ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾತ್ಯತೀತರು ಮಮತಾ ಬೆಂಬಲಿಸಿ’

Last Updated 15 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣ­ಗಣನೆ ಆರಂಭ­ವಾಗಿದ್ದು, ಕಾಂಗ್ರೆಸ್‌ ಮುಖಂಡ ರಶೀದ್‌ ಅಲ್ವಿ ಅವರು, ಜಾತ್ಯತೀತ ಪಕ್ಷಗಳು ಮಮತಾ ಬ್ಯಾನರ್ಜಿ ಅವರನ್ನು ಜಾತ್ಯತೀತ ನಾಯಕಿ ಎಂದು ಒಪ್ಪಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕಾದರೆ ಎಲ್ಲ ಜಾತ್ಯತೀತ ಪಕ್ಷಗಳು ಒಗ್ಗೂಡಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸುವ ಮೂಲಕ ಅವರನ್ನು ಜಾತ್ಯತೀತ ಪಕ್ಷಗಳ  ನಾಯಕರೆಂದು ಒಪ್ಪಿಕೊಳ್ಳಬೇಕಿದೆ.

ಯುಪಿಎ ಅಧಿಕಾರ ಹಿಡಿಯುವುದು ಬಹುತೇಕ ಕಷ್ಟ ಎಂದಿರುವ ಅವರು ಎಲ್ಲ  ಜಾತ್ಯತೀತ ಶಕ್ತಿಗಳು ಮೋದಿಗೆ ಪ್ರಧಾನಿ ಹುದ್ದೆಯನ್ನು  ತಪ್ಪಿಸಬೇಕು. ಮಮತಾ ಬ್ಯಾನರ್ಜಿ ಅವರು ಒಬ್ಬ ಪ್ರಾಮಾಣಿಕ ವ್ಯಕ್ತಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಕಾಂಗ್ರೆಸ್‌ ಅಂತರ
ರಶೀದ್‌ ಅಲ್ವಿ ಹೇಳಿಕೆಯಿಂದ ಕಾಂಗ್ರೆಸ್‌ ಅಂತರ ಕಾಯ್ದು­ಕೊಂಡಿದೆ. ಇದು ಅವರ ವೈಯ­ಕ್ತಿಕ ಅಭಿಪ್ರಾಯ. ಫಲಿತಾಂಶ ಘೋಷ­ಣೆಗೆ ಮುನ್ನ ಇಂತಹ ಯಾವುದೇ ನಿರ್ಧಾರವನ್ನು ಪಕ್ಷ ತಿರಸ್ಕರಿಸುತ್ತದೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆ­ವಾಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT