ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡಗು ಸಿಬ್ಬಂದಿ ವಿಚಾರಣೆ

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕೊಚ್ಚಿ (ಪಿಟಿಐ): ಇಲ್ಲಿನ ಅಲೆಪ್ಪಿಯ ಬಳಿ ಇಬ್ಬರು ಭಾರತೀಯ ಮೀನುಗಾರರನ್ನು ಕಡಲ್ಗಳ್ಳರು ಎಂದು ತಪ್ಪಾಗಿ ಭಾವಿಸಿ ಗುಂಡು ಹಾರಿಸಿ ಅವರ ಸಾವಿಗೆ ಕಾರಣರಾದ ಇಟಲಿಯ ಸರಕು ಸಾಗಣೆ ಹಡಗಿನ ಸಿಬ್ಬಂದಿಯನ್ನು ಹಡಗು   `ಎನ್‌ರಿಕಾ ಲೆಕ್ಸಿ~ಯ ಸಮೇತ ಶುಕ್ರವಾರ ಕೊಚ್ಚಿಗೆ ಕರೆತರಲಾಗಿದೆ.

ಪೊಲೀಸರು, ಕರಾವಳಿ ಕಾವಲು ಪಡೆ ಅಧಿಕಾರಿಗಳು ಸಿಬ್ಬಂದಿಯನ್ನು ಪ್ರಶ್ನಿಸುತ್ತಿದ್ದಾರೆ. ಬಿಗಿ ಭದ್ರತೆಯಲ್ಲಿ ಕೊಚ್ಚಿಯ ತೈಲ ಹಡಗು ನಿಲುಗಡೆ ತಾಣದಲ್ಲಿ ಹಡಗನ್ನು ನಿಲ್ಲಿಸಲಾಗಿದೆ.

ಮೀನುಗಾರಿಕೆ ದೋಣಿಗೆ ಕಡಲ್ಗಳ್ಳರೆಂದು ತಿಳಿದು ಹಡಗಿನವರು ಗುಂಡು ಹೊಡೆದಿರಬೇಕು ಎಂಬುದು ನೌಕಾ ವಿಭಾಗದ ಅಧಿಕಾರಿಗಳ ಪ್ರಾಥಮಿಕ ಪರಿಶೀಲನೆಯಿಂದ ಗೊತ್ತಾಗಿದೆ. 

ಮೃತ ಮೀನುಗಾರರಾದ ವಲೆನತಿನೆ ಅಲಿಯಾಸ್ ಜೆಲೆಸ್ಟಿನೆ (45) ಹಾಗೂ ಅಜೆಶ್ ಬಿಂಕಿ (25) ಅವರ ದೇಹಗಳ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಗುಂಡಿನ ಗಾಯಗಳು ಪತ್ತೆಯಾಗಿವೆ. ಅದರ ಆಧಾರದ ಮೇಲೆ ಹಡಗಿನ ಸಿಬ್ಬಂದಿಯ ಮೇಲೆ ನೌಕಾ ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿದ್ದಾರೆ.

`ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸುವ ಮೂಲಕ ಅವರಿಗೆ ಭಾರತ ಕಠಿಣ ಎಚ್ಚರಿಕೆ ನೀಡಲು ಬಯಸುತ್ತದೆ~ ಎಂದು ಸಚಿವ ಎ.ಕೆ.ಆಂಟನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT