ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಡೋಜ’ ಗೌರವಕ್ಕೆ ಆಯ್ಕೆ

ಸಂತೋಷ ಹೆಗ್ಡೆ, ಕೋ.ಚೆನ್ನಬಸಪ್ಪ, ವಿಜ್ಞಾನಿ ಶಿವಕುಮಾರ್‌
Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹೊಸಪೇಟೆ: ನಿವೃತ್ತ ನ್ಯಾಯ ಮೂರ್ತಿ, ಮಾಜಿ ಲೋಕಾ ಯುಕ್ತ ಎನ್‌. ಸಂತೋಷ ಹೆಗ್ಡೆ, ನಿವೃತ್ತ ನ್ಯಾಯಾಧೀಶ, ಸಾಹಿತಿ ಕೋ.ಚೆನ್ನಬಸಪ್ಪ ಹಾಗೂಬೆಂಗಳೂರಿನ ಇಸ್ರೊ ಕೇಂದ್ರದ ನಿರ್ದೇಶಕ ಎಸ್‌.ಕೆ.ಶಿವಕುಮಾರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ ‘ನಾಡೋಜ’ ಗೌರವಕ್ಕೆ ಆಯ್ಕೆ ಯಾಗಿದ್ದಾರೆ.

ಇದೇ 21ರಂದು ನಡೆಯುವ ವಿಶ್ವವಿದ್ಯಾಲಯದ ‘ನುಡಿಹಬ್ಬ’ ಕಾರ್ಯ ಕ್ರಮ ದಲ್ಲಿ ಈ ಮೂವರು ಗಣ್ಯರಿಗೆ ‘ನಾಡೋಜ’ ಗೌರವ ಪದವಿ ಪ್ರದಾನ ಮಾಡ­ಲಾಗು­ವುದು ಎಂದು ಮಂಗಳ ವಾರ ಸುದ್ದಿಗೋಷ್ಠಿಯಲ್ಲಿ ವಿ.ವಿ. ಕುಲಪತಿ ಡಾ.ಹಿ.ಚಿ.­ಬೋರ­ಲಿಂಗಯ್ಯ ತಿಳಿಸಿದರು.

ರಾಜ್ಯಪಾಲ ಎಚ್‌.ಆರ್‌.ಭಾರ ದ್ವಾಜ್, ಉನ್ನತ ಶಿಕ್ಷಣ ಸಚಿವ ಆರ್‌.ವಿ. ದೇಶ­ಪಾಂಡೆ ಪಾಲ್ಗೊಳ್ಳುವರು. ಹಿರಿಯ ಪತ್ರಕರ್ತ ನಾಗೇಶ ಹೆಗಡೆ  ‘ನುಡಿಹಬ್ಬ’ದ ಭಾಷಣ ಮಾಡು ವರು ಎಂದು ಹೇಳಿದರು.

‘ಪ್ರಸಕ್ತ ಸಾಲಿನಲ್ಲಿ ‘ನಾಡೋಜ’ ಗೌರವವನ್ನು ಮೂವರಿಗೆ ಸೀಮಿತ ಗೊಳಿಸಲಾ­ಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT