ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ಉತ್ಪನ್ನ: ರಫ್ತು ನಿಷೇಧ ಜಾರಿ

Last Updated 19 ಫೆಬ್ರುವರಿ 2011, 16:55 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಿಸಲು ಹಾಗೂ ಬೆಲೆ ಏರಿಕೆ ನಿಯಂತ್ರಿಸಲು ಹಾಲಿನ ಪುಡಿ ಹಾಗೂ ಇತರೆ ಹಾಲಿನ ಉತ್ಪನ್ನಗಳ ರಫ್ತಿನ ಮೇಲೆ ಸರ್ಕಾರ ನಿಷೇಧ ಹೇರಿದೆ.

ಗಿಣ್ಣು ಹೊರತುಪಡಿಸಿ ಇತರೆ ಪ್ರೊಟೀನ್‌ಯುಕ್ತ ಹಾಲು ಉತ್ಪನ್ನಗಳ ಮೇಲೆ ವಾಣಿಜ್ಯ ಸಚಿವಾಲಯ ಶೀಘ್ರವೇ ಜಾರಿಗೆ ಬರುವಂತೆ ರಫ್ತು ನಿಷೇಧ ವಿಧಿಸಿದೆ.ಕಳೆದ ಒಂದು ವರ್ಷದಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಹಾಲಿನ ದರ ಶೇ 20ರಷ್ಟು ಹಾಗೂ ಸಗಟು ಮಾರುಕಟ್ಟೆಯಲ್ಲಿ ಶೇ 12ರಷ್ಟು ಹೆಚ್ಚಿದೆ. ಆಹಾರ ಹಣದುಬ್ಬರ ದರ ಮೇಲ್ಮಟ್ಟದಲ್ಲೇ ಮುಂದುವರೆಯಲು ಹಾಲಿನ ಬೆಲೆ ಏರಿಕೆಯೂ ಪ್ರಮುಖ ಕಾರಣ ಎನ್ನಲಾಗಿದೆ.

ಕೆನೆ ತೆಗೆದ ಹಾಲಿನ ಪುಡಿ, ಸಮಗ್ರ ಹಾಲಿನ ಪುಡಿ, ಮಕ್ಕಳಿಗಾಗಿ ತಯಾರಿಸುವ ಹಾಲಿನ ಉತ್ಪನ್ನಗಳ ಮೇಲೆ ಈ ನಿಷೇಧ ಅನ್ವಯಿಸಲಿದೆ ಎಂದು ರಫ್ತು ವಹಿವಾಟು ವ್ಯವಸ್ಥಾಪಕ  ನಿರ್ದೇಶಕರೊಬ್ಬರು ತಿಳಿಸಿದ್ದಾರೆ. ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ನೇತೃತ್ವದಲ್ಲಿರುವ ಉನ್ನತ ಅಧಿಕಾರ ಹೊಂದಿರುವ ಸಚಿವರುಗಳ ಸಮಿತಿ, ಸರಕು ದರಗಳ ಕುರಿತು ಚರ್ಚೆ ನಡೆಸಿದ ಬೆನ್ನ ಹಿಂದೆಯೇ ಈ ನಿಷೇಧ ಹೊರಬಿದ್ದಿದೆ. ಸರ್ಕಾರ ಕಳೆದ ತಿಂಗಳು ಹಾಲಿನ ಉತ್ಪನ್ನಗಳ ಮೇಲಿನ ರಫ್ತು ಉತ್ತೇಜನ ಕೊಡುಗೆಯನ್ನು ಹಿಂದಕ್ಕೆ ಪಡೆದಿತ್ತು.

‘ಸರ್ಕಾರದ ಈ ಕ್ರಮ ದೇಶೀಯ ಮಾರುಕಟ್ಟೆಯಲ್ಲಿ ಹಾಲಿನ ಬೆಲೆ ನಿಯಂತ್ರಿಸಲು ಸಹಕಾರಿಯಾಗಲಿದೆ ಎಂದು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್ ಸೌದಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ ವಾರ್ಷಿಕ  112 ದಶಲಕ್ಷ ಟನ್ ಹಾಲು ಉತ್ಪಾದನೆ ಸಾಮರ್ಥ್ಯವನ್ನು ಹೊಂದಿದ್ದು, ಕಳೆದ ವರ್ಷ ್ಙ500 ಕೋಟಿ ಮೊತ್ತದ ಹಾಲಿನ ಉತ್ಪನ್ನಗಳನ್ನು ರಫ್ತು ವಹಿವಾಟು ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT