ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಯುರ್ವೇದಕ್ಕೆ ಉತ್ತೇಜನ ಅಗತ್ಯ’

Last Updated 5 ಡಿಸೆಂಬರ್ 2013, 6:20 IST
ಅಕ್ಷರ ಗಾತ್ರ

ಸಿಂಧನೂರು: ನೂರಾರು ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಆಯುರ್ವೇದ ಶಾಸ್ತ್ರದ ಕಡೆಗಣನೆ­ಯಾಗುತ್ತಿದ್ದು ಸರ್ಕಾರ ಇದರ ಉತ್ತೇಜನಕ್ಕೆ ಮುಂದಾಗಬೇಕಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ. ಕರವೀರಪ್ರಭು ಕ್ಯಾಲಕೊಂಡ ಹೇಳಿದರು.

ನಗರದ ತಾಲ್ಲೂಕು ಆರೋ­ಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆಯುಷ್ ವೈದ್ಯಾಧಿಕಾರಿಗಳ ಕ್ಷೇಮಾ­ಭಿವೃದ್ಧಿ ಸಂಘದ ಸಂಯುಕ್ತ ಆಶ್ರಯ­ದಲ್ಲಿ ಬುಧವಾರ ಹಮ್ಮಿ­ಕೊಂಡಿದ್ದ ಮಹರ್ಷಿ ಧನ್ವಂತರಿ ಜಯಂತಿ ಕಾರ್ಯ­ಕ್ರಮದಲ್ಲಿ  ಅವರು ಮಾತನಾಡಿದರು.

ನಮ್ಮ ಹಿರಿಯರು ಕಂಡುಕೊಂಡಿದ್ದ ಈ ಆಯುರ್ವೇದ ಶಾಸ್ತ್ರ ನಮಗೆ ಬಳುವಳಿಯಾಗಿ ಬಂದಿದ್ದು,ಸರ್ಕಾರ ಇದರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಯುವಪೀಳಿಗೆಯಲ್ಲಿ ಕುಂದುತ್ತಿರುವ ಈ ಬಗೆಗಿನ ಆಸಕ್ತಿಗೆ ಮರುಜೀವ ನೀಡಿ ಪ್ರಚುರಪಡಿಸಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿ ಮಾತ­ನಾ­ಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸೈಯದ್‌ ಹಸನ್‌ಹುಸೇನ, ದೀರ್ಘ­ಕಾಲದ ರೋಗಗಳಿಗೆ ಆಯುರ್ವೇದ­ದಲ್ಲಿ ಪರಿಣಾಮಕಾರಿ ಚಿಕಿತ್ಸೆ ಲಭ್ಯ­ವಿದ್ದು ಇದರ ಉಪಯೋಗ ಪಡೆದು­ಕೊಳ್ಳಬೇಕು ಎಂದು ಕರೆ ನೀಡಿರು.

ಡಾ.ಅನಿಲ್‌ ತಾಳಿಕೋಟೆ, ಡಾ. ರಮ್ಯದೀಪಿಕಾ ಮಾತನಾಡಿ, ಪ್ರತಿ­ಯೊಬ್ಬರು ತಮ್ಮ ಮನೆಯ ಮುಂದೆ ಆಯುರ್ವೇದ ಗಿಡಗಳನ್ನು ಬೆಳೆಸಿ ಮನೆ ಔಷಧಿಯಾಗಿ ಉಪ­ಯೋಗಿ­ಸಿಕೊ­ಳ್ಳುವಂತೆ ಸಲಹೆ ನೀಡಿದರು.

ಡಾ.ಮಂಜುನಾಥ ಅಣಗೌಡರ್, ಡಾ. ವಿರುಪಾಕ್ಷಪ್ಪ, ಡಾ.ಎಸ್.­ಎಸ್. ಸುಂಕದ, ಕ್ಷೇತ್ರ ಆರೋಗ್ಯ ಶಿಕ್ಷಣಾ­ಧಿಕಾರಿ ಈಶ್ವರ ಎಚ್. ದಾಸಪ್ಪನವರ್, ಮಾತನಾಡಿದರು.

ಆಯುಷ್ ವೈದ್ಯಾಧಿಕಾರಿಗಳ ಕ್ಷೇಮಾ­­ಭಿವೃದ್ಧಿಸಂಘದ ಅಧ್ಯಕ್ಷ ಡಾ. ಮೌನೇಶ ಅಧ್ಯಕ್ಷತೆ ವಹಿಸಿದ್ದರು.

ಡಾ. ಪ್ರಶಾಂತ, ರಂಗನಾಥ, ರಾಮಣ್ಣ ಜಿ.ಎ. ಹಾಗೂ ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು. ಡಾ. ಬಸವರಾಜ ನಿರೂಪಿಸಿದರು. ಡಾ. ಭಾಗೀರಥಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT