಕೆ ಮಾಡಿರುವ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ಕರ್ನಾಟಕ ಭೂಮಿ ಮತ್ತು ಜೀವನೋಪಾಯ ಹಕ್ಕುದಾರರ ಸಂಘಟನೆಯ ಅಧ್ಯಕ್ಷೆ ಕಮಲ್ ಎನ್. ಕರಕರೆ, ತಾಲ್ಲೂಕು ಅಧ್ಯಕ್ಷರಾದ ಸುನೀತಾ ಮಾಣಿಕ, ಶಂಕರ ಮೇತ್ರೆ, ಸಂಗೀತಾ, ಗ್ರಾಮೀಣ ಸರ್ವ ಶ್ರಮಿಕ ಸಂಘದ ಅಧ್ಯಕ್ಷ ಸಂಗ್ರಾಮ ಭೋಸ್ಲೆ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT