ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಪದ ಕಲೆ ವಿಸ್ತಾರವಾಗಿ ಬೆಳೆದಿಲ್ಲ’

Last Updated 21 ಡಿಸೆಂಬರ್ 2013, 4:55 IST
ಅಕ್ಷರ ಗಾತ್ರ

ವಿದ್ಯಾಗಿರಿ (ಮೂಡುಬಿದಿರೆ): ಜನಪದ ಸಂಸ್ಕೃತಿಯನ್ನ ಒಳಗೊಂಡ ಕವಿತೆ, ಕತೆ ಇಲ್ಲವೆ ಕುಣಿತಗಳು ತನ್ನದೇ ಆದ ಒಂದು ರೀತಿಯ ವಿಶೇಷ ಸ್ಥಾನಮಾನವನ್ನು ಪುರಾತನ ಕಾಲದಿಂದಲೂ ಹೊಂದಿವೆ. ಆದರೂ ಈ ಕಲೆ ಇನ್ನೂ ಒಂದು ವರ್ಗಕ್ಕೆ ಎಂಬಂತೆ ಸೀಮಿತ­ವಾಗಿದೆ ಎಂದು ಮಂಗಳೂರು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ  ಡಾ.ಅಭಯ್ ಕುಮಾರ್ ಹೇಳಿದರು.

ಅವರು ಆಳ್ವಾಸ್ ವಿಶ್ವ ನುಡಿಸಿರಿ  ವಿರಾಸತ್‌ 2013 ರ ಸಮ್ಮೇಳನದ ನಾಡೋಜ ಎಚ್,ಎಲ್ ನಾಗೇಗೌಡ ವೇದಿಕೆಯಲ್ಲಿ ಶುಕ್ರವಾರ ನಡೆದ ’ಕರಾವಳಿಯ ಜನಪದ ಕುಣಿತಗಳು’ ವಿಷಯದ ಕುರಿತು ಉಪನ್ಯಾಸ ನೀಡಿದರು.

ಜನಪದ ಕವಿತೆಗಳು ತನ್ನದೇ ಆದಂತಹ ಸೊಗಡನ್ನು ಹೊಂದಿವೆ. ಈ ಹಾಡುಗಳು ಹೆಚ್ಚಾಗಿ ಕರಾವಳಿ ಭಾಗದ ಗ್ರಾಮಾಂತರ ಪ್ರದೇಶದಲ್ಲಿ ಅದರಲ್ಲೂ ಮುಖ್ಯವಾಗಿ ಹಿಂದುಳಿದ ವರ್ಗದವರಲ್ಲಿ ಕಾಣ ಸಿಗುತ್ತವೆ. ಈ ವರ್ಗದ ಜನ ಕೃಷಿ, ಕಾರ್ಯದಲ್ಲಿ ತೊಡಗಿರುವಾಗ, ಹಬ್ಬ ಹರಿದಿನ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಜನಪದ ಹಾಡು, ನತ್ಯಕ್ಕೆ ಆದ್ಯತೆ ನೀಡುತ್ತಾರೆ.ಜನಪದ ಆಚರಣೆಗಳು ಈ ವರ್ಗದ ಜನರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಈ ಕಲೆಯನ್ನು ಮೇಲ್ವರ್ಗದವರು ಆಚರಣೆ ಮಾಡು­ತ್ತಿಲ್ಲ.

ಇದನ್ನು ಎಲ್ಲ  ವರ್ಗದವರು ಆಚರಣೆಯಾಗು­ವಂ­ತಾಗಬೇಕು. ದೇವಸ್ಥಾನ, ಸಾರ್ವಜನಿಕ ಹಬ್ಬ ಹರಿದಿನಗಳಲ್ಲಿ ಜನಪದ ಕಲೆಗಳ ಪ್ರದರ್ಶನಕ್ಕೆ ಅವ­ಕಾಶ ಸಿಕ್ಕಾಗ ಈ ಕಲೆ ಹೆಚ್ಚು ವಿಸ್ತಾರವಾಗಿ ಬೆಳೆದು ಜನಪ್ರಿಯತೆಯನ್ನು ಪಡಕೊಳ್ಳುತ್ತದೆ ಎಂದರು. ಯದುಪತಿ ಗೌಡ ಪ್ರಾತ್ಯಕ್ಷಿಕೆ ವಿವರಣೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT