2025ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಬಾಲಿವುಡ್ ಸಿನಿಮಾ, ರಣವೀರ್ ಸಿಂಗ್ಗೆ ಯಶಸ್ಸು ತಂದುಕೊಟ್ಟ ಮತ್ತೊಂದು ಸಿನಿಮಾ ‘ಧುರಂಧರ್’ ಒಟಿಟಿಯಲ್ಲಿ ತೆರೆಕಾಣುತ್ತಿದೆ.

ವರದಿಗಳ ಪ್ರಕಾರ ಜನವರಿ 30ರಂದು ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಆದರೆ ನೆಟ್ಫ್ಲಿಕ್ಸ್ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಅಥವಾ ಪೋಸ್ಟ್ ಹಂಚಿಕೊಂಡಿಲ್ಲ.

ಧುರಂದರ್ ಸಿನಿಮಾ 2025ರ ಡಿಸೆಂಬರ್ 25ರಂದು ತೆರೆಕಂಡಿದ್ದು, ₹1,300 ಕೋಟಿ ಗಳಿಕೆ ಮಾಡುವ ಮೂಲಕ ಅತಿ ಹೆಚ್ಚು ಗಳಿಸಿದ ಭಾರತೀಯ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆದಿತ್ಯ ಧರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಆರ್. ಮಾಧವನ್ ಮತ್ತು ಸಾರಾ ಅರ್ಜುನ್ ಸೇರಿ ಹಲವರು ಕಾಣಿಸಿಕೊಂಡಿದ್ದಾರೆ.

ಸಿನಿಮಾ ಬಿಡುಗಡೆಯಾದ ಪ್ರಾರಂಭದಲ್ಲಿ ದೀರ್ಘ ಅವಧಿಯ ಕಾರಣದಿಂದ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೂರುವರೆ ಗಂಟೆ ಅವಧಿ ಚಿತ್ರ ಅಲ್ಲಲ್ಲಿ ತಾಳ್ಮೆ ಪರೀಕ್ಷಿಸುತ್ತದೆ ಎಂಬ ವಿಮರ್ಶೆಗಳು ಬಂದಿದ್ದವು. ಬಿಡುಗಡೆಗೆ ಮುನ್ನವೇ ಕೆಲ ವಿವಾದಗಳಿಂದ ಚಿತ್ರತಂಡ ಸುದ್ದಿಯಲ್ಲಿತ್ತು. ಆದರೆ ಎಲ್ಲ ರೀತಿಯ ಪ್ರಚಾರಗಳು ಚಿತ್ರಕ್ಕೆ ಧನಾತ್ಮಕ ಪರಿಣಾಮ ಬೀರಿವೆ. ದೇಶಭಕ್ತಿ, ಪಾಕಿಸ್ತಾನದ ಭೂಗತ ಜಗತ್ತು, ಬೇಹುಗಾರಿಕೆ ಕಥೆಯನ್ನು ಹೊಂದಿರುವ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.