ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುದ್ದೆ ತೆರವುಗೊಳಿಸಲು ಸೂಚನೆ

Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಯೋಮಿತಿ ಮೀರಿದರೂ ಭಾರತ ಪ್ಯಾರಾಲಿಂಪಿಕ್ ಸಂಸ್ಥೆಯ (ಪಿಸಿಐ) ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿಯೇ ಮುಂದುವರಿದ ರತನ್ ಸಿಂಗ್ ಅವರಿಗೆ ಹುದ್ದೆ ತೆರವುಗೊಳಿಸುವಂತೆ ಯುವಜನ ಸೇವಾ ಹಾಗೂ ಕ್ರೀಡಾ ಸಚಿವಾಲಯ ನೋಟಿಸ್ ಜಾರಿ ಮಾಡಿದೆ.

`2010ರ ಕ್ರೀಡಾ ನೀತಿಯ ಪ್ರಕಾರ 70ಕ್ಕೂ ಅಧಿಕ ವರ್ಷದವರು ಕ್ರೀಡಾ ಆಡಳಿತದಲ್ಲಿ ಇರಬಾರದು ಎನ್ನುವ ನಿಯಮವಿದೆ.

ರತನ್ ಈ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಆದ್ದರಿಂದ ತಮ್ಮ ಸ್ಥಾನವನ್ನು ಅವರು ತೆರವು ಮಾಡಬೇಕು' ಎಂದು ಕ್ರೀಡಾ ಸಚಿವಾಲಯ ರತನ್ ಅವರಿಗೆ ನೀಡಿರುವ ನೋಟಿಸ್‌ನಲ್ಲಿ ತಿಳಿಸಿದೆ.

ಈ ನೋಟಿಸ್‌ನ ಪ್ರತಿಯನ್ನು ಪಿಸಿಐ ಅಧ್ಯಕ್ಷ ಸುಲ್ತಾನ್ ಅಹಮದ್ ಅವರಿಗೆ ಫೆಬ್ರುವರಿಯಲ್ಲಿಯೇ ಕಳುಹಿಸಿಕೊಟ್ಟಿದೆ. ಈ ಕುರಿತು ಪಿಸಿಐ ಎರಡು ತಿಂಗಳ ಹಿಂದೆ ರತನ್ ಅವರಿಗೆ ಷೋಕಾಸ್ ನೋಟಿಸ್ ನೀಡಿತ್ತು. ಕ್ರೀಡಾ ಸಚಿವಾಲಯದ ಈ ಕ್ರಮವನ್ನು ಪಿಸಿಐ ಸ್ವಾಗತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT