ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳ ಪ್ರತಿಭೆ ಹೊರ ಹಾಕುವುದು ಶಿಕ್ಷಕನ ಕರ್ತವ್ಯ’

Last Updated 12 ಡಿಸೆಂಬರ್ 2013, 8:26 IST
ಅಕ್ಷರ ಗಾತ್ರ

ಯಾದಗಿರಿ: ಯರಗೋಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ತಾಲ್ಲೂಕಿನ ಯರಗೋಳದ ಸರ್ವೋ­ದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಜರುಗಿತು.

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪ್ರಭು ಮಾತನಾಡಿ, ಶಿಕ್ಷಕರು ಪ್ರತಿಯೊಂದು ಮಗುವಿನಲ್ಲಿ ಅಡಗಿರುವ ಪ್ರತಿಭೆಯನ್ನು ಹುಡುಕಿ ತೆಗೆಯಬೇಕು. ಇಂತಹ ಪ್ರಯತ್ನಕ್ಕೆ ಪ್ರತಿಭಾ ಕಾರಂಜಿ ಸಹಾಯಕವಾಗಿದೆ ಎಂದು ಹೇಳಿದರು.

ಗವಿಸಿದ್ದಲಿಂಗೇಶ್ವರ ವಿರಕ್ತ ಮಠದ ಸಂಗಮೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಚನ್ನಬಸಮ್ಮ ಸೋಮಣ್ಣೋರ್‌ ಉದ್ಘಾಟಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಶಾಂತಿಬಾಯಿ ಚವ್ಹಾಣ ಜ್ಯೋತಿ ಬೆಳಗಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗಮ್ಮ ಯಾದಗಿರಿ, ಇಮಾಮಜಿ ಸಾಬಣ್ಣ ಚಿಕ್ಕಬಾನರ, ರಮೇಶ ಗೋಂಗಡಿ, ಯಂಕಪ್ಪ ದೊಡಮನಿ, ಜಿ.ಹಫೀಜ್ ಪಟೇಲ್, ಎಸ್.ಕೆ ಬಿರಾದಾರ, ಬನ್ನಪ್ಪ ಸಂಕದ, ಸಾಬಣ್ಣ ಬಸವಂತಪುರ, ವೆಂಕಟರೆಡ್ಡಿ, ಚಂದ್ರಪ್ಪ ಗುಂಜನೂರ, ಸುಭಾಷ ಕೋಳಿ, ಶಿವರಾಜ ಮಾನೇಗಾರ, ನಿತ್ಯಾನಂದ ಸ್ವಾಮಿ, ಎಂ.ಎಂ. ಇನಾಂದಾರ, ಚಂದ್ರಕಲಾ, ಮಲ್ಲಣ್ಣ ಮಾನೇಗಾರ ಮತ್ತಿತರರು ಭಾಗವಹಿಸಿದ್ದರು.

ರೇಣುಕಾ ಕುಂಬಾರಹಳ್ಳಿ ನಿರೂಪಿಸಿದರು. ದೇವಿಂದ್ರ ಈಟೆ ಸ್ವಾಗತಿಸಿದರು. ಇಫ್ತೇಖಾರ ಅಲಿ ಇನಾಂದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT