ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2025ರಿಂದ ಜಾಗ್ವಾರ್‌ ವಿದ್ಯುತ್‌ ಚಾಲಿತ ಕಾರು

Last Updated 15 ಫೆಬ್ರುವರಿ 2021, 21:21 IST
ಅಕ್ಷರ ಗಾತ್ರ

ನವದೆಹಲಿ: ಇಂಗಾಲದ ಹೊರಸೂಸುವಿಕೆಯನ್ನು 2039ರೊಳಗೆ ಶೂನ್ಯಕ್ಕೆ ತಗ್ಗಿಸುವ ಕಂಪನಿ ತಾನಾಗಬೇಕು ಎಂಬ ಬಯಕೆ ಇರುವುದಾಗಿ ಟಾಟಾ ಮೋಟರ್ಸ್ ಮಾಲೀಕತ್ವದ ‘ಜಾಗ್ವಾರ್ ಲ್ಯಾಂಡ್ ರೋವರ್’ (ಜೆಎಲ್‌ಆರ್‌) ಕಂಪನಿ ಹೇಳಿದೆ. ಇದರ ಭಾಗವಾಗಿ 2025ರಿಂದ ಜಾಗ್ವಾರ್ ಸಂಪೂರ್ಣ ವಿದ್ಯುತ್ ಚಾಲಿತ ಐಷಾರಾಮಿ ಕಾರುಗಳನ್ನು ಮಾರುಕಟ್ಟೆಗೆ ಬಿಡಲಿದೆ.

ಹೊಸ ಕಾರ್ಯತಂತ್ರದ ಭಾಗವಾಗಿ ಜಾಗ್ವಾರ್‌ ಮತ್ತು ಲ್ಯಾಂಡ್‌ ರೋವರ್‌ನ ಎ‌ಲ್ಲ ಮಾದರಿಗಳು ಈ ದಶಕದ ಅಂತ್ಯದ ವೇಳೆಗೆ ಸಂಪೂರ್ಣ ವಿದ್ಯುತ್ ಚಾಲಿತ ಎಂಜಿನ್‌ನೊಂದಿಗೆ ಲಭ್ಯವಾಗಲಿವೆ. ಲ್ಯಾಂಡ್‌ ರೋವರ್‌ನ ಮೊದಲ ಸಂಪೂರ್ಣ ವಿದ್ಯುತ್ ಚಾಲಿತ ಎಸ್‌ಯುವಿ 2024ರಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಅದಾದ ನಂತರದ ಐದು ವರ್ಷಗಳಲ್ಲಿ ಲ್ಯಾಂಡ್‌ ರೋವರ್‌ ಆರು ವಿದ್ಯುತ್ ಚಾಲಿತ ವಾಹನಗಳನ್ನು ಬಿಡುಗಡೆ ಮಾಡಲಿದೆ ಎಂದು ಜೆಎಲ್‌ಆರ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಥಿಯರಿ ಬೊಲೋರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT