ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಸಂಘಟನೆಗಳ ಪ್ರತಿಭಟನೆ

ಪಡಿತರ ಚೀಟಿ ನೀಡಲು ಹೆಚ್ಚುವರಿ ಹಣ: ಆರೋಪ
Last Updated 4 ಡಿಸೆಂಬರ್ 2012, 5:52 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ಹೊಸ ಪಡಿತರ ಚೀಟಿ ವಿತರಣೆಗೆ ಹೆಚ್ಚುವರಿ ಹಣ ಪಡೆಯಲಾಗುತ್ತಿದೆ ಎಂದು ಆರೋಪಿಸಿ ವಿಶ್ವಹಿಂದು ಪರಿಷತ್, ಬಜರಂಗದಳ ತಾಲ್ಲೂಕು ಘಟಕವು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಸ್ಥಳೀಯ ಬಸವೇಶ್ವರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರ ಮಹಾದೇವಪ್ಪ ಮುರಗಿ ಅವರಿಗೆ ಮನವಿ ಸಲ್ಲಿಸಿದರು.

ತಹಶೀಲ್ದಾರ ಕಚೇರಿ ಆವರಣದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಲ್ಲಿಕಾರ್ಜುನ ದೇವರಮನಿ ಹಾಗೂ ಪರಶುರಾಮ ಜಮಖಂಡಿ, ಸರ್ಕಾರ ಬಡ ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ಪಡಿತರ ಸೌಲಭ್ಯ ಕಲ್ಪಿಸಿದೆ. ಅದರಿಂದ ನೆಮ್ಮದಿ ಬದುಕು ನಡೆಸಲು ಸಹಕಾರಿಯಾಗಿದೆ.

ಆದರೆ ಈಗ ಹೊಸ ಪಡಿತರ ಚೀಟಿಗಳನ್ನು ವಿತರಣೆ ಮಾಡುತ್ತಿರುವ ಸಂದರ್ಭದಲ್ಲಿ ಖಾಸಗಿ ಏಜೆನ್ಸಿಯವರು ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ. ಇದರಿಂದ ಬಡ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹೆಚ್ಚುವರಿ ಹಣ ಪಡೆಯುವುದನ್ನು ತಡೆದು ಸರಕಾರ ನಿಗದಿಪಡಿಸಿದ್ದ ದರದಲ್ಲಿ ಪಡಿತರ ಚೀಟಿ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.

ಬಜರಂಗದಳ ತಾಲ್ಲೂಕು ಘಟಕದ ಸಂಚಾಲಕ ತಮ್ಮಣ್ಣ ಬಡಿಗೇರ, ನಗರ ಘಟಕದ ಸಂಚಾಲಕ ವಿಶ್ವನಾಥ ಗಬ್ಬೂರ, ಚನ್ನು ಪಾರಶೆಟ್ಟಿ, ಮುದಕು ಬಸರಕೋಡ, ನಾಗರಾಜ ಯಂಭತ್ನಾಳ, ಸಿದ್ದು ಹಾದಿಮನಿ, ಪ್ರಕಾಶ ಡೆಂಗಿ, ಕುಮಾರ ನಾಯ್ಕೋಡಿ, ಚನ್ನಬಸವರಾಜ ಮುರಾಳ, ಅಶೋಕ ಹಾರಿವಾಳ, ನಾಗರಾಜ ದೇವಕರ, ಸುನೀಲ ಮುಳವಾಡ, ನಾಗಮ್ಮ ಬಂಡಿವಡ್ಡರ, ರೇಣುಕಾ ಬಂಡಿವಡ್ಡರ, ಸೋಮವ್ವ ದೇವಕರ, ಅರುಣ ಪಾಟೀಲ, ಚಿದಾನಂದ ಹಾರಿವಾಳ, ಮಹಾದೇವ ಇಟಗಿ, ಮಹಾಂತೇಶ ಉಕ್ಕಲಿ, ಮಲ್ಲು ರಾಠೋಡ, ವಿಜಯ ಪವಾರ, ಅರುಣ ಬಿರಾದಾರ, ಪ್ರವೀಣ ಪಾಟೀಲ, ಶ್ರೀಶೈಲ ನಾಯ್ಕೋಡಿ, ರಾಮು ಮಡಿವಾಳರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT