ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಟ್ ಸ್ಪಾಟ್ ಬಳಕೆ ಇಲ್ಲ

Last Updated 6 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಅಕ್ಟೋಬರ್ 14ರಿಂದ ಆರಂಭವಾಗಲಿರುವ ಏಕದಿನ ಕ್ರಿಕೆಟ್ ಸರಣಿಗೆ ವಿವಾದಾತ್ಮಕ `ಹಾಟ್ ಸ್ಪಾಟ್~ ತಂತ್ರಜ್ಞಾನ ಬಳಕೆ ಇಲ್ಲ ಎಂದು ಬಿಬಿಜಿ ಸ್ಪೋರ್ಟ್ಸ್ ಕಂಪೆನಿ ತಿಳಿಸಿದೆ.

`ಭಾರತ ತಂಡ ಇತ್ತೀಚಿಗೆ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಈ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಲಾಗಿತ್ತು. ಇದರಿಂದ ಸಾಕಷ್ಟು ವಿವಾದ ಸೃಷ್ಟಿಯಾಗಿದ್ದವು. ಇದನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಕೆ ಮಾಡಿತ್ತು. ಆದ್ದರಿಂದ ಈ ಸಲದ ಸರಣಿಗೆ ಇದನ್ನು ಬಳಸದಿರಲು ನಿರ್ಧರಿಸಲಾಗಿದೆ~ ಎಂದು ಬಿಬಿಜಿ ಸ್ಪೋರ್ಟ್ಸ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಾರೆನ್ ಬರ‌್ರೆನ್ ತಿಳಿಸಿದ್ದಾರೆ.

ಅಂಪೈರು ತೀರ್ಪು ಪರಿಶೀಲನಾ ಪದ್ಧತಿ (ಡಿಆರ್‌ಎಸ್) ಅಳವಡಿಸಿಕೊಳ್ಳಲು ಬಿಸಿಸಿಐ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದೆ.ಇಂಗ್ಲೆಂಡ್ ಪ್ರವಾಸದ ವೇಳೆ ಕೆಲ ಫಲಿತಾಂಶಗಳು ತಿರುವು ಮುರುವು ಆಗಿದ್ದವು.
ಆದ್ದರಿಂದ ಬಿಸಿಸಿಐ ಈ ತಂತ್ರಜ್ಞಾನ ಬಳಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ತಂತ್ರಜ್ಞಾನ ಬಳಸಲು ಕ್ರಿಕೆಟ್ ಮಂಡಳಿ ಪ್ರಾಮಾಣಿಕ ಸಹಕಾರ ನೀಡುತ್ತಿಲ್ಲ ಎನ್ನುವುದು ಸ್ಪೋರ್ಟ್ಸ್ ಕಂಪೆನಿಯ ಆರೋಪವಾಗಿದೆ.

ತವರು ನೆಲದಲ್ಲಿ ನಡೆಯುವ ಕ್ರಿಕೆಟ್ ಸರಣಿಗೆ ಈ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲು ಬಿಸಿಸಿಐ ಹಾಗೂ ಬಿಬಿಜಿ ಸ್ಪೋರ್ಟ್ಸ್ ಕಂಪೆನಿ ನಡುವೆ ಈ ವರ್ಷ ಒಪ್ಪಂದ ನಡೆದಿತ್ತು.

ಏನಿದು ಹಾಟ್‌ಸ್ಪಾಟ್: `ಇನ್‌ಫ್ರಾ-ರೆಡ್~ ಛಾಯಾಚಿತ್ರ ಬಳಸಿಕೊಂಡು ಮೂರನೇ ಅಂಪೈರ್ ತೀರ್ಪು ನೀಡಲು ಸಹಕಾರಿಯಾಗುವುದೇ `ಹಾಟ್ ಸ್ಪಾಟ್~. ಚೆಂಡು ಬ್ಯಾಟ್‌ಗೆ ಇಲ್ಲವೇ  ಪ್ಯಾಡ್ ಇವೆರಡರಲ್ಲಿ ಯಾವುದಕ್ಕೆ ತಗುಲಿದೆ ಎನ್ನುವುದನ್ನು ನಿಖರವಾಗಿ ತಿಳಿಯಲು ಈ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತದೆ. ಇದನ್ನು ಪಂದ್ಯದ ವಿಶ್ಲೇಷಣೆ ಮಾಡಲು ವಾಹಿನಿಗಳಲ್ಲಿ ಹೆಚ್ಚು ಬಳಕೆ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT