ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಕೋಚ್ ಮೈಕೆಲ್ ನಾಬ್ಸ್ ವಜಾ

ಸುಧಾರಿಸದ ಭಾರತ ಹಾಕಿ ತಂಡದ ಪ್ರದರ್ಶನ
Last Updated 9 ಜುಲೈ 2013, 11:20 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ) : ಭಾರತ ಹಾಕಿ ತಂಡದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಮೈಕೆಲ್ ನಾಬ್ಸ್ ಅವರನ್ನು ಕೋಚ್ ಸ್ಥಾನದಿಂದ ವಜಾಗೊಳಿಸಲಾಗಿದೆ.

`ನಾಬ್ಸ್ ಅವರೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಲಾಗಿದ್ದು ಒಂದು ತಿಂಗಳ ಕಾಲ ಅವರು ನೋಟಿಸ್ ಅವಧಿಯಲ್ಲಿ ಇರಲಿದ್ದಾರೆ. ನೂತನ ಕೋಚ್ ನೇಮಕಗೊಳ್ಳುವವರೆಗೆ ಪ್ರಸ್ತುತ ಸುಧಾರಿತ ಪ್ರದರ್ಶನ ನಿರ್ದೇಶಕರಾಗಿರುವ ರೋಲೆಂಟ್ ಒಲ್ಟಮಸ್ ಅವರಿಗೆ ಕೋಚ್ ಜವಾಬ್ದಾರಿ ನೀಡಲಾಗಿದೆ' ಎಂದು ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ನರೀಂದರ್ ಬಾತ್ರಾ ತಿಳಿಸಿದರು.

ಆದರೆ ತನ್ನ ಕೆಲಸಕ್ಕೆ ನ್ಯಾಯ ಒದಗಿಸುತ್ತಿಲ್ಲ ಎಂಬ ಕಾರಣಕ್ಕಾಗಿ ರಾಜೀನಾಮೆ ನೀಡಲು ಸ್ವತಃ ನಾಬ್ಸ್ ಅವರೇ ನಿರ್ಧರಿಸಿದರು ಎಂದು ಬಾತ್ರಾ ಹೇಳಿದರು.

ಒಲ್ಟಮಸ್ ಜತೆ ನಡೆಸಿದ ಸಭೆಯ ವೇಳೆ ತರಬೇತಿ ಮಾದರಿಯಲ್ಲಿ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ಈ ವೇಳೆ ತರಬೇತಿಯ ಕೆಲವೊಂದು ಪ್ರದೇಶಗಳ ವಿಚಾರದಲ್ಲಿ ಕೊರತೆ ಎದುರಿಸುತ್ತಿರುವ ಬಗ್ಗೆ ಮತ್ತು  ಆ ಬಗ್ಗೆ ಗಮನವಹಿಸಿ ನಿರೀಕ್ಷಿಸಿದ ಫಲಿತಾಂಶ ನೀಡುವಲ್ಲಿ ನಾಬ್ಸ್ ವಿಫಲರಾಗಿದ್ದಾರೆ ಎಂಬುದು ಒಲ್ಟಮಸ್ ಅಭಿಪ್ರಾಯ. ಹೀಗಾಗಿ ರಾಜೀನಾಮೆ ನೀಡುವಂತೆ ನಾಬ್ಸ್ ಅವರನ್ನು ಕೇಳಲಾಯಿತು' ಎಂದು ಬಾತ್ರಾ ವರದಿಗಾರರಿಗೆ ತಿಳಿಸಿದರು.

`ನಾಬ್ಸ್ ಅವರನ್ನು ಮುಂದುವರಿಸಲು ಇಷ್ಟವಿಲ್ಲ. ಎಂಬುದನ್ನು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ತಿಳಿಸಿದ್ದೇವೆ. ಸೂಕ್ತ ವ್ಯಕ್ತಿಯನ್ನು ನೇಮಿಸಲು ಇನ್ನು 2ರಿಂದ 3 ತಿಂಗಳು ಬೇಕಿದ್ದು, ಅಲ್ಲಿಯವರೆಗೆ ಒಲ್ಟಮಸ್ ಕೋಚ್ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ನೋಡಿಕೊಳ್ಳಲಿದ್ದಾರೆ' ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT