ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಲು ವಿನ್‌: ಬುಕಿಂಗ್‌ ಶುರು

Published 30 ಏಪ್ರಿಲ್ 2023, 21:52 IST
Last Updated 30 ಏಪ್ರಿಲ್ 2023, 21:52 IST
ಅಕ್ಷರ ಗಾತ್ರ

ಬೆಂಗಳೂರು: ಯುಲು ಇಂಡಿಯಾ ಕಂಪನಿಯು ದೇಶದ ಮಾರುಕಟ್ಟೆಗೆ ‘ವಿನ್‌’ ಎಂಬ ಎಲೆಕ್ಟ್ರಿಕ್‌ ದ್ವಿಚಕ್ರವಾಹನ ಬಿಡುಗಡೆ ಮಾಡಿದೆ. ಸೀಮಿತ ಅವಧಿಗೆ ಇದರ ಪರಿಚಯಾತ್ಮಕ ಬೆಲೆ ₹ 55,555 ಇದೆ. ಆ ಬಳಿಕ ಬೆಲೆಯು ₹59,999 ಆಗಲಿದೆ ಎಂದು ಕಂಪನಿ ಹೇಳಿದೆ.

ಸದ್ಯ ಬೆಂಗಳೂರಿನಲ್ಲಿ ಮಾತ್ರವೇ ಲಭ್ಯವಿದ್ದು, ಶೀಘ್ರವೇ ಬೇರೆ ನಗರಗಳಲ್ಲಿಯೂ ಲಭ್ಯವಾಗಲಿದೆ. ಟೆಸ್ಟ್‌ ಡ್ರೈವ್‌ ಅವಕಾಶವನ್ನೂ ಕಂಪನಿ ನೀಡಿದ್ದು ಜಾಲತಾಣದ ಮೂಲಕ ಆ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದೆ.

ಯುಲು ಆ್ಯಪ್‌ ಅಥವಾ ಜಾಲತಾಣದ ಮೂಲಕ ₹ 999 ಪಾವತಿಸಿ ಬುಕಿಂಗ್ ಮಾಡಬಹುದು. ಮೇ ತಿಂಗಳ ಮಧ್ಯಭಾಗದಿಂದ ವಿತರಣೆ ಆರಂಭ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಬಜಾಜ್ ಆಟೊ ಲಿಮಿಟೆಡ್‌ನ ಅಂಗಸಂಸ್ಥೆಯಾಗಿರುವ ಸಿಟಿಎಲ್‌, ಯುಲು ವಾಹನವನ್ನು ತಯಾರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT