ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಬಿಎಂಪಿ ವಿಭಜನೆ ಚಿಂತನೆ ಕೈಬಿಡಿ’

Last Updated 13 ಡಿಸೆಂಬರ್ 2013, 19:41 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ ವಿಭಜನೆ ಚಿಂತನೆ ಕೈಬಿಟ್ಟು ಅಧಿಕಾರ ವಿಕೇಂದ್ರೀ­ಕರಣ ಮಾಡುವ ಮೂಲಕ ನಗರದ ಅಭಿವೃದ್ಧಿಗೆ ಸರ್ಕಾರ ಮುಂದಾಗ­ಬೇಕು’ ಎಂದು ಬಿಬಿಎಂಪಿಯ ಜೆಡಿ­ಎಸ್‌ ಪಕ್ಷದ ನಾಯಕ ಆರ್‌.ಪ್ರಕಾಶ್‌ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತ­ನಾಡಿದ ಅವರು, ‘ವಿಭಜನೆ ಮಾಡು­ವುದರಿಂದ ಪಾಲಿಕೆಯ ಅಭಿ­ವೃದ್ಧಿ ಸಾಧ್ಯ
ವಿಲ್ಲ. ಬದಲಿಗೆ   ಆರ್ಥಿಕ, ಭೌಗೋಳಿಕ ಸಮಸ್ಯೆಗಳು ಹೆಚ್ಚಾಗು­ತ್ತವೆ. ವಲಯ ಮಟ್ಟದಲ್ಲಿ ಕೆಎಎಸ್‌ ಅಧಿ­ಕಾರಿಗಳ ಬದಲಿಗೆ ಐಎಎಸ್‌ ಅಧಿಕಾರಿ­ಗಳನ್ನು ನೇಮಕ ಮಾಡಿಕೊ­ಳ್ಳುವ ಮೂಲಕ ಅಧಿಕಾರ ವಿಕೇಂದ್ರೀ­ಕರಣ­ಗೊಳಿಸಬೇಕು’ ಎಂದರು.

‘ಪಾಲಿಕೆಯ ವೈದ್ಯಕೀಯ ಪರಿಹಾರ ನಿಧಿಗೆ ಬಂದಿರುವ 4 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಶೀಘ್ರವೇ ವಿಲೇ­ವಾರಿ ಮಾಡು­ವುದಾಗಿ ಕಳೆದ ಬಾರಿ ಪಾಲಿ­ಕೆಯ ಕೌನ್ಸಿಲ್‌ ಸಭೆಯಲ್ಲಿ ಮೇಯರ್‌ ಭರವಸೆ ನೀಡಿದ್ದರು. ಆದರೆ, ಈವರೆಗೂ ಅರ್ಜಿಗಳ ವಿಲೇ­ವಾರಿಗೆ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

‘ಈಗ ಹಳೆಯ ಅರ್ಜಿಗಳ ಜತೆಗೆ ಒಂದು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಆದ್ದರಿಂದ ತ್ವರಿತವಾಗಿ ಅರ್ಜಿ­ಗಳ ವಿಲೇವಾರಿಗೆ ಕ್ರಮ ಕೈಗೊಳ್ಳ­ಬೇಕು. ಇಲ್ಲದಿದ್ದರೆ ಉಪವಾಸ ಸತ್ಯಾ­ಗ್ರಹ ಕೈಗೊಳ್ಳ­ಲಾಗುವುದು’ ಎಂದರು.

ನಗರದ ಅಭಿವೃದ್ಧಿಗಾಗಿ ಮತ್ತು ಪಾಲಿಕೆಯಿಂದ ಗುತ್ತಿಗೆದಾರರಿಗೆ ಬಾಕಿ ಇರುವ ಹಣವನ್ನು ಪಾವತಿಸಲು ₨ 1,600 ಕೋಟಿ ಬಿಡುಗಡೆ ಮಾಡಲಾ­ಗು­ವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಇದು ಪಾಲಿಕೆ ಆರ್ಥಿಕವಾಗಿ ದುರ್ಬಲವಾಗಿರುವು­ದಕ್ಕೆ ಸಾಕ್ಷಿ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT