ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021ಕ್ಕೆ ಹೊಸ ಇಕೊಸ್ಪೋರ್ಟ್‌ ಕಾರು

Last Updated 4 ಜನವರಿ 2021, 16:34 IST
ಅಕ್ಷರ ಗಾತ್ರ

ಮುಂಬೈ: ಫೋರ್ಡ್ ಇಂಡಿಯಾ ಕಂಪನಿಯು ಹೊಸ ವರ್ಷದಲ್ಲಿ ಮಾರುಕಟ್ಟೆಗೆ ಬರಲಿರುವ ತನ್ನ ಕಾಂಪ್ಯಾಕ್ಟ್‌ ಎಸ್‌ಯುವಿ ಇಕೊಸ್ಪೋರ್ಟ್‌ಅನ್ನು ಅನಾವರಣ ಮಾಡಿದೆ. ಇದರಲ್ಲಿ ಸನ್‌ರೂಫ್‌ ಸೌಲಭ್ಯ ಕೂಡ ಇದೆ. ಕಾರಿನ ಆರಂಭಿಕ ಬೆಲೆ ₹ 7.99 ಲಕ್ಷ.

ಐದು ಮಾದರಿಗಳಲ್ಲಿ ಈ ಕಾರು ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ. ಅಮೆರಿಕ ಮೂಲದ ಕಾರು ತಯಾರಿಕಾ ಕಂಪನಿಯಾಗಿರುವ ಫೋರ್ಡ್‌, ಇಕೊಸ್ಪೋರ್ಟ್‌ ಕಾರನ್ನು 2013ರಲ್ಲಿ ಭಾರತದ ಮಾರುಕಟ್ಟೆಗೆ ಪರಿಚಯಿಸಿತ್ತು. ಇದು 4 ಮೀಟರ್‌ಗಿಂತ ಕಡಿಮೆ ಉದ್ದದ ಎಸ್‌ಯುವಿ.

ಇಕೊಸ್ಪೋರ್ಟ್‌ ಮಾತ್ರವೇ ಅಲ್ಲದೆ ಫಿಗೊ, ಫ್ರೀಸ್ಟೈಲ್‌, ಆ್ಯಸ್ಪೈರ್, ಎಂಡೆವರ್ ಮತ್ತು ಮಸ್ತಾಂಗ್‌ ಕಾರುಗಳನ್ನು ಫೋರ್ಡ್‌ ಕಂಪನಿ ಭಾರತದ ಮಾರುಕಟ್ಟೆಯಲ್ಲಿ ಈಗ ಮಾರಾಟ ಮಾಡುತ್ತಿದೆ. ‘ಗ್ರಾಹಕರಿಗೆ ಏನು ಬೇಕೋ ಅದನ್ನು ಮಾರುಕಟ್ಟೆಗೆ ಪರಿಚಯಿಸುವುದು ನಮ್ಮ ಸಂಪ್ರದಾಯ. ಅದಕ್ಕೆ ಅನುಗುಣವಾಗಿ ಫೋರ್ಡ್ ಇಕೊಸ್ಪೋರ್ಟ್‌ ಕಾರನ್ನು ಮಾರುಕಟ್ಟೆಗೆ ತರುತ್ತಿದ್ದೇವೆ’ ಎಂದು ಫೋರ್ಡ್ ಇಂಡಿಯಾ ಕಂಪನಿಯ ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ವಿನಯ್ ರೈನಾ ಹೇಳಿದ್ದಾರೆ.

ಸನ್‌ರೂಫ್‌ ಸೌಲಭ್ಯ ಈ ಕಾರಿಗೆ ಬೇಕು ಎಂಬ ಬೇಡಿಕೆಯನ್ನು ಗ್ರಾಹಕರು ಇರಿಸಿದ್ದರು. ಕಾರಿನ ಹೊಸ ಅವತಾರವು ಆ ಸೌಲಭ್ಯವನ್ನು ಹೊಂದಿರಲಿದೆ. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಇನ್ನೂ ಹಲವು ಸೌಲಭ್ಯಗಳನ್ನು ಅಳವಡಿಸುವ ಆಯ್ಕೆಯನ್ನೂ ಕಂಪನಿ ಇರಿಸಿಕೊಂಡಿದೆ ಎಂದು ರೈನಾ ಹೇಳಿದ್ದಾರೆ.

ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳು ಇರಲಿವೆ. ಟಚ್‌ಸ್ಕ್ರೀನ್‌ ಇನ್‌ಫೊಟೇನ್‌ಮೆಂಟ್‌ ಸೌಲಭ್ಯವೂ ಇದರಲ್ಲಿ ಇರಲಿದೆ ಎಂದು ಕಂಪನಿ ಹೇಳಿದೆ. ‘ಫೋರ್ಡ್‌ಪಾಸ್‌’ ಎನ್ನುವ ಆ್ಯಪ್‌ ಬಳಸಿ ಇಕೊಸ್ಪೋರ್ಟ್‌ ಮಾಲೀಕರು ಕಾರಿನ ಎಂಜಿನ್‌ ಆನ್ ಮಾಡುವುದು, ಆಫ್‌ ಮಾಡುವುದು, ಕಾರು ಲಾಕ್‌ ಮಾಡುವುದು, ಅನ್‌ಲಾಕ್‌ ಮಾಡುವುದನ್ನು ತಾವು ಕುಳಿತಲ್ಲಿಂದಲೇ ನಿಭಾಯಿಸಬಹುದು.

ಹೊಸ ಕಾರು ಬಿಎಸ್‌–6 ನಿಯಮಗಳಿಗೆ ಅನುಗುಣವಾದ ಪೆಟ್ರೋಲ್‌ ಹಾಗೂ ಡೀಸೆಲ್ ಎಂಜಿನ್‌ ಆಯ್ಕೆಗಳನ್ನು ಹೊಂದಿರಲಿದೆ. 1 ಲಕ್ಷ ಕಿ.ಮೀ.ವರೆಗೆ ಅಥವಾ ಮೂರು ವರ್ಷಗಳವರೆಗೆ ವಾರೆಂಟಿ ಸೌಲಭ್ಯ ಪಡೆಯುವ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗುತ್ತದೆ. ‘ಪ್ರತಿ ಕಿ.ಮೀ.ಗೆ 36 ಪೈಸೆ ನಿರ್ವಹಣಾ ವೆಚ್ಚ ತಗಲುತ್ತದೆ. ಇದು ಅತ್ಯಂತ ಕಡಿಮೆ’ ಎಂದು ಕಂಪನಿ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT