ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತರಳಬಾಳು ಹುಣ್ಣಿಮೆ ವಿಶಿಷ್ಟ ಆಚರಣೆ’

Last Updated 10 ಜನವರಿ 2014, 7:08 IST
ಅಕ್ಷರ ಗಾತ್ರ

ಶಿಗ್ಗಾವಿ: ನಾಡಿನ ಇತಿಹಾಸದಲ್ಲಿ ತರಳಬಾಳು ಹುಣ್ಣಿಮೆ ವಿಶಿಷ್ಟ ಆಚರಣೆ ಮೂಲಕ ಖ್ಯಾತಿ ಹೊಂದಿದ್ದು, ಇಡಿ ಮನುಕುಲದಲ್ಲಿ ಶಾಂತಿ, ನೆಮ್ಮದಿಗೆ ನಾಂದಿಯಾಗಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಮಹಾಮಂಟಪದ ಶಂಕುಸ್ಥಾಪನೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ತರಳಬಾಳು ಹುಣ್ಣಿಮೆ ಮಹೋತ್ಸವ ಸುಮಾರು ವರ್ಷಗಳಿಂದ ಸಮಾಜಿ ಮುಖಿಯಾಗಿ ವಿಶೀಷ್ಠ ಮಹತ್ವವನ್ನು ಸಾರುತ್ತಿದೆ.  ನಾಡಿನ ಹಿರಿಮ್ಮೆಯ ಧಾರ್ಶನಿಕರು, ಶರಣರು, ಸಾಹಿತಿಗಳ ಬೆಂಬಲ, ಪ್ರೋತ್ಸಾಹದಿಂದ ಇಲ್ಲಿನ ಶ್ರೀಮಂತಿಕೆ ಹೆಚ್ಚಿಸಲು ಸಾಧ್ಯವಾಗಿದೆ. ಅದರಿಂದ ಶೈಕ್ಷಣಿಕ, ಧಾರ್ಮಿಕ ಹಾಗೂ ಮೌಲ್ಯಗಳಲ್ಲಿ ಬದಲಾವಣೆ ಪರ್ವ ಆರಂಭವಾಗಿದೆ. ನಾಗರೀಕತೆಯಿಂದ ಸಾಂಸ್ಕೃತಿಕತೆ ಬಿಂಬಿಸುವ ತತ್ವಜ್ಞಾನಿಗಳ ಸಂಗಮ ಈ ಕಾರ್ಯಕ್ರಮದಾಗಿದೆ ಎಂದರು.

ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಮನುಷ್ಯನಿಗೆ ಅಧಿಕಾರ, ಶ್ರೀಮಂತಿಕೆ ಶಾಶ್ವತವಲ್ಲ. ಆದರೆ ಬದುಕಿನ ಅವಧಿಯಲ್ಲಿ ದಾನ ಧರ್ಮ ಮಾಡುವ ಮೂಲಕ ಪಾವನರಾಗಬೇಕು. ತರಳಬಾಳು ಹುಣ್ಣಿಮೆ ಮಹೋತ್ಸವ ಗೌರಿಶಂಕರದಷ್ಟು ಎತ್ತರಕ್ಕೆ ಹಬ್ಬಿದೆ. 

ಶರೀಫರ್, ಕನಕದಾಸರ ಈ ಪುಣ್ಯ ಕ್ಷೇತ್ರದಲ್ಲಿ ಈ ಕಾರ್ಯಕ್ರಮದಿಂದ ಮತ್ತೆ ಧಾರ್ಮಿಕ ಬೆಳಕನ್ನು ಚೆಲ್ಲುವಂತಾಗಿದೆ ಎಂದರು.

ತರಳಬಾಳುಪೀಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಮಾತನಾಡಿ, ತರಳಬಾಳು ಹುಣ್ಣಿಮೆ ಮಹೋತ್ಸವ ಸುಮಾರು ೬ ದಶಕಗಳಿಂದ ನಡೆಯುತ್ತಾ ಬಂದಿದ್ದು, ತನ್ನದೇ ಆದ ವಿಶಿಷ್ಟ ಪರಂಪರೆಯಿಂದ ನಾಡಿನ ಹಬ್ಬವಾಗಿ ಜನಮನದಲ್ಲಿ ಮೂಡಿದೆ. ಕೌಟುಂಬಿಕ ಜೀವನ ಶಿಥಿಲಾವ್ಯವಸ್ಥೆಯಲ್ಲಿವೆ. ಅದರಲ್ಲಿ ಸರ್ವ ಜನಾಂಗದವರು ಸೇರಿ ಈ ಹುಣ್ಣಿಮೆ ಆಚರಿಸುತ್ತಿರುವುದು ಹರ್ಷ ತಂದಿದೆ ಎಂದರು.

ಹರಿಹರದ ಪಂಚಮಸಾಲಿಪೀಠದ ಡಾ.ಸಿದ್ಧಲಿಂಗ ಸ್ವಾಮೀಜಿ, ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಬಂಕಾಪುರದ ರೇವಣಸಿದ್ದೇಶ್ವರ ಸ್ವಾಮೀಜಿಗಳ, ವಿರಕ್ತಮಠದ ಸಂಗನಬಸವ ಸ್ವಾಮೀಜಿಗಳ ಮಾತನಾಡಿದರು. ಮಾಜಿ ಶಾಸಕ ರಾಜಶೇಖರ ಸಿಂಧೂರ, ಶಂಕರಗೌಡ ಪಾಟೀಲ, ಪ್ರೇಮಾ ಪಾಟೀಲ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಲಕೋಟಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸಿ.ಎಸ್.ಪಾಟೀಲ, ಸರೋಜಾ ಆಡಿನ, ಚನ್ನಪ್ಪ ಮಂತ್ರೋಡಿ, ಸಣ್ಣಪ್ಪ ಬುಳಕ್ಕನವರ, ಹಿರೇಕೆರೂರ ಎಪಿಎಂಸಿ ಅಧ್ಯಕ್ಷ ಎಸ್.ಎಸ್.ಪಾಟೀಲ ಉಪಸ್ಥಿತರಿದ್ದರು. ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಸ್ವಾಗತಿಸಿದರು. ಉಪನ್ಯಾಸಕ  ರಾಜಶೇಖರಯ್ಯ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT