ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯದ ಕಾಯಿಲೆಯೇ? ರೆಪ್ಪೆ ಪರೀಕ್ಷಿಸಿ

Last Updated 16 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಲಂಡನ್, (ಪಿಟಿಐ): ನಿಮಗೆ ಹೃದಯದ ತೊಂದರೆ ಇದೆ ಎನ್ನುವುದನ್ನು ತಿಳಿದುಕೊಳ್ಳಬೇಕೆ? ಹಾಗಾದರೆ ನಿಮ್ಮ ಕಣ್ಣಿನ ರೆಪ್ಪೆಗಳನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ. 

 ಕಣ್ಣಿನ ಸುತ್ತ ಇರುವ ಚರ್ಮದ ಮೇಲೆ ಹಳದಿ ಕಲೆಗಳಿದ್ದರೆ ಹೃದಯದ ಕಾಯಿಲೆ ಇದೆ ಎಂದರ್ಥ ಎನ್ನುತ್ತದೆ  ಹೊಸ ಅಧ್ಯಯನ. 

 ಇದಕ್ಕಾಗಿ ಡೆನ್ಮಾರ್ಕ್‌ನ ಸಂಶೋಧಕರು ಸುಮಾರು 13,000 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಿದ್ದರು ಎಂದು `ಬ್ರಿಟಿಷ್ ಮೆಡಿಕಲ್ ಜರ್ನಲ್~ ವರದಿ ಮಾಡಿದೆ. 

 ಇವು ಕೊಲೆಸ್ಟರಾಲ್ ಕಲೆಗಳಾಗಿದ್ದು  ಕಣ್ಣಿನ ದೃಷ್ಟಿಗೆ ಯಾವುದೇ ತೊಂದರೆ ಸಂಭವಿಸದು. ಜನ ಸಾಮಾನ್ಯವಾಗಿ ಈ ಕಲೆಗೆ ಚರ್ಮರೋಗ ತಜ್ಞರಿಂದ ಔಷಧಿ ಮಾಡಿಸಿಕೊಳ್ಳುತ್ತಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT