ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಗಿ: ಬಿಸಿಯೂಟ ಕೋಣೆಯಲ್ಲಿ ಬೆಂಕಿ

Last Updated 18 ಏಪ್ರಿಲ್ 2013, 10:40 IST
ಅಕ್ಷರ ಗಾತ್ರ

ಹುಣಸಗಿ: ಪಟ್ಟಣದ ಯುಕೆಪಿ ಕ್ಯಾಂಪ್‌ನಲ್ಲಿರುವ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಬಿಸಿ ಊಟದ ಕೊಣೆಯಲ್ಲಿ ಬೆಂಕಿ ತಗುಲಿ ಸುಮಾರು ನಾಲ್ಕು ಅಕ್ಕಿಚೀಲ, ಒಂದು ಬೇಳೆ ಚೀಲ ಅರೆಬರೆ ಸುಟ್ಟುಹೋಗಿದೆ.

ಬುಧವಾರ ಬೆಳಗ್ಗೆ ಬಿಸಿ ಊಟ ತಯಾರಿಸಲು ಕೋಣೆಯಲ್ಲಿ ತೆರಳಿ ಒಲೆ ಹಚ್ಚಿದಾಗ ಸಿಲಿಂಡರ್ ಪೈಪ್ ಸೋರಿಕೆಯಾಗಿ ಪೈಪ್‌ಗೆ ಬೆಂಕಿ ತಗುಲಿದೆ. ಬಿಸಿ ಊಟದ ಸಿಬ್ಬಂದಿ ಮತ್ತು ಶಿಕ್ಷಕರು ತಕ್ಷಣವೇ ಬೆಂಕಿ ನಂದಿಸಿದ್ದರಿಂದ ಯಾವದೇ ಅನಾಹುತ ಸಂಭವಿಸಿಲ್ಲ ಎಂದು ಶಾಲೆಯ ಮುಖ್ಯ ಶಿಕ್ಷಕ ಬಸನಗೌಡ ತಿಳಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಅಕ್ಷರ ದಾಸೋಹ ಯೋಜನೆಯ ತಾಲ್ಲೂಕು ಅಧಿಕಾರಿ ಆರ್.ಎಸ್.ಕರಡ್ಡಿ, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಶರಣಗೌಡ ಉಳ್ಳೇಸೂಗುರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬೇಸಿಗೆಯಿಂದಾಗಿ ಸಿಲಿಂಡರ್ ಪೈಪ್ ಸೋರಿಕೆಯಾಗಿ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT