ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಮ- ಹವನಗಳು ಮಾತ್ರ ಮೌಢ್ಯವೆ?

Last Updated 22 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕೆಲ ದಿನಗಳ ಹಿಂದೆ ಚಾಮರಾಜನಗರದಲ್ಲಿ ಜನಪ್ರತಿನಿಧಿಗಳು ಜಿಲ್ಲೆಗೆ ಅಂಟಿದ ಶಾಪ ವಿಮೋಚನೆಗಾಗಿ 12 ಲಕ್ಷ ಖರ್ಚು ಮಾಡಿ ಹೋಮ - ಹವನ ಮಾಡಿಸಿದ್ದಕ್ಕೆ ಅನೇಕ ವಿಚಾರವಾದಿಗಳು ಪತ್ರಿಕೆಗಳಲ್ಲಿ ಉದ್ದುದ್ದ ಖಂಡನಾ ಲೇಖನ (ಪತ್ರ) ಗಳನ್ನು ಬರೆದಿದ್ದಾರೆ.

`ಹೋಮ - ಹವನ ಎಂಬುದೆಲ್ಲ ಮೌಢ್ಯತೆ~ ಸರ್ಕಾರೀ ಬೊಕ್ಕಸಕ್ಕೆ, ಜನರ ತೆರಿಗೆ ಹಣಕ್ಕೆ ಇದು ಅನವಶ್ಯಕ ಹೊರೆ! ಹೋಮ - ಹವನ ಮಾಡಿದ್ದು ಒಮ್ಮೆ ಮಾತ್ರ. ಅದೂ ಕೆಲವೇ ಲಕ್ಷ ರೂಪಾಯಿಗಳು.
 
ಅದೂ ನಮ್ಮ (ಅಂದರೆ ನಮ್ಮ ದೇವಸ್ಥಾನಗಳಿಂದ ಬರುವ ನೂರಾರು ಕೋಟಿ ರೂಪಾಯಿಗಳಲ್ಲಿ ಒಂದು ಅಣುವಿದ್ದಂತೆ) ಹಣದ ಒಂದು ಅಲ್ಪಭಾಗವಷ್ಟೆ; ಹೋಮ- ಹವನಗಳೇನೂ ಯಾವುದೇ ಕೋಮಿನವರನ್ನು ತುಷ್ಟೀಕರಣಗೊಳಿಸಲು ಆಯೋಜಿಸಿದವಲ್ಲ.

ಒಂದು ಪ್ರದೇಶ ಶಾಪಗ್ರಸ್ತ ಎಂಬುದು ಖಂಡನಾರ್ಹವಾದರೆ, ಒಂದು ಪ್ರದೇಶ `ಪುಣ್ಯಗ್ರಸ್ತ~ (?) ಉದಾ: ತೀರ್ಥಕ್ಷೇತ್ರ - ಎಂಬುದೂ ಖಂಡನಾರ್ಹವಲ್ಲವೇ? ಅಥವಾ ಹಿಂದೂಗಳ ತೀರ್ಥಯಾತ್ರೆ ಮಾತ್ರ ಮೌಢ್ಯವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT