ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಿದೆ’

Last Updated 6 ಜನವರಿ 2014, 19:30 IST
ಅಕ್ಷರ ಗಾತ್ರ

ಹೊಸಪೇಟೆ: ‘ಪ್ರಶಸ್ತಿಯಿಂದ ಜವಾ­ಬ್ದಾರಿ ಹೆಚ್ಚಿದೆ’ ಎಂದು ಹೂವಿನಹಡ­ಗಲಿಯ ಪಂಚಶಿಲ್ಪ ಕಲಾವಿದ ಜಿ.ಬಿ.ಹಂಸಾನಂದಾಚಾರ್ಯ  ಪ್ರತಿಕ್ರಿ­ಯಿಸಿ­ದ್ದಾರೆ.

1932ರ ಆಗಸ್ಟ್‌ 2ರಂದು ಹೂವಿನಹಡಗಲಿ ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಜನಿಸಿದ ಅವರು
ವಂಶ ಪರಂಪರೆಯಿಂದ ಬಂದ ಶಿಲ್ಪ ಕಲೆಯನ್ನು ತಮ್ಮ 13ನೇ ವಯಸ್ಸಿನಿಂದಲೇ ಮೈಗೂ­ಡಿಸಿಕೊಂಡವರು.

7ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದು, ಮುಖ್ಯವಾಗಿ ಪಂಚಶಿಲ್ಪ (ಶಿಲಾಶಿಲ್ಪ, ಮರಶಿಲ್ಪ, ಲೋಹಶಿಲ್ಪ, ಸಿಮೆಂಟ್‌ ಶಿಲ್ಪ ಹಾಗೂ ಸಂಕಿರಣ ಮಾಧ್ಯಮ ಶಿಲ್ಪ) ಕಲೆಯಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಶಿಲೆ, ಕಾಷ್ಠ, ಲೋಹ (ಎರಕದ ವಿಗ್ರಹ ಮತ್ತು ಕವಚ) ವಿಗ್ರ­ಹಗಳು, ವಿಮಾನ ಗೋ­ಪುರ, ದೇವಾ­ಲಯದ ದ್ವಾರ, ಮಣ್ಣು ಮತ್ತು ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದಲೂ ವಿಗ್ರಹ ತಯಾರಿಕೆಯೊಂದಿಗೆ ಸಂಗೀತ ವಾದ್ಯಗಳನ್ನು  ಸಿದ್ಧಪಡಿಸುವುದು ಇವರ ವೈಶಿಷ್ಟ್ಯಗಳಲ್ಲೊಂದು.     

ಲೋಹಗಳಿಂದ ದೇವರ ರಥ ತಯಾ­ರಿ­ಸು­ವುದರಲ್ಲಿ ಅವರು ನಿಪುಣರು. ಸದ್ಯಕ್ಕೆ ಹೂವಿನ
ಹಡಗಲಿ­ಯಲ್ಲಿ ಶ್ರೀ ಭುವನೇಶ್ವರಿ ಶಿಲ್ಪಕಲಾ ನಿಕೇತನದ ಮೂಲಕ ಶಿಲ್ಪಕಲಾ ಆಸಕ್ತರಿಗೆ ತರಬೇತಿ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT