ನವದೆಹಲಿ: ಎಂಜಿ ಮೋಟರ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಎಸ್ಯುವಿ ಹೆಕ್ಟರ್ನ ಹೊಸ ಆವೃತ್ತಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಇದರ ಎಕ್ಸ್ ಷೋರೂಂ ಬೆಲೆ ₹ 14.51 ಲಕ್ಷದಿಂದ ಆರಂಭವಾಗುತ್ತದೆ.

ಹೆಕ್ಟರ್ ಶೈನ್ ಆವೃತ್ತಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಎಂಜಿನ್ ಮಾದರಿಯು ಮ್ಯಾನುಯಲ್ ಮತ್ತು ಸಿವಿಟಿ ಟ್ರಾನ್ಸ್ಮಿಷನ್ನಲ್ಲಿ ಲಭ್ಯವಿದ್ದರೆ, ಡೀಸೆಲ್ ಮಾದರಿಯು ಕೇವಲ ಮ್ಯಾನುಯಲ್ 6 ಸ್ಪೀಡ್ ಟ್ರಾನ್ಸ್ಮಿಷನ್ ಅಲ್ಲಿ ಮಾತ್ರವೇ ಲಭ್ಯವಿದೆ.

ಎಲೆಕ್ಟ್ರಿಕ್ ಸನ್ರೂಫ್, 17 ಇಂಚು ಅಲಾಯ್ ವೀಲ್ಸ್, ಆ್ಯಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೊ ಇರುವ 26.4 ಸಿ.ಎಂ. ಎಚ್ಡಿ ಟಚ್ಸ್ಕ್ರೀನ್ ಎವಿಎನ್ ಸಿಸ್ಟಂನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಹೆಕ್ಟರ್ನ ಎರಡನೇ ವರ್ಷಾಚರಣೆಯ ಸಂದರ್ಭದಲ್ಲಿ ಎಂಜಿ ಕುಟುಂಬಕ್ಕೆ ಹೊಸ ಸದಸ್ಯನನ್ನು ಸ್ವಾಗತಿಸಲು ಇದು ಒಂದು ಉತ್ತಮ ಅವಕಾಶ ಎಂದು ಕಂಪನಿಯ ಭಾರತದ ಸಿಸಿಒ ಗೌರವ್ ಗುಪ್ತಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.