ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಕ್ಕಾಡಿಗೋಳಿ: ಕಂಬಳ ಮುಕ್ತಾಯ, 123 ಜೋಡಿ ಕೋಣ

ಕಂಬಳ ರೈತರ ನೈಜ ಕ್ರೀಡೆ: ಕುಮಾರಸ್ವಾಮಿ
Last Updated 17 ಡಿಸೆಂಬರ್ 2012, 10:55 IST
ಅಕ್ಷರ ಗಾತ್ರ

ಬಂಟ್ವಾಳ: ತುಳುನಾಡಿನಲ್ಲಿ ವಿಭಿನ್ನ ರೀತಿ ಮತ್ತು ವೈಶಿಷ್ಟ್ಯತೆ ಮೂಲಕ ಜೋಡು ಕರೆಯಲ್ಲಿ ದಷ್ಟಪುಷ್ಟವಾಗಿ ಸಾಕಿದ ಕೋಣಗಳನ್ನು ಓಡಿಸುವ ಮೂಲಕ ನಡೆಸುತ್ತಿರುವ ಜಾನಪದ ಕ್ರೀಡೆಯು ನೈಜ ರೈತರ ಮನೋರಂಜನೆ ಕ್ರೀಡೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಹೊಕ್ಕಾಡಿಗೋಳಿಯಲ್ಲಿ ಭಾನುವಾರ ಮುಕ್ತಾಯಗೊಂಡ ವೀರ-ವಿಕ್ರಮ ಜೋಡುಕರೆ ಕಂಬಳದಲ್ಲಿ ಶನಿವಾರ ರಾತ್ರಿ ಭಾಗವಹಿಸಿ ಅವರು ಮಾತನಾಡಿದರು.

ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳುವಾಯಿ ಸದಾನಂದ ಶೆಟ್ಟಿ ಕಂಬಳದ ಅಧ್ಯಕ್ಷತೆ ವಹಿಸಿದ್ದರು.
ಶಾಸಕರಾದ ಬಿ.ರಮಾನಾಥ ರೈ, ಜಮೀರ್ ಅಹ್ಮದ್, ಮಾಜಿ ಸಚಿವರಾದ ಕೆ.ಅಮರನಾಥ ಶೆಟ್ಟಿ, ಬಿ.ನಾಗರಾಜ ಶೆಟ್ಟಿ, ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸದಸ್ಯ ಎಂ.ತುಂಗಪ್ಪ ಬಂಗೇರ, ಜಿ.ಪಂ.ಮಾಜಿ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ತಾ.ಪಂ.ಸದಸ್ಯ ವಸಂತ ಕುಮಾರ್ ಅಣ್ಣಳಿಕೆ, ಮಾಜಿ ಸದಸ್ಯ ರತ್ನಕುಮಾರ್ ಚೌಟ, ಗ್ರಾ.ಪಂ.ಅಧ್ಯಕ್ಷರಾದ ಪ್ರಭಾಕರ ಪ್ರಭು, ಹರೀಶ ಆಚಾರ್ಯ, ಪ್ರಮುಖರಾದ ರೋಹಿತ್ ಹೆಗ್ಡೆ ಎರ್ಮಾಳ್, ಉಳಿಪಾಡಿಗುತ್ತು ರಾಜೇಶ ನಾಯ್ಕ, ಅಶ್ವಿನ್ ಜೆ.ಪಿರೇರ ಮತ್ತಿತರರು ಭಾಗವಹಿಸಿ ಶುಭ ಕೋರಿದರು.

ಸಮಿತಿ ಅಧ್ಯಕ್ಷ ಸುರೇಶ ಶೆಟ್ಟಿ, ಗೌರವ ಸಲಹೆಗಾರ ಶ್ರಿನಿವಾಸ ಆಳ್ವ, ಜಗನ್ನಾಥ ಶೆಟ್ಟಿ, ಪೊಡುಂಬ ಸಂಜೀವ ಶೆಟ್ಟಿ, ಸಂದೇಶ ಶೆಟ್ಟಿ, ನೋಣಾಲು ರಶ್ಮಿತ್ ಶೆಟ್ಟಿ, ರಾಘವೇಂದ್ರ ಭಟ್, ಬಾಬು ರಾಜೇಂದ್ರ ಶೆಟ್ಟಿ, ಎಚ್.ಎ.ರೆಹಮಾನ್, ಉಮೇಶ ಶೆಟ್ಟಿ ಕೊನೆರೊಟ್ಟು ಮತ್ತಿತರರು ಇದ್ದರು.

ಈ ಬಾರಿ ನಡೆದ ಕಂಬಳದಲ್ಲಿ ಒಟ್ಟು 123 ಜೋಡಿ ಓಟದ ಕೋಣಗಳು ಭಾಗವಹಿಸಿ ಕಂಬಳಾಸಕ್ತರಿಗೆ ಮನೋರಂಜನೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT