ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಾರಿಗೂ ಅನ್ಯಾಯ ಮಾಡಿಲ್ಲ’

Last Updated 4 ಏಪ್ರಿಲ್ 2014, 6:29 IST
ಅಕ್ಷರ ಗಾತ್ರ

ಅಫಜಲಪುರ:  ’ನನ್ನ ರಾಜಕೀಯ ಜೀವನದಲ್ಲಿ ಹತ್ತು ಬಾರಿ ಸಚಿವ­ನಾಗಿದ್ದೇನೆ. ಒಂದು ಬಾರಿ ಸಂಸದನಾಗಿ ಕೇಂದ್ರ ಸಚಿವನಾಗಿ ಕೆಲಸ ಮಾಡಿದ್ದೇನೆ. ಯಾರಿಗೂ ಅನ್ಯಾಯ ಮಾಡಿಲ್ಲ. ಅನ್ಯಾಯ ಸರಿಪಡಿಸಿದ್ದೇನೆ’ ಗುಲ್ಬರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ್‌ ಖರ್ಗೆ ತಿಳಿಸಿದರು.

ಅವರು ತಾಲ್ಲೂಕಿನ ಕರಜಗಿ ಗ್ರಾಮ­ದಲ್ಲಿ ತಾಲ್ಲೂಕು ಬ್ಲಾಕ್‌ ಸಮಿತಿಯ ವತಿಯಿಂದ ಗುರುವಾರ ಆಯೋಜಿಸಿದ ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕಾರ್ಮಿಕ ಸಚಿವನಾಗಿ ಕಾರ್ಮಿಕರ ಕಲ್ಯಾಣಕ್ಕಾಗಿ 43 ಕಾನೂನುಗಳಿವೆ. ಅದರಲ್ಲಿ 11 ಕಾನೂನುಗಳಿಗೆ ತಿದ್ದುಪಡಿ ಮಾಡಿ ಮಾಡಿದ್ದೇನೆ. ರಾಷ್ಟ್ರೀಯ ಸ್ವಾಸ್ಥ ಭೀಮಾ ಯೋಜನೆ ಅಡಿಯಲ್ಲಿ 1 ವರ್ಷಕ್ಕೆ 1 ಕುಟುಂಬದಲ್ಲಿ 5 ಜನರಿಗೆ ₨ 30 ಸಾವಿರ ರೂಪಾಯಿ ಆರೋಗ್ಯಕ್ಕಾಗಿ ಖರ್ಚು ಮಾಡಲು ಯೋಜನೆ ರೂಪಿಸಿ­ದ್ದೇನೆ. 15 ಕೋಟಿ ಜನರಿಗೆ ಸಹಾಯ­ವಾಗಿದೆ’ ಎಂದರು.

’ವಿಕೆಪಿ ಯೋಜನೆಗೆ ₨3670 ಕೋಟಿ ರೂಪಾಯಿ, ಅಫಜಲಪುರ ಏತ ನೀರಾ­ವರಿಗೆ ₨ 400 ಕೋಟಿ ರೂಪಾಯಿ, ಸಣ್ಣ ನೀರಾವರಿಗೆ ಸಾವಿರ ಕೋಟಿ ರೂಪಾಯಿ ಹಾಗೂ 400 ಕಿ.ಮೀ ರಾಷ್ಟ್ರೀ­ಯ ಹೆದ್ದಾರಿ ಮಂಜೂರು ಮಾಡಿ­ಸಿದ್ದೇನೆ. ಬಿಜೆಪಿ ಅವರು ಖರ್ಗೆ ಏನು ಮಾಡಿದ್ದಾರೆ? ಎಂದು ಕೇಳು­ತ್ತಾರೆ. ಅವರಿಗೆ ಕಣ್ಣಿಗೆ ಪೊರೆ ಬಂದಿದೆ. ಅಭಿವೃದ್ಧಿ ಕಾಣುತ್ತಿಲ್ಲ’ ಎಂದ ಅವರು, ’ಯಾರು ಕೆಲಸ ಮಾಡಿದ್ದಾರೆ. ತಕ್ಕಡಿ­ಯಲ್ಲಿ ಇಟ್ಟು ತೂಕಮಾಡಿ ನನಗೆ ಮತ­ಕೊಡಿ. ಕಳೆದ ಚುನಾವಣೆಯಲ್ಲಿ ನನಗೆ ಅಫಜಲಪುರದಲ್ಲಿ 14 ಸಾವಿರ ಮತಗಳ ಹಿನ್ನಡೆಯಾಗಿವೆ. ಆದರೆ, ಈ ಚುನಾ­ವಣೆಯಲ್ಲಿ ನನಗೆ  ಹೆಚ್ಚಿನ ಬೆಂಬಲ ಲಭೀಸಬೇಕು’ ಎಂದು ಕೋರಿ­ದರು.

ಶಾಸಕ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ’ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಜನರ ನಿರೀಕ್ಷೆಗಿಂತಲೂ ಹೆಚ್ಚು ಕೆಲಸ ಮಾಡಿದ್ದಾರೆ. ಕಳೆದ ಬಾರಿ ಅವರಿಗೆ ಅಫಜಲಪುರ ಮತಕ್ಷೇತ್ರದಿಂದ ಕಡಿಮೆ ಮತ ಬಂದಿವೆ. ಈ ಬಾರಿ ಹಾಗಾಗಬಾರದು. ಹಾಗೇನಾದರು ಆದರೆ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇ­ಕಾಗುತ್ತದೆ’ ಎಂದು ಅವರು ಅಲ­ವತ್ತು­ಕೊಂಡ­ರು. ಮಾಜಿ ಸಂಸದ ಇಕ್ಬಲ್‌ ಅಹ್ಮದ ಸರಡಗಿ ಅವರೂ ಮಾತ­ನಾಡಿದರು.

ಪಕ್ಷಕ್ಕೆ ಸೇರ್ಪಡೆ: ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದಯ್ಯ ಹಿರೇಮಠ ಕರಜಗಿ, ವೆಂಕಟೇಶ ಮೊಗರೆ ಸೇರಿದಂತೆ ಹಲವಾರು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷ ಸೇರಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಾಗನ­ಗೌಡ ಪಾಟೀಲ ಸಂಕ­ನೂರ, ಎಪಿಎಂಸಿ ಅಧ್ಯಕ್ಷ ಬಸವಣ್ಣಪ್ಪ ಪಾಟೀಲ ಅಂಕಲಗಿ, ಜಿ.ಪಂ ಸದಸ್ಯ ನಿತೀನ ಗುತ್ತೇದಾರ,  ಮಕ್ಬುಲ್‌ ಪಟೇಲ್‌, ರಜಾಕ್‌ , ಸಿದ್ದಣ್ಣಗೌಡ ಪಾಟೀಲ, ಮಹಾಂ­ತೆ­-­ೇಶ ಪಾಟೀಲ, ಗುರುದೇವ ಎಸ್‌ ಹಿರೇ­ಮಠ, ರಾಜಶೇಖರ ಹಿರೇ­ಮಠ, ಗ್ರಾ.ಪಂ ಅಧ್ಯಕ್ಷ ರಮೇಶ ಬಾಕೆ, ಲಕ್ಷ್ಮಣ ಜಂಬಗಿ, ಮಹೇಶ ಇದ್ದರು. ತಾಲ್ಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿಶ್ವನಾಥ ರೇವೂರ ಸ್ವಾಗತಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT