ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ಸೌಲಭ್ಯ- ಮಿತ ಆಯ್ಕೆ: ಮಾರುತಿ

Last Updated 7 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಬೆಂಗಳೂರು: `ಎ-ಸ್ಟಾರ್', ವ್ಯಾಗನ್-ಆರ್, `ಆಮ್ನಿ ಡಿಲಕ್ಸ್' ಮತ್ತು ಆಲ್ಟೊ ಕೆ10 ಸರಣಿಯಲ್ಲಿ ಹೆಚ್ಚುವರಿ ಸೌಲಭ್ಯಗಳನ್ನೊಳಗೊಂಡ ವಿಶೇಷ ಕಾರುಗಳನ್ನು ಸೀಮಿತ ಆಯ್ಕೆ ಅವಕಾಶ ದೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದಾಗಿ ಮಾರುತಿ ಸುಜುಕಿ ಇಂಡಿಯ(ಎಂಎಸ್‌ಐ) ತಿಳಿಸಿದೆ.

`ಎ-ಸ್ಟಾರ್ ಆಕ್ಟೀವ್' 13 ಬಗೆಯ ಹೊಸ ಸೌಲಭ್ಯ ಹೊಂದಿದೆ. ರೂ. 23,000 ಬೆಲೆಯ ಈ ಸೌಲಭ್ಯಗಳು ರೂ. 14,000ಕ್ಕೆ ದೊರೆಯುತ್ತಿವೆ. `ವ್ಯಾಗನ್-ಆರ್ ಪ್ರೊ' ಮಾದರಿಗೆ ಹೊಸದಾಗಿ 11 ಸೌಲಭ್ಯಗಳನ್ನು ಸೇರಿಸಲಾಗಿದ್ದು, ರೂ. 30,000 ಬೆಲೆಯವು ರೂ. 20,000ಕ್ಕೆ ಲಭ್ಯವಾಗಲಿವೆ.

`ಆಲ್ಟೊ ಕೆ10 ನೈಟ್‌ರೇಸರ್' ಮಾದರಿಯಲ್ಲಿಯೂ 11 ಮೌಲ್ಯವರ್ಧಿತ ಸೇವೆಗಳನ್ನು ಸೇರಿಸಲಾಗಿದೆ. ರೂ. 25,000ರ ಈ ಸೌಲಭ್ಯಗಳು ರೂ. 13,490ಕ್ಕೆ ದೊರೆಯಲಿವೆ. `ಆಮ್ನಿ ಡಿಲಕ್ಸ್'ನಲ್ಲಿಯೂ ಹೆಚ್ಚುವರಿ ಸೌಲಭ್ಯಗಳನ್ನು ಸೇರಿಸಲಾಗಿದೆ. ಈ ಎಲ್ಲ ಕಾರುಗಳೂ ಸೀಮಿತ ಸಂಖ್ಯೆಯಲ್ಲಿ ಲಭ್ಯವಿವೆ ಎಂದು `ಎಂಎಸ್‌ಐ' ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT