ಇಂಧನ ಕ್ಷೇತ್ರಕ್ಕೆ ಇಲ್ಲಿದೆ `ಜನರ ಪ್ರಣಾಳಿಕೆ'
ಇತ್ತೀಚಿನ ವರ್ಷಗಳಲ್ಲಿ ದೇಶದ ಬಹುತೇಕ ರಾಜ್ಯಗಳು ವಿದ್ಯುತ್ ಕೊರತೆ ಎದುರಿಸುತ್ತಿವೆ. ಪ್ರವಾಹದಿಂದಾಗಿ ಕಲ್ಲಿದ್ದಲು ಗಣಿಗಳಲ್ಲಿ ನೀರು ತುಂಬಿಕೊಳ್ಳುವುದು, ಸಾಗಣೆ ಸಮಸ್ಯೆ, ಕಾರ್ಮಿಕರ ಪ್ರತಿಭಟನೆಯಿಂದ ಕೆಲಸ ಸ್ಥಗಿತ ಹಾಗೂ ಆಮದು ಮಾಡಿಕೊಳ್ಳುವ ಕಲ್ಲಿದ್ದಲು ದರದಲ್ಲಿ ಏರಿಕೆಯಿಂದಾಗಿ ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತಿದೆ. ಇದು ವಿದ್ಯುತ್ ಕಡಿತಕ್ಕೆ ಇರುವ ಪ್ರಮುಖ ಕಾರಣ. ದೇಶದಾದ್ಯಂತ ಇರುವ ಎಲ್ಲ ವರ್ಗದ ಗ್ರಾಹಕರೂ `ವಿದ್ಯುತ್ ಕಡಿತ'ದ ಬಿಸಿ ಅನುಭವಿಸುತ್ತಿದ್ದಾರೆ.Last Updated 7 ಜೂನ್ 2013, 19:59 IST