ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನ ಬೆಂಬಲಿಸಿದರೆ ಇನ್ನಷ್ಟು ಪ್ರಗತಿಗೆ ಶ್ರಮಿಸುವೆ’

Last Updated 21 ಮಾರ್ಚ್ 2014, 11:24 IST
ಅಕ್ಷರ ಗಾತ್ರ

ಉಡುಪಿ: ‘ಸಂಸದರ ನಿಧಿಯನ್ನು ಸಧ್ಬಳಕೆ ಮಾಡಿದ್ದೇನೆ ಮತ್ತು ರಾಜ್ಯ ಸಭಾ ಸದಸ್ಯರ ನಿಧಿಯು ಜಿಲ್ಲೆಗೆ ವಿನಿ ಯೋಗಿಸಲ್ಪಟ್ಟಿದೆ. ದೊರೆತ ಅಲ್ಪಾವ ಧಿಯಲ್ಲಿ ವಿಮಾನ, ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಬಗ್ಗೆ ಕಾರ್ಯಯೋಜನೆ ರೂಪಿಸಿದ್ದೇನೆ’ ಎಂದು ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದರು.

ನಗರದ ಬ್ರಹ್ಮಗಿರಿಯ ಕಾಂಗ್ರೆಸ್ ಭವನ ದಲ್ಲಿ ಮಂಗಳವಾರ ನಡೆದ ನಗರಸಭಾ ಸದಸ್ಯರ ಹಾಗೂ ವಾರ್ಡ್ ಮುಖ್ಯಸ್ಥರ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಹೊಸ ರೈಲುಗಳು ಮಂಜೂರಾಗಿವೆ. ಮಂಗಳೂರು ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆ ಗೇರಿಸಲಾಗಿದೆ. ಅರಬ್ ರಾಷ್ಟ್ರಗಳಿಗೆ ನೇರ ವಿಮಾನ ಯಾನ ಸಂಪರ್ಕ ಕಲ್ಪಿಸಲಾಗಿದೆ. ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿಗೊಳಿಸಿ ರಾಷ್ಟ್ರೀಯ ಹೆದ್ದಾರಿ ಯಾಗಿ ಪರಿವರ್ತಿಸುವಲ್ಲಿ ಸಫಲನಾ ಗಿದ್ದೇನೆ. ಒಟ್ಟಾರೆ ಕೆಲಸ ತೃಪ್ತಿ ತಂದಿದೆ ಎಂದು ಹೇಳಿದರು.
ಮುಂದಿನ ಚುನಾವಣೆಯಲ್ಲಿ ಜನತೆಯ ಸಂಪೂರ್ಣ ಬೆಂಬಲ ದೊರಕುವುದೆಂಬ ಆಶಯ ಇದೆ ಎಂದರು."

‘ಜಯಪ್ರಕಾಶ್‌ ಹೆಗ್ಡೆ ಅವರು ಕೇವಲ ಒಂದು ವರ್ಷ ಹತ್ತು ತಿಂಗಳ ಅವಧಿ ಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಆದ್ದರಿಂದ ಕಾರ್ಯಕರ್ತರು ಯಾವುದೇ ಅಂಜಿಕೆ– ಅಳುಕು ಇಲ್ಲದೆ ಅಭಿವೃದ್ಧಿಯ ವಿಷಯವನ್ನು ಮುಂದಿಟ್ಟು ಜನರಲ್ಲಿ ಮತ ಯಾಚಿಸಬಹುದು’ ಎಂದು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.

‘ವಿದ್ಯುತ್ ನಿಲುಗಡೆ ಮಾಡದಿರುವ ಬಗ್ಗೆ ಈಗಾಗಲೇ ವಿದ್ಯುತ್ ಸಚಿವ ರೊಡನೆ ಸಮಾಲೋಚಿಸಿದ್ದು, ಉಷ್ಣ ವಿದ್ಯುತ್ ಸ್ಥಾವರ ಇರುವ ಪ್ರದೇಶಗಳಿಗೆ ವಿದ್ಯುತ್ ನಿಲುಗಡೆ ಗೊಳಿಸಬಾರದೆಂಬ ಬೇಡಿಕೆ ಇಟ್ಟಿದ್ದೇವೆ, ಮುಂದಿನ ದಿನ ಗಳಲ್ಲಿ ಜಿಲ್ಲೆಗೆ ಬೇಕಾಗುವ ೩೦೦ ಮೆಗಾವ್ಯಾಟ್ ವಿದ್ಯುತ್ತನ್ನು ನೀಡುವ ಭರವಸೆ ಸಚಿವರಿಂದ ದೊರಕಿದೆ’ ಎಂದು ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದರು.

ಪಕ್ಷದ ಮುಖಂಡರಾದ ಬಿ.ನರಸಿಂಹ ಮೂರ್ತಿ, ಅಶೋಕ್ ಕುಮಾರ್ ಕೊಡವೂರು, ಪ್ರಕಾಶ್ ಕೊಡವೂರು, ದಿವಾಕರ ಕುಂದರ್, ದಿನೇಶ್ ಪುತ್ರನ್, ಕೃಷ್ಣಮೂರ್ತಿ ಆಚಾರ್ಯ, ಕೇಶವ ಕೋಟ್ಯಾನ್, ನಗರಸಭಾ ಅಧ್ಯಕ್ಷ ಪಿ. ಯುವರಾಜ, ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಸಲಿನ್ ಕರ್ಕಡ, ಮೀನಾಕ್ಷಿ ಮಾಧವ ಬನ್ನಂಜೆ, ಸುನೀಲ್ ಬಂಗೇರ, ವಿಕಾಸ್ ಶೆಟ್ಟಿ, ಕುಶಲ ಶೆಟ್ಟಿ, ಯತೀಶ್ ಕರ್ಕೇರಾ, ರಮೇಶ್ ಕಾಂಚನ್, ಪ್ರಖ್ಯಾತ್ ಶೆಟ್ಟಿ, ಅಮೃತ್ ಶೆಣೈ, ಯತೀಶ್ ಬಂಗೇರಾ, ಕೀರ್ತಿ ಶೆಟ್ಟಿ, ಜನಾರ್ದನ ಭಂಡಾರ್ಕರ್, ಭಾಸ್ಕರ್ ರಾವ್ ಕಿದಿಯೂರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT