ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಾಂತ್ರಿಕ ಪದ್ಧತಿ ಅಳವಡಿಸಿಕೊಳ್ಳಿ’

Last Updated 20 ಸೆಪ್ಟೆಂಬರ್ 2013, 6:57 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ನಮ್ಮಲ್ಲಿರುವ ಸಂಪ­ನ್ಮೂಲಗಳಿಗೆ ಹೊಸ ತಾಂತ್ರಿಕ ಪದ್ಧತಿ­ಯನ್ನು ಅಳವಡಿಸಿಕೊಂಡು ಹೆಚ್ಚು ಹೆಚ್ಚು ಪ್ರಯೋಗಗಳನ್ನು ಮಾಡ­ಬೇಕು’ ಎಂದು ಜೇಸಿಐ ಅಧ್ಯಕ್ಷ ಪಿ.ಸಿ.ಹಲಗೇರಿ ಹೇಳಿದರು.

ತಾಲ್ಲೂಕಿನ ಮಾಕನೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರಾಣೆ­ಬೆನ್ನೂರು ಜೇಸಿಐ ಆಶ್ರಯದಲ್ಲಿ ಏಪ­ರ್ಡಿ­ಸಿದ್ದ ವಿಜ್ಞಾನ ಸಂಘದ ಉದ್ಘಾಟನೆ ಮತ್ತು ಪವಾಡ ಬಯಲು ರಹಸ್ಯ ಕಾರ್ಯಕ್ರಮದಲ್ಲಿ ಅವರು ಮಾತ­ನಾಡಿ, ಪ್ರತ್ಯಕ್ಷವಾಗಿ ಕಂಡು ಪ್ರಮಾಣಿಸಿ ನೋಡು ಎನ್ನುವ ತತ್ವವನ್ನು ಅನು­ಸರಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪವಾಡಗಳ ಹಿಂದೆ ಇರುವ ತಂತ್ರ­ಗಳನ್ನು ಸೂಕ್ಮವಾಗಿ ಗಮನಿಸಬೇಕು, ಮೂಢ ನಂಬಿಕೆಗಳಿಗೆ ಸಾವರ್ಜನಿಕರು ಬಲಿಯಾಗದಂತೆ ಎಚ್ಚರವಹಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ರುಸ್ತುಂ ನಂದೀಹಳ್ಳಿ ಅವರು ವಿದ್ಯಾರ್ಥಿಗಳಿಗೆ ಅನೇಕ ಪವಾಡಗಳನ್ನು ಮಾಡಿ ತೋರಿ­ಸುವ ಮೂಲಕ ಪವಾಡದ ಹಿಂದೆ ಇರುವ ತಂತ್ರಗಳನ್ನು ತೋರಿಸಿ­ಕೊ­ಟ್ಟರು. ಜಾನಪದ ಹಾಡುಗಳನ್ನು ಹೇಳುವ ಮೂಲಕ ಜಾನಪದ ಸಂಸ್ಕೃ­ತಿ­ಯನ್ನು ಜೀವನದಲ್ಲಿ ಅಳವ­ಡಿಸಿ­ಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಜೇಸಿಐ ಹಾವೇರಿ ಘಟಕದ ಅಧ್ಯಕ್ಷ ಪ್ರದೀಪ ಪಾಟೀಲ ಅವರು ವಿವಿಧ ಚಟುವಟಿಕೆಗಳನ್ನು ಮಾಡಿ ತೋರಿಸಿ­ದರು. ಪ್ರಾಚಾರ್ಯ ವಾಗೀಶ ಉದಾಸಿ­ಮಠ ಅವರು ವಿದ್ಯಾರ್ಥಿಗಳು ವೈಜ್ಞಾ­ನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ವಿಜ್ಞಾನ ಸಂಘದ ಅಡಿಯಲ್ಲಿ ಹೆಚ್ಚಿನ ರಚನಾತ್ಮಕ ಕಾರ್ಯ­ಕ್ರಮಗಳನ್ನು ಆಯೋಜಿಸ­ಬೇಕು ಎಂದರು. ಜಯಣ್ಣ ಕರಡೇರ, ಶಾಲಾ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು. ಶ್ವೇತಾ ರಡ್ಡೇರ ಹಾಗೂ ಸಂಗಡಿಗರು ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT