ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಯಕ ನಿಷ್ಠೆ ವೃತ್ತಿ ಘನತೆ ಹೆಚ್ಚಿಸುತ್ತದೆ’

Last Updated 23 ಸೆಪ್ಟೆಂಬರ್ 2013, 6:38 IST
ಅಕ್ಷರ ಗಾತ್ರ

ಲಿಂಗಸುಗೂರು(ಮುದಗಲ್ಲು): ಎಲ್ಲ ಕ್ಷೇತ್ರಗಳಲ್ಲಿ ಕಾಯಕ ನಿಷ್ಠೆ ಇರಬೇಕು. ಕಾಯಕ ನಿಷ್ಠೆಯಿಂದಾಗಿ ವೃತ್ತಿ ಘನತೆ ಹೆಚ್ಚಳವಾಗುತ್ತದೆ. ಪ್ರತೊಯೊಬ್ಬರು ತಾವು ಮಾಡುವ ಕಾಯಕದ ಮೇಲೆ ಗೌರವ ಭಾವನೆ ಹೊಂದಿರಬೇಕು ಎಂದು  ಡಾ. ಈಶ್ವರ ಸವಡಿ ಅಭಿಮತ ವ್ಯಕ್ತಪಡಿಸಿದರು.

ಶುಕ್ರವಾರ ಮುದಗಲ್ಲು ವಲಯ ಮಟ್ಟದ ಪಾ್ರಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘಗಳು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾಯರ್ಕ್ರಮದಲ್ಲಿ ಮಾತನಾಡಿ, ಶಿಕ್ಷಕ ವೃತ್ತಿ ಸಮಾಜದಲ್ಲಿ ಪವಿತ್ರವಾದ ಸ್ಥಾನ ಪಡೆದುಕೊಂಡಿದೆ.  ಶಿಕ್ಷಕರು ಪಾಠದ ಜತೆಗೆ ಮಾಡುವ ಚಟುವಟಿಕೆಗಳು ವಿದ್ಯಾರ್ಥಿಗಳ ಮೇಲೆ ಅಪಾರವಾದ ಪರಿಣಾಮ ಬೀರುತ್ತವೆ ಎಂದು ಹೇಳಿದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಜಿಮಲಂಗಬಾಬಾ ಹಾಗೂ ಜಿಲ್ಲಾ ಮಟ್ಟದಲ್ಲಿ ವಿವಿಧ ಪ್ರಶಸ್ತಿಗೆ ಪುರಸ್ಕೃತರಾದ ಶಾ್ಯಮಸುಂದರ ಛತ್ತರ, ಶಿವಪ್ಪ ಕನ್ನಾಳ, ಶಾ್ಯಮರಾವ್‌ ಜಕ್ಕೇರಮಡುತಾಂಡಾ, ಗಿರೀಶ ಪಿಕಳಿಹಾಳ, ರಾಯಗುಂಡಪ್ಪ ಛತ್ತರ ಸೇರಿದಂತೆ ಇತರೆ ಶಿಕ್ಷಕರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅಮರೇಶ ಭೋವಿ ಸನ್ಮಾನಿಸಿ ಗೌರವಿಸಿದರು.

ಪಾ್ರಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಶಿವಯೋಗಪ್ಪ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ದೈಹಿಕ ಪರಿವೀಕ್ಷಕ ಬಸವರಾಜ ಮೂಲಮನಿ, ಬಿಆರ್‌ಪಿ ನಾಗನಗೌಡ ಭಯ್ಯಾಪೂರ, ಶಿಕ್ಷಣ ಸಂಯೋಜಕ ಮಹಾ­ಮುನಿಯಪ್ಪ. ಹಿರಿಯ ಶಿಕ್ಷಕರಾದ ಬಾಲನಗೌಡ, ವಿರುಪಾಕ್ಷ್ಯ ಆಮದಿಹಾಳ, ಅಕ್ಕಮಹಾದೇವಿ, ಶೋಭ, ಗುರುಬಸಪ್ಪ, ಮಾನಪ್ಪ, ಮರಿಯಪ್ಪ, ವಿಠೋಬ, ರವೀಂದ್ರ, ವೀರಯ್ಯ, ಉಮೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT