ಗಡಿಪಾರು: ಹೋರಾಟ ನಿಲ್ಲದು– ಅಸಾಂಜ್‌

ಶುಕ್ರವಾರ, ಮೇ 24, 2019
28 °C

ಗಡಿಪಾರು: ಹೋರಾಟ ನಿಲ್ಲದು– ಅಸಾಂಜ್‌

Published:
Updated:

ಲಂಡನ್‌: ‘ಅಮೆರಿಕಕ್ಕೆ ಗಡಿಪಾರು ಮಾಡಲು ನನ್ನ ವಿರುದ್ಧ ಹೂಡಿರುವ ದಾವೆಗೆ ಸಂಬಂಧಿಸಿದಂತೆ ನನ್ನ ಹೋರಾಟ ನಿಲ್ಲದು’ ಎಂದು ವಿಕಿಲೀಕ್ಸ್‌ ಸ್ಥಾಪಕ ಜೂಲಿಯನ್‌ ಅಸಾಂಜ್‌ ಹೇಳಿದ್ದಾರೆ. 

ಅಮೆರಿಕ ಸರ್ಕಾರದ ಕಂಪ್ಯೂಟರ್‌ಗಳನ್ನು ಹ್ಯಾಕ್‌ ಮಾಡಲು ಪಿತೂರಿ ನಡೆಸಿದ ಆರೋಪ ಅಸಾಂಜ್‌ ಮೇಲಿದೆ.

‘ಅಮೆರಿಕ ಸರ್ಕಾರಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳನ್ನು ವಿಕಿಲೀಕ್ಸ್‌ನಲ್ಲಿ ಪ್ರಕಟಿಸುವ ಮೂಲಕ ನಾನು ನನ್ನ ಪತ್ರಿಕಾಧರ್ಮವನ್ನು ಎತ್ತಿ ಹಿಡಿದಿದ್ದೇನೆ. ಅಲ್ಲದೇ, ಈ ಕಾರ್ಯಕ್ಕಾಗಿ ನನಗೆ ಪ್ರಶಸ್ತಿಗಳೂ ಬಂದಿವೆ. ಹೀಗಾಗಿ ಅಮೆರಿಕಕ್ಕೆ ಗಡಿಪಾರು ಮಾಡುವುದಕ್ಕೆ ಸಂಬಂಧಿಸಿದಂತೆ ತಲೆಬಾಗುವ ಪ್ರಶ್ನೆಯೇ ಇಲ್ಲ’ ಎಂದರು.

ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಸಾಂಜ್‌ ಅವರನ್ನು ಇಲ್ಲಿನ ಬೆಲ್‌ಮಾರ್ಷ್‌ ಜೈಲಿನಲ್ಲಿ ಇರಿಸಲಾಗಿದೆ.

ಮೊರೆ: ರಾಜತಾಂತ್ರಿಕ ರಕ್ಷಣೆ ನೀಡುವಂತೆ ಅಸಾಂಜ್‌ ಅವರು ಆಸ್ಟ್ರೇಲಿಯಾ ಸರ್ಕಾರಕ್ಕೆ ಗುರುವಾರ ಮನವಿ ಮಾಡಿದ್ದಾರೆ.

ವೆಸ್ಟ್‌ಮಿನ್‌ಸ್ಟರ್‌ ಕೋರ್ಟ್‌ ಹೊರಗೆ ಮಾತನಾಡಿದ ಅಸಾಂಜ್‌ ಪರ ವಕೀಲ ಜೆನ್ನಿಫರ್‌ ರಾಬಿನ್‌ಸನ್‌, ಈ ವಿಷಯದಲ್ಲಿ ತುರ್ತಾಗಿ ಮಧ್ಯ ಪ್ರವೇಶಿಸುವಂತೆ ಆಸ್ಟ್ರೇಲಿಯಾ ಸರ್ಕಾರಕ್ಕೆ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !