ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಕ್ಕೆ ಸಜ್ಜಾಗಿದ್ದೇವೆ

ಅಕ್ಷರ ಗಾತ್ರ

ಈ ಬಾರಿಯ ವಿಶ್ವಕಪ್ ಕ್ರಿಕೆಟ್‌ನ ನಮ್ಮ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಲು ಕಾತರದಿಂದ ಕಾಯ್ದಿದ್ದೇವೆ. ತಂಡದಲ್ಲಿ ಎಲ್ಲವೂ ವ್ಯವಸ್ಥಿತವಾಗಿದೆ. ಹೊಂದಾಣಿಕೆಯ ಕೊರತೆಯೂ ಇಲ್ಲ. ಈಗ ನಾವು ಸಂಪೂರ್ಣವಾಗಿ ಹೋರಾಟಕ್ಕೆ ಸಜ್ಜಾಗಿದ್ದೇವೆ. ಭಾರತಕ್ಕೆ ಆಗಮಿಸಿದ ನಂತರ ಸಾಕಷ್ಟು ಕಾಲ ಅಭ್ಯಾಸ ಮಾಡಿದ್ದೇವೆ.
ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದೂ ನಮ್ಮ ಆಟಗಾರರಿಗೆ ಕಷ್ಟವಾಗಲಿಲ್ಲ. ದೈಹಿಕ ಸಾಮರ್ಥ್ಯವನ್ನು ಕಾಯ್ದುಕೊಂಡು ಮುಂದಿನ ಸವಾಲಿನ ಹಾದಿಯಲ್ಲಿ ವಿಶ್ವಾಸದಿಂದ ಮುನ್ನುಗ್ಗುವ ವಿಶ್ವಾಸವೂ ಇದೆ. ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ಕೆಲವು ತಂಡಗಳಿಗೆ ಅಭ್ಯಾಸ ಪಂದ್ಯಗಳು ಮಹತ್ವದವಾಗಿ ಕಾಣಿಸಿರಲಿಕ್ಕಿಲ್ಲ. ಆದರೆ ನಮ್ಮ ಮಟ್ಟಿಗೆ ಅಭ್ಯಾಸ ಪಂದ್ಯ ಸಾಕಷ್ಟು ಪ್ರಯೋಜನಕಾರಿ ಎನಿಸಿತು. ತಂಡದಲ್ಲಿನ ಕೆಲವು ಆಟಗಾರರಿಗೆ ದೊಡ್ಡ ಟೂರ್ನಿಯಲ್ಲಿ ಆಡುವುದಕ್ಕೆ ಮುನ್ನ ಪಂದ್ಯದಲ್ಲಿ ಆಡಿದ ಅನುಭವ ಪಡೆಯುವುದು ಅಗತ್ಯವಾಗಿತ್ತು. ತಾಲೀಮು ಪಂದ್ಯದಲ್ಲಿ ಆಡಿದ್ದರಿಂದ ಹೊಸಬರೂ ಮುಂದಿರುವ ದೊಡ್ಡ ಕದನಗಳಿಗೆ ಸಜ್ಜಾಗಲು ಅನುಕೂಲಕಾರಿ ಆಯಿತು.

ನವದೆಹಲಿಯಲ್ಲಿ ಆಡುವುದು ನಮ್ಮ ತಂಡದ ಎಲ್ಲ ಆಟಗಾರರಿಗೆ ಹೊಸ ಅನುಭವ. ಆದ್ದರಿಂದ ಇಲ್ಲಿ ಕೆಲವು ದಿನ ಅಭ್ಯಾಸ ಮಾಡುವುದಕ್ಕೆ ಅವಕಾಶ ಸಿಕ್ಕಿದ್ದು ಸಂತಸ. ನಮ್ಮ ತಂಡವು ಇಲ್ಲಿ ಕೊನೆಯ ಬಾರಿ ಆಡಿದ್ದು 1991ರಲ್ಲಿ. ಆನಂತರದ ಅವಧಿಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಎಲ್ಲವೂ ಹೊಸದೆನ್ನುವಂಥ ವಾತಾವರಣ. ಪಿಚ್ ಗುಣವಿನ್ನೂ ಸ್ಪಷ್ಟವಾಗಿಲ್ಲ. ಅಂಗಳದ ಹೊರ ಆವರಣದಲ್ಲಿ ಚೆಂಡು ಎಷ್ಟು ವೇಗವಾಗಿ ನುಗ್ಗುತ್ತದೆಂದು ಅಂದಾಜು ಮಾಡುವುದೂ ಕಷ್ಟವಾಗಿದೆ. 
 -ಗೇಮ್‌ಪ್ಲಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT