ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡಾಡುತ ಅರಳುತ್ತಿರುವ ದೇವಾನಂದ...

Last Updated 22 ಜನವರಿ 2011, 8:55 IST
ಅಕ್ಷರ ಗಾತ್ರ

ಹೀಗೆ ಎಲ್ಲಿಹೋದರೂ ಬಹುಮಾನಗಳನ್ನು ಪೆಡದುಕೊಳ್ಳುತ್ತಾಒಂದೇ ವರ್ಷದಲ್ಲಿ ಸುಮಾರು 40 ಪಾರಿತೋಷಕಗಳನ್ನು ಮಹಾರಾಜ ಕಾಲೇಜಿನ ಮಡಿಲಿಗೆ ಹಾಕಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ನಾಡಿನ ಪ್ರಖ್ಯಾತ ಜನಪದ ಜೀವ ಜನ್ನಿಯವರನ್ನು ಪರಿಚಯ ಮಾಡಿಕೊಂಡು ಅವರ ಪ್ರಭಾವಕ್ಕೆ ಒಳಗಾಗಿ ದೇವಾನಂದ್ ವ್ಯಾಸಂಗ ಮಾಡುತ್ತಲೆ ಹವ್ಯಾಸಿ ರಂಗತಂಡಗಳಾದ ಜನಮನ, ನಿರಂತರ, ಸಮತೆಂತೊ, ನಟನ, ದೇಸೀರಂಗ, ಜೇನುಗೂಡು, ಸಸ್ಕಾರ ಭಾರತೀ ತಂಡಗಳಲ್ಲಿ ದುಡಿದರು. ಜಲಗಾರ, ಕತೆಗಾರ ಮಂಜಣ್ಣ, ಕಲ್ಲರಳಿ ಹೂವಾಗಿ, ಮುಕ್ತಧಾರಾ, ಕೂಡಲ ಸಂಗಮ, ಬಲಿದಾನ, ಕಲ್ಕಿ, ಜನನಿ, ಒಂದಾನೊಂದು ಊರಿನಲ್ಲಿ ಇನ್ನೂ ಹಲವಾರು ನಾಟಕಗಳು ಮತ್ತು  ಬೀದಿ ನಾಟಕಗಳಲ್ಲಿ ಅಭಿನಯಿಸುವುದರ ಜೊತೆಗೆ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ.

ಮದ್ರಾಸ್, ಕ್ಯಾಲಿಕಟ್, ಅಣ್ಣಾಮಲೈ, ನವದೆಹಲಿಯಲ್ಲಿ ನಡೆದ ‘ದಕ್ಷಿಣ ವಲಯ ಯುಜನೋತ್ಸವ’ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮೂಕಾಭಿನಯ, ನಾಟಕ, ಪ್ರಹಸನ, ಜಾನಪದ ನೃತ್ಯ, ಜನಪದ ಸಂಗೀತ, ಸಮೂಹ ಗಾಯನ ಸ್ಪರ್ಧೆಗಳಲ್ಲಿ ಪ್ರಥಮ ಪರ್ಯಾಯ ಪಾರಿತೋಷಕ ಪ್ರಶಸ್ತಿಯನ್ನು ಪಡೆಯುವುದರ ಮುಖಾಂತರ ಮೈಸೂರು ವಿವಿಯನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ.

ನಂತರ ಮಾನಸಗಂಗೋತ್ರಿಯಲ್ಲಿ ಶಿಕ್ಷಣ ವಿಭಾಗದಲ್ಲಿ ವ್ಯಾಸಂಗ ಮಾಡುತ್ತ ಕಸ್ತೂರಿವಾಹಿನಿಯ ‘ಹಾಡಿನ ಬಂಡಿ’, ಜೀ ಕನ್ನಡ ವಾಹಿನಿಯ ‘ಗುಣಗಾನ’, ಸುವರ್ಣ ವಾಹಿನಿಯ ‘ಸ್ಟಾರ್ ಸಿಂಗರ್’ನಲ್ಲಿ ಭಾಗವಹಿಸಿ ಸ್ಪರ್ಧೆಯ ಅಂತಿಮ ಸುತ್ತಿನವರೆಗೂ ಪ್ರವೇಶಿಸಿ ಹಂಸಲೇಖ, ಗುರುಕಿರಣ್, ವಿಜಯ ಪ್ರಕಾಶ್‌ರೊಂದಿಗೆ ಜನಮನ್ನಣೆಯ ಬಹುದೊಡ್ಡ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಹಾಡುತ್ತ ಕೇಳುವ ಹೃದಯಗಳನ್ನು ತಣಿಸುವ ಈ ಕೋಗಿಲೆ ನವಿಲಿನಂತೆ ಕುಣಿಯುವುದರಲ್ಲೂ ತನ್ನ ಪ್ರತಿಭೆಯನ್ನು ಮೆರೆದಿದೆ. ಜನಪದ ನೃತ್ಯಗಳಾದ ಕಂಸಾಳೆ, ಮಾರಿಕುಣಿತ, ರಂಗಕುಣಿತ, ಸೋಮನ ಕುಣಿತ, ಪಟ್ಟದ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ, ಕೋಲಾಟ, ವೀರಗಾಸೆ ಮುಂತಾದವುಗಳಲ್ಲಿ ಪರಿಣಿತರಾಗಿ ನಾಡಿನಾದ್ಯಂತ ಶಾಲಾ ಕಾಲೇಜುಗಳಿಗೆ, ಸಂಘ- ಸಂಸ್ಥೆಗಳಿಗೆ ತರಬೇತಿ ನೀಡುತ್ತಾ ಬಂದಿದ್ದಾರೆ. ಇದೀಗ ವಿ.ಮನೋಹರ್ ಅವರ ನೇತೃತ್ವದ ‘ಕಾಡಿನ ಹಾಡು’ ಶಿಬಿರದಲ್ಲಿ ಬುಡಕಟ್ಟು ಜನಾಂಗಗಳ ಆಚಾರ- ವಿಚಾರ- ಸಂಪ್ರದಾಯ, ನೃತ್ಯ ಮತ್ತು ಹಾಡುಗಳನ್ನು ತಿಳಿದು ಕ್ಷೇತ್ರಕಾರ್ಯದಲ್ಲಿ ತೊಡಗಿದ್ದಾರೆ.

ಮೈಸೂರಿನ ಯುವ ದಸರಾ, ದಸರಾ ಜನಪದೋತ್ಸವ. ಬೆಂಗಳೂರಿನ ಜನಪದೋತ್ಸವ, ಕನ್ನಡವೇ ಸತ್ಯ ಅಶ್ವಥ್ ನಿತ್ಯ, ಹಂಪಿ ಉತ್ಸವ, ಶಿವಮೊಗ್ಗದ ಸಹ್ಯಾದ್ರಿ ಉತ್ಸವ, ಬೆಳಗಾಂನ ದಸರಾ ಉತ್ಸವ, ಬಳ್ಳಾರಿ ದಸರಾ ಉತ್ಸವ, ಹೀಗೆ ನಾಡಿನಾದ್ಯಂತ ಕಾರ್ಯಕ್ರಮಗಳನ್ನು ನೀಡಿದ್ದಾರೆ. 2 ಧ್ವನಿಸುರುಳಿಗಳಲ್ಲಿ ಹಾಡಿರುವ ದೇವಾನಂದ್ ಹಾಸನ ಆಕಾಶವಾಣಿಯ ಕಲಾವಿದರಾಗಿದ್ದಾರೆ. ಪ್ರಸ್ತುತ ಸೋಮಾನಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೂ ಮಹಾರಾಜ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕಾಳಚನ್ನೇಗೌಡ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.

ಹೀಗೆ ಹಾಡಾಡತ ಜನಮನದೊಳಗೆ ಅರಳುತ್ತಿರುವ ದೇವಾನಂದ್ ತಮ್ಮ ಎಲ್ಲ ಸಾಧನೆಗಳನ್ನು ಅಪ್ಪ-ಅಮ್ಮನಿಗೆ ಹೃದಯ ತುಂಬಿ ಅರ್ಪಿಸುತ್ತಾರೆ. ಸ್ಪರ್ಧೆಗಳಲ್ಲಿ ದೇವಾನಂದ್ ಹಾಡಿದರೆ ನಮಗೆ ಬಹುಮಾನವಿಲ್ಲವೆಂದು ಹಿಂಜರಿವ ಸಹಪಾಠಿಗಳಿಗೆ ಮತ್ತಷ್ಟು ಸ್ಫೂರ್ತಿಯನ್ನು ತುಂಬುತ್ತಾರೆ. ತಮಗೆ ಪ್ರತೀ ಸಂದರ್ಭದಲ್ಲೂ ಪ್ರೀತಿಯಿಂದ ಸಾಂಗತ್ಯ ನೀಡಿದ ಮೋಹನ್ ಕುಮಾರ್, ಲಿಂಗರಾಜು, ಕಿರಣ್, ನಿತಿನ್‌ರಾವ್ ಅವರನ್ನು ಎಂದಿಗೂ ಮರೆಯಲಾರೆ ಎಂದು ಕಣ್ತುಂಬಿಕೊಳ್ಳುತ್ತಾರೆ. ‘ನಮ್ಮ ಜನಪದರ ಹೃದಯದ ಮಾತನ್ನು ನಾವು ಹೇಳದೆ ಬೇರಾರೂ ಹೇಳುವುದಿಲ್ಲ. ಆದ್ದರಿಂದ ಹಾಡಾಡುತ ನಮ್ಮ ಮಾತನ್ನು ಸಹಮಾನವರಿಗೆ ಕೇಳಿಸಲು ದುಡಿಯುತ್ತಿದ್ದೇನೆ’ ಎನ್ನುವ ದೇವಾನಂದ್‌ರ ಮಾತು ನಮ್ಮ-ನಿಮ್ಮೆಲ್ಲ ಹೃದಯಕ್ಕೂ ಕೇಳಿಸುತ್ತದೆ ಅಲ್ವಾ...! ಬನ್ನಿ, ಆ ದನಿ ಚಿರಾಯುವಾಗಲಿ ಎಂದು ಹೃದಯ ತುಂಬಿ ಹಾರೈಸೋಣ. ದೇವಾನಂದ್ ಅವರ ಮೊ.ಸಂ. 9900462955.                                             

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT