ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡಗು ಕ್ಯಾಪ್ಟನ್‌ಗೆ ಗೃಹ ಬಂಧನ

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ರೋಮ್ (ಐಎಎನ್‌ಎಸ್): ಇಲ್ಲಿನ ಗಿಗ್ಲಿಯೊ ದ್ವೀಪದ ಬಳಿ `ಕೋಸ್ಟಾ ಕಾನ್‌ಕಾರ್ಡಿಯಾ~ ಹಡಗು ದುರಂತಕ್ಕೀಡಾದ ಸಂದರ್ಭದಲ್ಲಿ ಪ್ರಯಾಣಿಕರ ಜೀವ ಉಳಿಸಬೇಕಾಗಿದ್ದ ಕ್ಯಾಪ್ಟನ್, ಎಲ್ಲರಿಗಿಂತ ಮೊದಲು ಜೀವರಕ್ಷಕ ದೋಣಿಯಲ್ಲಿ ತೆರಳಿದ್ದರು ಎಂಬ ವಿಷಯ ಇದೀಗ ದೃಢಪಟ್ಟಿದೆ.

ಬಂದರು ಅಧಿಕಾರಿಗಳು ಮತ್ತು ಕ್ಯಾಪ್ಟನ್ ನಡುವೆ ನಡೆದ ಸಂಭಾಷಣೆಯಲ್ಲಿ ಈ ವಿಷಯ ಸ್ಪಷ್ಟವಾಗಿದ್ದು, ದುರಂತ ಸಂಭವಿಸಿದ ಬಳಿಕ ನಡೆದ ಈ ಸಂಭಾಷಣೆಯ ವಿವರವನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಲಾಗಿದೆ.
ಕ್ಯಾಪ್ಟನ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.

`ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸುವಂತೆ ಸ್ಥಳೀಯ ಅಧಿಕಾರಿಗಳು ಮಾಡಿದ ಕೋರಿಕೆಯನ್ನು ಕ್ಯಾಪ್ಟನ್ ಫ್ರಾನ್ಸೆಸ್ಕೊ ಶೆಟ್ಟಿನೊ ನಿರ್ಲಕ್ಷಿಸಿದ್ದರು.  ನೀವು ಹಡಗಿಗೆ ಹಿಂತಿರುಗಿ ಎಷ್ಟು ಮಂದಿ ಪ್ರಯಾಣಿಕರು ಇದ್ದಾರೆ ಎಂಬ ಮಾಹಿತಿಯನ್ನು ಕೂಡಲೇ ನೀಡಲೇಬೇಕು. ಇದು ನಮ್ಮ ಆದೇಶ ಎಂದು ಹೇಳಿದ್ದರೂ ಅದಕ್ಕೆ ಅವರು ಕಿವಿಗೊಡಲಿಲ್ಲ~ ಎಂದು ಬಂದರು ಅಧಿಕಾರಿ ಡಿ ಫಾಲ್ಕೊ ದೂರಿದ್ದಾರೆ.
 

`ಪ್ರಯಾಣಿಕರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರಿದ್ದಾರೆ, ನನಗೆ ಜೀವರಕ್ಷಕ ದೋಣಿಯಲ್ಲಿ ಸಾಗದೇ ಬೇರೆ ಮಾರ್ಗವಿಲ್ಲ. ಜತೆಗೆ ಈಗಾಗಲೇ ಕತ್ತಲೆ ಆವರಿಸಿದೆ~ ಎಂದು ಕ್ಯಾಪ್ಟನ್ ಉತ್ತರಿಸಿದರು ಎಂದು ಫಾಲ್ಕೊ ತಿಳಿಸಿದ್ದಾರೆ.

ಗೃಹ ಬಂಧನ: ಶೆಟ್ಟಿನೊ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಹತ್ಯೆ ಮತ್ತು ಜವಾಬ್ದಾರಿಯಿಂದ ನುಣುಚಿಕೊಂಡ ಆರೋಪದ ಮೇರೆಗೆ ಅವರು ಹಲವು ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗಿ ಬರಬಹುದು ಎಂದು ಹೇಳಲಾಗಿದೆ.

ಈ ಮಧ್ಯೆ, ರಕ್ಷಣಾ ಕಾರ್ಯಕರ್ತರು ಮಂಗಳವಾರ ಇನ್ನೂ ಐದು ಶವಗಳನ್ನು ಪತ್ತೆಹಚ್ಚುವುದರೊಂದಿಗೆ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 11ಕ್ಕೆ ಏರಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT