ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾವಿನ ಸಖ್ಯದಿಂದ ಬದುಕಿನ ಮೌಲ್ಯ’

Last Updated 8 ಡಿಸೆಂಬರ್ 2013, 20:03 IST
ಅಕ್ಷರ ಗಾತ್ರ

ಬೆಂಗಳೂರು: ಸಾವಿನ ಸಖ್ಯ ಬದುಕಿನ ಮೌಲ್ಯವನ್ನು ಪರಿಚಯಿಸುತ್ತದೆ ಎಂದು ಕವಿ ಜಯಂತ ಕಾಯ್ಕಿಣಿ ಅಭಿಪ್ರಾಯ­ಪಟ್ಟರು.
ಭಾನುವಾರ  ನಡೆದ ಬಿ.ವಿ.ಭಾರತಿ ಅವರ ‘ಸಾಸಿವೆ ತಂದವಳು’ ಪುಸ್ತಕ  ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಾವಿನಿಂದ ಬದುಕಿನೆಡೆಗಿನ ಪಯಣ­ವಾಗಿ ಈ ಪುಸ್ತಕ ಮೂಡಿಬಂದಿದೆ. ಸಾವು ಬದುಕುವುದನ್ನು ಕಲಿಸುತ್ತದೆ. ಬದು­ಕನ್ನು ಅರ್ಥಮಾಡಿಕೊಳ್ಳಲು ಅನಾ­ರೋಗ್ಯ ಅಥವಾ ಸಾವು ಬರಲೇಬೇ­ಕೇನೊ’ ಎಂದು ಅವರು ಸೋಜಿಗ­ಪಟ್ಟರು.

ಪುಸ್ತಕವನ್ನು ಬಿಡುಗಡೆ ಮಾಡಿದ ಶಂಕರ ಕ್ಯಾನ್ಸರ್‌ ಫೌಂಡೇಶನ್‌ನ ಕ್ಯಾನ್ಸರ್ ಚಿಕಿತ್ಸಾ ತಜ್ಞ  ಡಾ.ಶ್ರೀನಾಥ್, ‘ಇತ್ತೀಚೆಗೆ ಕ್ಯಾನ್ಸರ್ ಒಂದು ಸಾಮಾನ್ಯ ಕಾಯಿಲೆ ಎಂಬಂತಾಗಿದೆ. ಅದಕ್ಕೆ ಪರಿ­ಣಾಮಕಾರಿ ಚಿಕಿತ್ಸೆಗಳಿದ್ದರೂ ಜನ­ರಲ್ಲಿ ಕ್ಯಾನ್ಸರ್ ಬಗ್ಗೆ ಆತಂಕವಿದೆ. ಕ್ಯಾನ್ಸರ್ ಪೀಡಿತರ ಮನೋಸ್ಥೈರ್ಯವೇ ಚಿಕಿತ್ಸೆ­ಯಲ್ಲಿ ಮಹತ್ವದ ಪಾತ್ರ’ ಎಂದರು.

ಪುಸ್ತಕದ ಲೇಖಕಿ ಬಿ.ವಿ.ಭಾರತಿ ಅವರು ಮಾತನಾಡಿ ‘ಸಾವಿನ ಬಾಗಿಲಲ್ಲಿ ನಿಂತು ಬದುಕನ್ನು ಪ್ರೀತಿಸುವ ಅನುಭವ­ವನ್ನು ಬರಹವಾಗಿಸಿದ್ದೇನೆ. ಬುದ್ಧನಿಗೆ ಸಾಸಿವೆ ತಂದವಳು ಎಂಬುದು ಉದ್ಧಟ--­ತನದ ಮಾತಲ್ಲ. ಒಂದು ದಿನದ ಮಟ್ಟಿಗೆ ಸಾವನ್ನು ಮುಂದೂಡಿದೆ ಎಂಬ ಬದುಕಿನ ಪ್ರೀತಿಯಷ್ಟೆ’ ಎಂದರು.

ಲೇಖಕಿ ನೇಮಿಚಂದ್ರ ಅವರು ಮಾತನಾಡಿ ‘ಕ್ಯಾನ್ಸರ್ ಪೀಡಿತರಿಗೆ ಮಾನಸಿಕ ಧೈರ್ಯ ತುಂಬುವ ಕೇಂದ್ರ­ಗಳ ಅವಶ್ವಕತೆಯಿದೆ. ಅವರನ್ನು ರೋಗಿ­ಗಳೆಂದು ಕರೆಯದೆ ಕ್ಯಾನ್ಸರ್ ಹೋರಾಟ­ಗಾರರು ಎಂದು ಕರೆಯೋಣ’ ಎಂದರು.
ಅಹರ್ನಿಶಿ ಪ್ರಕಾಶನದ ಅಕ್ಷತಾ ಮತ್ತು ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT