ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಗ್ರಹ ಸಂಸಾರ

Last Updated 3 ಫೆಬ್ರುವರಿ 2011, 16:35 IST
ಅಕ್ಷರ ಗಾತ್ರ

 ವಾಷಿಂಗ್ಟನ್ (ಪಿಟಿಐ): 2000 ಬೆಳಕಿನ ವರ್ಷಗಳಷ್ಟು ದೂರದಲ್ಲಿ ಆರು ಗ್ರಹಗಳು ಸೂರ್ಯನಂತಹ ನಕ್ಷತ್ರದ ಸುತ್ತ ಗಿರಕಿ ಹಾಕುತ್ತಿರುವುದನ್ನು ಖಗೋಳವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ನಾಸಾದ ಕೆಪ್ಲರ್ ಯೋಜನೆಯ ತಂತ್ರಜ್ಞಾನದ ನೆರವಿನಿಂದ ಇದನ್ನು ಕಂಡುಹಿಡಿದಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಇದನ್ನು ವಿಸ್ಮಯದ ಗ್ರಹಕೂಟ ಎಂದು ಬಣ್ಣಿಸಿದ್ದಾರೆ.

ಈ ಗ್ರಹ ಸಂಸಾರದ ಅತಿ ಚಿಕ್ಕ ಕಾಯ  ಭೂಮಿಗಿಂತ 2.3 ರಷ್ಟು ದೊಡ್ದದಾಗಿದ್ದರೆ ಅತಿ ದೊಡ್ಡ ಕಾಯ ಭೂಮಿಗಿಂತ 13.5ರಷ್ಟು ದೊಡ್ಡದಿದೆ. ತಾವು ಕಂಡುಹಿಡಿದಿರುವ ಈ ಸೂರ್ಯನಿಗೆ ವಿಜ್ಞಾನಿಗಳು ಕೆಪ್ಲರ್-11 ಎಂದು ನಾಮಕರಣ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT