ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಣದ ಜೊತೆಗೆ ಮನೋರಂಜನೆ ಇರಲಿ’

Last Updated 16 ಡಿಸೆಂಬರ್ 2013, 6:11 IST
ಅಕ್ಷರ ಗಾತ್ರ

ಕೆಂಭಾವಿ: ಮಕ್ಕಳು ಕಲಿಕೆಯ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗ­ವಹಿಸುವುದರಿಂದ ಮಾನಸಿಕ ಬೆಳ­ವಣಿಗೆಯ ಜೊತೆಗೆ ದೈಹಿಕ ಸಾಮರ್ಥ್ಯ­ವೂ ಬರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ಶಿಕ್ಷಣದ ಜೊತೆಗೆ ಮನೋ­ರಂಜನೆಯ ಕಾರ್ಯಕ್ರಮ­ಗಳಲ್ಲಿ ಭಾಗವಹಿಸಬೇಕು ಎಂದು ಸಿಆರ್‌ಪಿ ಮಲ್ಲಣ್ಣ ಸುರಪುರ ಹೇಳಿದರು.

ಸಮೀಪದ ತಳಹಳ್ಳಿ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ­ಯಲ್ಲಿ ಶುಕ್ರವಾರ ನಡೆದ ಯಕ್ತಾಪುರ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರ ಎಲ್ಲ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅನೇಕ ಕಾರ್ಯಕ್ರಮ­ಗಳನ್ನು ರೂಪಿಸಿದೆ, ಈ ಕಾರ್ಯಕ್ರಮ­ದಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ನೈಜ ಕಲೆಯನ್ನು ಗುರುತಿಸಲು ಸಹಕಾರಿಯಾಗಿದೆ ಎಂದರು.

ಅಗ್ನಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಂಡಪ್ಪಗೌಡ ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿಶ್ವನಾಥರೆಡ್ಡಿ ಪಾಟೀಲ, ಸಿದ್ದನಗೌಡ ಹೊಸಮನಿ, ಬಸವರಾಜ ಹೂಗಾರ, ಶಿವಪುತ್ರ ಬಂಟನೂರ, ಮಾನಶಪ್ಪ ಬಿರಾ­ದಾರ, ಹಳ್ಳೆಪ್ಪ ಸುರಪುರ, ಶಾಂತಪ್ಪ ಸಾತಿಹಾಳ, ಹಣಮಂತ್ರಾಯ ಕುಳಗೇರಿ, ದೇವೇಂದ್ರ ಸಾತಿಹಾಳ, ನಬಿಸಾಬ ಬಿರಾಳ, ನಿಂಗಣ್ಣ ಸಾಹು, ಶರಣಪ್ಪ ಸಾಹು, ಬಸನಗೌಡ ವಠಾರ, ಸಂಗಯ್ಯ ಬಾಚಿಹಾಳ ಇದ್ದರು.

ಮುಖ್ಯಶಿಕ್ಷಕ ಸಾಹೇಬಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತ­ನಾಡಿ­ದರು. ಶಿವಕುಮಾರ ವಸ್ತ್ರದ ಸ್ವಾಗತಿಸಿದರು. ರಾಮನಗೌಡ ಮುದ­ನೂರ ನಿರೂಪಿಸಿದರು. ಅಮರೇಶ ಅರಕೇರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT