ಬೆಂಗಳೂರು: ವಾಹನ ತಯಾರಿಕಾ ಕಂಪನಿ ಬಜಾಜ್ ಆಟೊ, ತನ್ನ ಹೊಸ ವಿದ್ಯುತ್ಚಾಲಿತ ಆಟೊವಾದ ‘ಬಜಾಜ್ ಗೋಗೋ’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಬಜಾಜ್ ಗೋಗೋ ಮೂರು ವೇರಿಯಂಟ್ಗಳಾದ ಪಿ5009, ಪಿ5012 ಮತ್ತು ಪಿ7012 ಅನ್ನು ಪರಿಚಯಿಸಿದೆ. ‘ಪಿ’ ಎಂಬುದು ಪ್ರಯಾಣಿಕ ಎಂದರ್ಥ. 50 ಮತ್ತು 70 ಗಾತ್ರವನ್ನು ಸೂಚಿಸಿದರೆ, 09 ಮತ್ತು 12 ಬ್ಯಾಟರಿ ಸಾಮರ್ಥ್ಯದ ಸೂಚಕವಾಗಿದೆ. ಇದು 9 ಕೆಡಬ್ಲ್ಯುಎಚ್ ಮತ್ತು 12 ಕೆಡಬ್ಲ್ಯುಎಚ್ ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಗೆ 5 ವರ್ಷದ ಗ್ಯಾರಂಟಿ ಇದೆ.

ಒಂದು ಬಾರಿ ಚಾರ್ಜ್ ಮಾಡಿದರೆ 251 ಕಿ.ಮೀ.ವರೆಗೆ ಪ್ರಯಾಣಿಸಬಹುದಾಗಿದೆ. ಆಟೊ ಹಝಾರ್ಡ್ ಮತ್ತು ಆ್ಯಂಟಿ ರೋಲ್ ಡಿಟಕ್ಷನ್, ಹೆಚ್ಚು ಸಾಮರ್ಥ್ಯದ ಎಲ್ಇಡಿ ಲೈಟ್ಗಳು ಮತ್ತು ಹಿಲ್ ಹೋಲ್ಡ್ ಅಸಿಸ್ಟ್ನಂತಹ ಉತ್ತಮ ತಂತ್ರಜ್ಞಾನ ವೈಶಿಷ್ಟ್ಯ ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಪ್ರಸ್ತುತ ಕಂಪನಿಯು ಬಿಡುಗಡೆ ಮಾಡಿರುವ ಪಿ5009 ಹಾಗೂ ಪಿ7012 ದರವು ಕ್ರಮವಾಗಿ ₹3.26 ಲಕ್ಷ ಮತ್ತು ₹3.83 ಲಕ್ಷ (ದೆಹಲಿ ಎಕ್ಸ್ ಷೋರೂಂ) ಆಗಿದೆ. ದೇಶದ ಎಲ್ಲ ಬಜಾಜ್ ಆಟೊದ ಡೀಲರ್ಶಿಪ್ಗಳಲ್ಲಿ ಬುಕಿಂಗ್ ಆರಂಭವಾಗಿದೆ ಎಂದು ತಿಳಿಸಿದೆ.

‘ಬಜಾಜ್ ಗೋಗೋ ತ್ರಿಚಕ್ರ ವಾಹನ ಉದ್ಯಮದಲ್ಲಿ ಆಗುತ್ತಿರುವ ಬದಲಾವಣೆಯನ್ನು ಪ್ರತಿನಿಧಿಸುತ್ತದೆ. ಈಗಾಗಲೇ ಇರುವ ವಿದ್ಯುತ್ಚಾಲಿತ ಆಟೊಗಳಿಗೆ ಇದು ಪರ್ಯಾಯವಾಗಿದೆ. ಗ್ರಾಹಕರು ಈ ಆಟೊಗಳನ್ನು ಗೋಗೋ ಎಂದೇ ಕರೆಯಬಹುದು’ ಎಂದು ಕಂಪನಿಯ ಇಂಟ್ರಾ ಸಿಟಿ ಬ್ಯುಸಿನೆಸ್ ವಿಭಾಗದ ಅಧ್ಯಕ್ಷ ಸಮರ್ದೀಪ್ ಸುಬಂದ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.