ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿತೋಪದೇಶ ಬೇಕು, ಪ್ರಿಯೋಪದೇಶ ಬೇಡ: ಅದಮಾರುಶ್ರೀ

Last Updated 24 ಜನವರಿ 2012, 11:55 IST
ಅಕ್ಷರ ಗಾತ್ರ

ಉಡುಪಿ: `ವಿದ್ಯಾರ್ಥಿಗಳಿಗೆ ಗುರುಗಳು ಹಿತೋಪದೇಶ ನೀಡಬೇಕೆ ವಿನಾ ಪ್ರಿಯೋಪದೇಶ ಬೇಡ~ ಎಂದು ಉಡುಪಿ ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಇಲ್ಲಿ ಹೇಳಿದರು.
ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ವಾರ್ಷಿಕೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.

`ಹಿತೋಪದೇಶವು ಆರಂಭದಲ್ಲಿ ಕಹಿಯಾಗಿ ದ್ದರೂ ಮತ್ತೆ ಸಿಹಿಯನ್ನು ನೀಡುತ್ತದೆ. ಪ್ರಿಯೋಪದೇಶ ಮೊದಲು ಸಿಹಿಯಾದರೂ ಮತ್ತೆ ಕಹಿಯಾಗಿರುತ್ತದೆ. ಹಿತೋಪದೇಶ ಹೊಟ್ಟೆನೋವಿಗೆ ಔಷಧವಾದರೆ ಪ್ರಿಯೋಪದೇಶ ನೋವಿಗೆ ಬೆಲ್ಲ ಕೊಟ್ಟ ಹಾಗೆ~ ಎಂದು ವಿಶ್ಲೇಷಿಸಿದರು.

`ಅಧ್ಯಾಪಕರು ಭೋದಿಸುವಾಗ ವಿದ್ಯಾರ್ಥಿಗಳಿಗೆ ವಿಷಯ ವಿವರಿಸಬೇಕು. ಆದರೆ ಒತ್ತಡ ಹೇರಬೇಕಾದ ಅಗತ್ಯವಿಲ್ಲ. ಹಾಗೆಂದು ಕೇವಲ ಪ್ರವಚನ ಮಾಡಿದರೂ ಸಾಲದು. ವಿದ್ಯಾರ್ಥಿಗಳ ಕಿವಿಗೆ ಸ್ವಲ್ಪ ಕಹಿಯಾದರೂ ಕಾಲಕ್ರಮದಲ್ಲಿ ಅವರ ಬದುಕು ಹಸನಾಗುವಂತೆ ಗುರುಗಳ ಉಪದೇಶವಿರಲಿ~ ಎಂದು ಸ್ವಾಮೀಜಿ ಹೇಳಿದರು.
ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ.ಎನ್.ಎ.ಮಧ್ಯಸ್ಥ  ಅಧ್ಯಕ್ಷತೆ ವಹಿಸಿದ್ದರು.

ಬಂಟಕಲ್  ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲ ಡಾ.ಮೋಹನ್‌ದಾಸ್ ಭಟ್, ಪ್ರಾಂಶುಪಾಲ  ಪ್ರೊ.ವೇಣುಗೋಪಾಲ ಮುಳ್ಳೇರಿಯಾ, ವಿದ್ಯಾರ್ಥಿ ಸಂಘದ ನಾಯಕಿ  ಅಕ್ಷತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT