ಶನಿವಾರ, ಏಪ್ರಿಲ್ 1, 2023
25 °C

ಕಿಯಾ ಮೋಟರ್ಸ್‌ನಿಂದ ಹೊಸ ಎಸ್‌ಯುವಿ ಸಾನೆಟ್‌ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಿಯಾ ಮೋಟರ್ಸ್‌ ಕಾರ್ಪೊರೇಷನ್‌ ಕಂಪನಿಯು ತನ್ನ ಹೊಸ ಸ್ಮಾರ್ಟ್‌ ಅರ್ಬನ್‌ ಕಾಂಪ್ಯಾಕ್ಟ್‌ ಎಸ್‌ಯುವಿ ಸಾನೆಟ್‌ ಅನ್ನು ಜಾಗತಿಕ ಮಾರುಕಟ್ಟೆಗೆ ಅನಾವರಣಗೊಳಿಸಿದೆ. ಭಾರತದಲ್ಲಿ ಈ ಎಸ್‌ಯುವಿ ಮಾರಾಟ ಶೀಘ್ರವೇ ಆರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.

ಸೆಲ್ಟೋಸ್‌ ಬಳಿಕ ಭಾರತದಲ್ಲಿಯೇ ತಯಾರಿಸಿ ಯೋಜನೆಯಡಿ ತಯಾರಾಗಿರುವ ಕಂಪನಿಯ ಎರಡನೇ ಕಾರು‌ ಇದಾಗಿದೆ. ದೆಹಲಿಯಲ್ಲಿ ನಡೆದಿದ್ದ ಆಟೊ ಎಕ್ಸ್‌ಪೊದಲ್ಲಿ ಸಾನೆಟ್‌ ಕಾನ್ಸೆಪ್ಟ್‌ ಕಾರನ್ನು ಮೊದಲಿಗೆ ಅನಾವರಣಗೊಳಿಸಲಾಗಿತ್ತು. ಆಂಧ್ರಪ್ರದೇಶದ ಅನಂತರಪುರದಲ್ಲಿ ಇರುವ ಘಟಕದಲ್ಲಿ ಕಾರು ತಯಾರಾಗಿದ್ದು, ಕಾಂಪ್ಯಾಕ್ಟ್‌ ಎಸ್‌ಯುವಿ ವಿಭಾಗದಲ್ಲಿ ಹೊಸ ಮಾನದಂಡ ನಿಗದಿಪಡಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ.

‘ಅತ್ಯಾಕರ್ಷಕ ವಿನ್ಯಾಸ, ಉತ್ತಮ ಗುಣಮಟ್ಟ, ಹೊಸ ವೈಶಿಷ್ಟ್ಯ, ಸುರಕ್ಷತಾ ಸಾಧನಗಳೊಂದಿಗೆ ಭಾರತದ ಗ್ರಾಹಕರಿಗೆ ಇಷ್ಟವಾಗುವ ವಿಶ್ವಾಸವಿದೆ’ ಎಂದು ಕಿಯಾ ಮೋಟರ್ಸ್‌ ಕಾರ್ಪೊರೇಷನ್‌ನ ಅಧ್ಯಕ್ಷ ಹೊ ಸುಂಗ್‌ ಸಂಗ್‌ ಅವರು ಹೇಳಿದ್ದಾರೆ.

‘ಜಗತ್ತಿಗಾಗಿ ಭಾರತದಲ್ಲಿ ತಯಾರಾಗಿರುವ ಸಾನೆಟ್‌ ಪರಿಚಯಿಸಲು ಅತೀವ ಸಂತಸವಾಗುತ್ತಿದೆ. ಸೆಲ್ಟೋಸ್‌ ಮತ್ತು ಕಾರ್ನಿವಲ್‌ನ ಯಶಸ್ಸಿನ ಬಳಿಕ, ಇದನ್ನು ನೀಡುತ್ತಿದ್ದೇವೆ’ ಎಂದು ಕಿಯಾ ಮೋಟರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕೋಖಿಯುನ್‌ ಶಿಮ್ ತಿಳಿಸಿದ್ದಾರೆ.

ಕೆಲವು ವೈಶಿಷ್ಟ್ಯ

* ಡೀಸೆಲ್‌ 6 ಸ್ಪೀಡ್‌ ಆಟೊಮೆಟಿಕ್‌ ಪವರ್‌ಟ್ರೇನ್‌

* ಇಂಟಲಿಜೆಂಟ್‌ ಮ್ಯಾನುಯಲ್‌ ಟ್ರಾನ್ಸ್‌ಮಿಷನ್‌

* 10.25 ಇಂಚು ಎಚ್‌ಡಿ ಟಚ್‌ಸ್ಕ್ರೀನ್‌ ವಿತ್‌ ನ್ಯಾವಿಗೇಷನ್‌, ಲೈವ್‌ ಟ್ರಾಫಿಕ್‌

* ಸ್ಮಾರ್ಟ್‌ ಏರ್‌ ಪ್ಯೂರಿಫೈಯರ್‌ ವಿತ್ ವೈರಸ್‌ ಪ್ರೊಟೆಕ್ಷನ್

* ಓವರ್‌ ದಿ ಏರ್‌ ಮ್ಯಾಪ್‌ ಅಪ್‌ಡೇಟ್ಸ್‌

* ವಯರ್‌ಲೆಸ್‌ ಸ್ಮಾರ್ಟ್‌ಫೋನ್‌ ಚಾರ್ಜರ್‌

* 6 ಏರ್‌ಬ್ಯಾಗ್‌

* ಎಬಿಎಸ್‌, ಇಬಿಡಿ, ಇಎಸ್‌ಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು