ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ಹಣ ನೀಡಲು ಸಿ.ಎಂ. ಭರವಸೆ: ಬೆಳ್ಳುಬ್ಬಿ

Last Updated 22 ಅಕ್ಟೋಬರ್ 2012, 5:55 IST
ಅಕ್ಷರ ಗಾತ್ರ

ವಿಜಾಪುರ: ಫೆಬ್ರುವರಿ ಮೊದಲ ವಾರದಲ್ಲಿ ನಗರದಲ್ಲಿ ನಡೆಯಲಿರುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ  ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಭವನದಲ್ಲಿ ಕಾರ್ಯಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ ಬೆಳ್ಳುಬ್ಬಿ ಭಾನುವಾರ ಉದ್ಘಾಟಿಸಿದರು.


ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕಾರ್ಯಾಲಯದ ನಾಮಫಲಕವನ್ನು ಅನಾವರಣ ಗೊಳಿಸಿದರು.

ನಂತರ ಮಾತನಾಡಿದ ಸಚಿವರು, ಹಿಂಗಾರು ಮಳೆ ಉತ್ತಮವಾಗಿ ಬೀಳುತ್ತಿದ್ದು ಉತ್ತಮ ಬೆಳೆ ಬರುವ ನಿರೀಕ್ಷೆ ಇರುವುದರಿಂದ ಈ ಮೂಲಕ ಜಿಲ್ಲೆಯಲ್ಲಿ ಮಳೆಯಿಲ್ಲ ಎಂಬ ಕೊರತೆ ದೂರವಾಗಲಿದೆ. ಸಾಹಿತ್ಯ ಸಮ್ಮೇಳನ ವನ್ನು ರಾಜ್ಯದ ಇತರ ಭಾಗಗಳಿಗಿಂತ ಭಿನ್ನವಾಗಿ, ಸರಳತೆಯಿಂದ ಸಂಘಟಿತ ರಾಗಿ ತನು ಮನಃ ಧನದಿಂದ ಶ್ರಮಿಸಿ ಅರ್ಥಪೂರ್ಣವಾಗಿ ಯಶಸ್ವಿಗೊಳಿಸಿ ರಾಜ್ಯದ ಜನತೆ ವಿಜಾಪುರ ಸಮ್ಮೇಳನವನ್ನು ಸದಾ ಸ್ಮರಿಸುವ ರೀತಿಯಲ್ಲಿ ಮಾಡೋಣ ಎಂದರು.

ಸಿ.ಎಂ ಒಪ್ಪಿಗೆ: ಜಿಲ್ಲೆಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಮೊನ್ನೆ ಗುಲ್ಬರ್ಗದಲ್ಲಿ ಜರುಗಿದ ಸಚಿವ ಸಂಪುಟ ಸಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಕೊಂಡಿದ್ದು, ಅಗತ್ಯ ಪ್ರಸ್ತಾವವನ್ನು ಸಲ್ಲಿಸಿದರೆ ಹೆಚ್ಚುವರಿ ಅನುದಾನವನ್ನು ಒದಗಿಸುವುದಾಗಿ  ಸಿ.ಎಂ. ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಮಾತನಾಡಿ, ಸಮ್ಮೇಳನ ನಡೆಸುವ ಅವಕಾಶ ವಿಜಾಪುರಕ್ಕೆ ಶತಮಾನದ ನಂತರ ದೊರಕಿದೆ. ಎಲ್ಲರ ಆಶಯದಂತೆ ಸಮಾಜದ ಸರ್ವ ಜನತೆಯನ್ನು ಸಕ್ರಿಯ ವಾಗಿ ತೊಡಗಿಸಿಕೊಂಡು ಸಮ್ಮೇಳನ ವನ್ನು ಯಶಸ್ವಿಯಾಗಿ ನಡೆಸಲು ಸಮರೋ ಪಾದಿಯಲ್ಲಿ ಸಿದ್ಧತೆಗಳು ನಡೆಯಬೇಕಾ ಗಿದ್ದು, ಜಿಲ್ಲೆಯ ಎಲ್ಲ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಸಮ್ಮೇಳನದ ಸಿದ್ಧತೆಯಲ್ಲಿ ತೊಡಗಿಸಿಕೊಂಡು ದುಡಿಯುತ್ತೇವೆ ಎಂದು ಹೇಳಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತ ನಾಡಿ, ಈ ಸಮ್ಮೇಳನದ ಕಾರ್ಯಾಲ ಯದ ಉದ್ಘಾಟನೆಯ ದಿನದಂದು ಮಳೆ ಸುರಿದು ನಮ್ಮ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ಕನ್ನಡಾಂಬೆ ತೇರು ಎಳೆಯುವ ಕಾರ್ಯಕ್ಕೆ ಜಿಲ್ಲೆಯ ಸಕಲರು ಕೈ ಜೋಡಿಸಬೇಕು ಎಂದು ಭಿನ್ನವಿಸಿದರು.

ವೇದಿಕೆಯಲ್ಲಿ ಮಹಿಳಾ ವಿ.ವಿ. ಕುಲಪತಿ ಡಾ. ಮೀನಾ ಚಂದಾವರಕರ, ಜಿ.ಪಂ. ಸಿಇಒ ಗುತ್ತಿ ಜಂಬುನಾಥ, ನಗರಸಭೆ ಅಧ್ಯಕ್ಷ ಪರಶುರಾಮ ರಜಪುತ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಭೀಮಾಶಂಕರ ಹದನೂರ ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ, ಶರಣಪ್ಪ ಕಂಚಾಣಿ, ಎಂ.ಎನ್. ವಾಲಿ, ಸಿ.ಎಂ. ನುಚ್ಚಿ ಇದ್ದರು.
ಸಾಹಿತಿ ಮಹಾಂತ ಗುಲಗಂಜಿ, ಮೇಲುಪ್ಪರಗಿಮಠ, ಸಾಲಿಮಠ, ಚಂದ್ರಶೆಖರ ಕವಟಗಿ, ಎಸ್.ಎಂ. ಮಡಿವಾಳರ, ಸುರೇಶ ಬಿಜಾಪುರ ಹಾಗೂ ಹಲವು ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  

ಸೋಮಶೇಖರ ವಾಲಿ ಸ್ವಾಗತಿಸಿದರು. ಡಾ.ಮಲ್ಲಿಕಾರ್ಜುನ ಮೇತ್ರಿ ನಿರೂಪಿಸಿದರು. ರಂಗನಾಥ ಅಕ್ಕಲಕೋಟ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT